Wednesday 28 July 2021

ನೀರಿಗೆ ಬಜೆಟ್ ...!


 ಬರಹ: ಕೂಡಂಡ ರವಿ, ಹೊದ್ದೂರು, ಕೊಡಗು. 


 




ಸಾಕಷ್ಟು ಮಂದಿ ನೀರಿನ ಸದ್ಭಳಕೆ-ಕಲುಶಿತತೆಯ ಬಗ್ಗೆ ವೇದಿಕೆ ಸಿಕ್ಕೊಡನೆ ಉದ್ದುದ್ದ ಭಾಷಣ ಬಿಗಿಯುವರು. ಸಾಕಷ್ಟು ಮಂದಿ ಪುಕ್ಕಟೆ ಉಪದೇಶ ನೀಡುವುದರಲ್ಲಿ ನಿಸ್ಸೀಮರು. ನೀರಿನ ವಿಚಾರ ಬಂದಾಗಲೂ ಇದು ಕಟು ವಾಸ್ತವ.  ಇಂತಹ ಭಾಷಣಕಾರರು ತಾವು ನೀರಿನ ಉಳಿವಿನ ಬಗ್ಗೆ, ಕಲುಶಿತತೆ ನಿವಾರಣೆಯ ಬಗ್ಗೆ ತಾವೇನೂ ಮಾಡಿದ್ದೇವೆ ಎಂದು ಜನತೆಗೆ ತೋರಿಸಬೇಕು. ಬಳಿಕ ಅದನ್ನು ಎಲ್ಲರೂ ಅನುಸರಿಸುವಂತೆ, ಅನುಕರಿಸುವಂತೆ ಕರೆ ನೀಡಬೇಕು. ಆದರೆ, ಬಹುಪಾಲು ಆಗುತ್ತಿರುವುದೇ ಬೇರೆ. “ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ”...ಎಂಬAತೆ !

 ಭವಿಷ್ಯ ಕಠಿಣ

ಎಲ್ಲದಕ್ಕೂ ಸರಕಾರಗಳನ್ನೇ ನಂಬಿ ಕುಳಿತುಕೊಳ್ಳುವ ಬದಲು ಕೈಲಾದ ಮಟ್ಟಿಗೆ ಎಲ್ಲರೂ, ನೀರಿನ ವಿಚಾರದಲ್ಲಿ ಕಂಕಣ ಬದ್ಧರಾದಲ್ಲಿ ಸಮಸ್ಯೆ ಭವಿಷ್ಯದಲ್ಲಿ ಕಠಿಣವೆನಿಸಲಿಕ್ಕಿಲ್ಲ. ನಮಗೆ ನೀರು ಅತಿಯಾದಾಗ, ನೀರಿಗೆ ಬರ ಬಂದಾಗ ಮಾತ್ರ ನೀರು ನೆನಪಿಗೆ ಬರುವುದು ಸ್ವಾಭಾವಿಕ. ಆದರೆ, ನೀರು ಸಕಲ ಜೀವಚರಾಚರಗಳಿಗೆ ಮೂಲ. ಅದಕ್ಕಾಗಿ ಅದನ್ನು “ಜೀವಜಲ” ಎನ್ನುವರು. ಜಲವಿಲ್ಲದೆ ಜೀವವಿಲ್ಲ ! ಅದನ್ನು ಪುರಾಣ ಕಾಲದ ಋಷಿ ಮುನಿಗಳು ಚೆನ್ನಾಗಿ ತಿಳಿದಿದ್ದರು. 

 ಇದೇ ಹಿನ್ನೆಲೆಯಲ್ಲಿ ನಾವು “ಗಂಗೇಚ ