Monday 5 July 2021

ಎರಡುವರೆ ಸಾವಿರ ಎಕ್ರೆಯಿಂದ ಒಂದೂವರೆ ಲಕ್ಷ ಆದಾಯ . ಗೇರು ತೋಟದ ಕಥೆಯಲ್ಲ ವ್ಯಥೆ..!



ಬರಹ : ಷಣ್ಮುಖ ಕಟ್ಟ- ಅಗ್ರಿಕಲ್ಚರ್ ಡೆಸ್ಕ್

ಮನೆಯ ಹತ್ತಿರ ಅಂದರೆ ಅರಂತಕಲ್ಲು ಇದು ಮಂಗಳೂರಿನ ಕಡಬ ತಾಲೂಕಿನ ಬಲ್ಪ ಗ್ರಾಮದ ಬೀದಿಗುಡ್ಡೆ ಎಂಬಲ್ಲಿ ಬರುತದೆ .ಇದು ಕರ್ನಾಟಕ ಸರಕಾರದ ಗೇರುತೋಟ ನಿಗಮದ ಗೇರುತೋಟ ನೆಡುತೋಟ ವಾಗಿದೆ .ಇದು ಸುಮಾರು ೨೫೦೦ ಎಕರೆ ಇದ್ದು.ಫಲವಾತಾದ ಮಣ್ಣು ಇದಾಗಿದೆ .ಇದರಲ್ಲಿ ಹಿಂದೆ ನಮ್ಮ ಪೂರ್ವಜರು ರಾಗಿ ದವಸಧಾನ್ಯ ಸಿರಿಧಾನ್ಯ ಇತ್ಯಾದಿ ಬೆಳೆದಿರುವ ಕುರುಹು ಗಳಿವೆ ಮತ್ತು ನಮ್ಮ ಹಿರಿಯರಿಂದ ಇದನ್ನು ಕೇಳಿ ತಿಳಿದು ಕೊಂಡಿದ್ದೇನೆ .ಮುಖ್ಯ ವಾಗಿ ನನ್ನ ಅಜ್ಜ ದಿವಂಗತ ಮಾಯಿಲಪ್ಪ ಗೌಡ ಮತ್ತು ದಿವಂಗತ ಕಟ್ಟ ನೊಣಪ್ಪ ಗೌಡ ರಿಂದ .ನಂತರ ಇದು ಭಾರತೀಯ ತಳಿ ಮಲೆನಾಡು ಗಿಡ್ಡ ದನಗಳು , ಎಮ್ಮೆ ,ಕೋಣ ಗಳು ಮೇಯುವ ಗೋಮಾಳ ವಾಗಿತ್ತು .ನಂತರ ಇದನ್ನು ಗೇರು ತೋಟ ನಿಗಮ ಗೇರು ತೋಟ ವನ್ನು ಆಗಿ ಮಾಡಿತ್ತು .ನಂತರ ಊರಿನ ಜನರು ಅದರಲ್ಲಿ ಕೂಡ ಕೆಲವು ವರ್ಷ ಗಳ ತನಕ ಮಲೆನಾಡು ಗಿಡ್ಡ ದನ,ಎಮ್ಮೆ ,ಕೋಣ ಗಳನ್ನು ಮೇಯುಸಿತಿದ್ದರು .ನಾನು ಶಾಲಾ ರಜಾ ಸಮಯದಲ್ಲಿ ಅಲ್ಲಿ ಕಟ್ಟ ಶೇಷಪ್ಪ ಮಾಸ್ತರು ರವರೊಟ್ಟಿಗೆ ಎಮ್ಮೆ ಮೇಯೆಸಲು ಹೋಗುತಿದ್ದೆ ,ಅಲ್ಲಿ ಆಲದ ಮರಕ್ಕೆ ಉಯ್ಯಾಲೆ ಹಾಕಿ ಆಟವಾಡುತಿದ್ದ ಗಮ್ಮತ್ತೆ ಬೇರೆ .ಅಲ್ಲಿ ಮಲೆನಾಡು ಗಿಡ್ಡ ದನ ,ಎಮ್ಮೆ ,ಕೋಣ ಗಳು ಪ್ರಕೃತಿಯಲ್ಲಿ ಹುಲ್ಲು ತಿಂದು ಗುಂಡಿಗಳಲ್ಲಿ(ಪಲ್ಲ ) ದ ನೀರು ಕುಡಿಯುತಿರುವ ಸೌನ್ದರ್ಯ ವನ್ನು ನೋಡುವ ಸೌಭಾಗ್ಯ ನಮ್ಮ ಮುಂದಿನ ಪೀಳಿಗೆ ಮಕ್ಕಳಿಗೆ ಇಲ್ಲವಲ್ಲ .ಅದುವೇ ನನಗೆ ಮತ್ತು ನಮ್ಮ "ಅಗ್ರಿಕಲ್ಚರ್ ಡೆಸ್ಕ್ " ತಂಡಕ್ಕೆ ದುಃಖ್ಖ .ಈಗಾ ಪ್ರಸ್ತುತ ಆ ಅರಾಂತಕಲ್ಲು ಗೇರು ತೋಟದಿಂದ ನಿಗಮಕ್ಕೆ ಹೆಚ್ಹೆಂದರೆ ೧.೫ ಲಕ್ಷ ಆದಾಯ ಬರುವುದು ಕೇವಲ ಸುಮಾರು ೨೫೦೦ ಎಕರೆ ಇಂದ!!!ನನ್ನ ಮತ್ತು ನಮ್ಮ "ಅಗ್ರಿಕಲ್ಚರ್ ಡೆಸ್ಕ್ " ತಂಡದ ಅಭಿಪ್ರಾಯ ವೇನೆಂದರೆ ಆ ೨೫೦೦ ಎಕರೆ ಯಲ್ಲಿ ಆರೋಗ್ರ್ಯಕ್ಕೆ ಪೂರಕವಾದ ನೈಸರ್ಗಿಕ ಗೋ ಆಧಾರಿತ ಬತ್ತ ,ಬೇಳೆಕಾಳು ,ದವಸಧಾನ್ಯ ,ಸಿರಿದಾನ್ಯ ,ಹಣ್ಣು ಹಂಪಲು ,ದೇಸಿ ದನದ ಸಾಕಣೆ ,ದೇಸಿದನಗಳು ಸ್ವಚಂದ ಆಗಿ ಮೇಯಲು ಪ್ರದೇಶ , ನಮ್ಮ "ಅಗ್ರಿಕಲ್ಚರ್ ಡೆಸ್ಕ್ " ತಂಡ ದ ಬಹು ಆಕಾಂಕ್ಷೆ ಉದ್ದೇಶ "ಪರಿಸರ ಶಾಲೆ " ಯನ್ನು ಅಲ್ಲಿ ಮಾಡ ಬಹುದು .ಈ ಬಗ್ಗೆ ಸಂಬಂಧ ಪಟ್ಟವರು ಉತ್ತರಿಸುವರೇ .ಸರಕಾರ ದಿಂದ ನೈಸರ್ಗಿಕ ಆರೋಗ್ಯಕ್ಕೆ ಪೂರಕವಾದ ಆಹಾರ ಬೆಳೆ ಗಳನ್ನು ಬೆಳೆಯಲು ಬೇರೆಯವರಿಗೆ ಲೀಸ್ ಅಥವಾ ಸರಕಾರದ ವತಿಯೆಂದ ಮಾಡಬಹುದಲ್ಲ .
ಇದರಿಂದ ಸರಕಾರಕ್ಕೆ ಈಗ ಬರುತಿರುವ ಗೇರಿನ ಆದಾಯ ೧.೫ ಲಕ್ಷ ಗಿಂತ ಎಷ್ಟೋ ಪಟ್ಟು ಹೆಚ್ಚು ಬಂದು ನಮ್ಮ ದೇಶದ ಜನರು ಆರೋಗ್ಯಕ್ಕೆ ಪೂರಕವಾದ ನೈಸರ್ಗಿಕವಾಗಿ ಬೆಳೆದ ಸಸ್ಯಾಹಾರ ತಿನ್ನ ಬಹುದಲ್ಲ .
"ಆ ಪ್ರದೇಶ ವನ್ನು ನೋಡಲು ನೀವು ಬಂದ್ರೆ ಅದರ ಸೌನ್ದರ್ಯ ವನ್ನು ಹೇಳತೀರದು ಒಂದು ಕಡೆ ಕಾಡು ರಕ್ರ್ಶಿತಾರಣ್ಯ ಇನ್ನೊಂದು ಕಡೆ ಸ್ವಚಂದ ವಾಗಿ ಹರಿಯುತ್ತಿರುವ ಕುಮಾರ ಧಾರಾ ನದಿ ಅಲ್ಲಿರುವ ಮೀನು ,ಜಲಚರ ಗಳನ್ನು ನೋಡಲು ಕಣ್ಣು ಗಳೇ ಸಾಲದು .ಇನ್ನೊಂದು ಕಡೆ ಕಾಡು ಅದನ್ನು ಈಗ ಕಡಿದು ಕೃಷಿ ,ಮನೆ ಮಾಡಲಾಗಿದೆ .ಮದ್ಯದಲ್ಲಿ ೨೫೦೦ ಎಕರೆ ವಿಶಾಲವಾದ ಜಾಗ ಹಿಂದೆ ಎದು ಗೋಮಲ .ಇಲ್ಲಿನಾನು ಮೊದಲು ಹೇಳಿದ "ಅಗ್ರಿಕಲ್ಚರ್ ಡೆಸ್ಕ್ " ನ ಉದ್ದೇಶ ವನ್ನು ಮಾಡಲು ನೀರಾವರಿಗೆ ತೊಂದರೆ ಇಲ್ಲ.ಪ್ರಕೃತಿ ದತ್ತ ವಾದ ಕುಮಾರಧಾರ ನದಿ ಇದೆ.ಅಲ್ಲಿ ನೀರಿಗೆ ಎಂಥಹ ನೀರಿನ ಬರಗಾಲ ಬಂದರೂ ಅಲ್ಲಿ ನೀರು ಕಡಿಮೆ ಯಾಗಲು ಸಾಧ್ಯವಿಲ್ಲ .ನದಿಯಲ್ಲಿ ತುಂಬಾ ಆಳವಾದ ನೀರಿನ ಕಯ ಗಳಿವೆ .ಉದಾಹರಣೆ ನಾಕೂರು ಕಯ .ಆ ಪ್ರದೇಶಕ್ಕೆ ಸುಮಾರು ೧ km ದೂರದಲ್ಲಿ ದಕ್ಷಿಣ ಭಾರತದಲ್ಲೇ ನೋಡಲು ಅಪರೂಪವಾದ ಕಲ್ಲಿನ ದೇವಾಲಯ ೧೨೦೦ ವರ್ಷ ಗಳ ಹಿಂದಿನ ದೇವಾಲಯ ಕದಂಬ ಬ್ರಾಹ್ಮಣ ರಾಜ ವಂಸಷ್ಟರು ಕಟ್ಟಿದ ದೇವಾಲಯ "ತ್ರೀ ಶೂಲಿನಿ " ದೇವಾಲಯ .ಇಲ್ಲಿ ತ್ರೀ ಶೂಲಕ್ಕೆ ಪೂಜೆ ಮಾಡುತಿರುವುದು ವಿಶೇಷ, ದೇವಾಲಯವು ಸಂಪೂರ್ಣ ಶಿಲಾಮಯ ವಾಗಿದೆ ,ಇಂತಹ ಪ್ರದೇಶ ವನ್ನು ನೋಡಲು ನಾನು ಹೇಳಿದ ಐಡಿಯಾ ಎಕ್ಸಿಕ್ಯೂಟ್ ಆದರೆ ದೂರ ದೂರ ದಿಂದ ವಿದೇಶ ದಿಂದಲೂ ಈ ಪ್ರದೇಶ ವನ್ನು ನೋಡಲು ಜನ ಬರಬಹುದು ,"
ಸಂಬಂಧ ಪಟ್ಟವರು ಇದಕ್ಕೆ ಉತ್ತರಿಸುವರೇ ??
ಹಾಗೆಯೆ ಮಾಡಲು ಹೊರಟರೆ "ಅಗ್ರಿಕಲ್ಚರ್ ಡೆಸ್ಕ್ " ತಂಡ ಸಹಾಯ ನೀಡುತ್ತದೆ .
ಇಂಥದೇ ಒಂದು ಪ್ರದೇಶ ಶರಊರಿನ ಆಲಂಕಾರು ಎಂಬಲ್ಲಿ ಇದೆ.
ನನ್ನ "ಪರಿಸರ ಶಾಲೆ" ಯ ಉದ್ದೇಶ
ನನಗೊಂದು ಕನಸು ಭಗವಂತ ನ ದಯೆಯೆಂದ ಈಡೇರಿದರೆ ಅದು ಸುಂದರ .. ಅಗ್ರಿಕಲ್ಚರ್ ಡೆಸ್ಕ್ ನಿಂದ "ಪರಿಸರ ಶಾಲೆ" ಸ್ಟಾರ್ಟ್ ಮಾಡಿ ಅಲ್ಲಿ ಮಕ್ಕಳಿಗೆ ಕಲಿಕೆ ಒಟ್ಟಿಗೆ ಪರಿಸರ , ಮರ ಗಿಡ ,ಪ್ರಾಣಿ ಪಕ್ಷಿ ,ಮಣ್ಣು , ಕೃಷಿ (ಪ್ರಾಚೀನ ಗೋ ಆಧಾರಿತ ಕೃಷಿ , ನೈಸರ್ಗಿಕ ಕೃಷಿ ) ಬಗ್ಗೆ ಕಲಿಸಬೇಕು .. ಮಕ್ಕಳು ಪ್ರಾಕ್ಟಿಕಲ್ ಆಗಿ ಹಾರೆ,ಪಿಕಾಸು ಹಿಡಿದು ಪ್ರಾಚೀನ ಗೋ ಆಧಾರಿತ ಕೃಷಿ , ನೈಸರ್ಗಿಕ ಕೃಷಿ ಮಾಡ ಬೇಕು . ನಾನು ಪ್ರಾಚೀನ ಗೋ ಆಧಾರಿತ ಕೃಷಿ ಬಗ್ಗೆ ಹೇಳಿದೆ ಏಕೆಂದರೆ ನಾನು ಎಲ್ಲೊ ಓದಿದ ನೆನಪು ಒಬ್ಬ ವಿದೇಶಿ ಅಧಿಕಾರಿ ಹಿಂದೆ(ನೂರಾರು ವರ್ಷ ಗಳ ಹಿಂದೆ ) ಹೇಳಿದ ಮಾತು ಭಾರತ ದ ಪ್ರಾಚೀನ ಗೋ ಆಧಾರಿತ ಕೃಷಿ ಪದ್ದತಿ ಯನ್ನು ಮುರಿದರೆ ಮಾತ್ರ ಭಾರತ ವನ್ನು ಮುರಿಯ ಬಹುದು ಎಂದು .
 







 
 
 
ಜೈ ಭಾರತ್
ಬದಲಾವಣೆ ಜಗದ ನಿಯಮ
ಪ್ರಕೃತಿ ನಿಯಮ
****ಅಗ್ರಿಕಲ್ಚರ್ ಡೆಸ್ಕ್ ತಂಡ ****

 

No comments:

Post a Comment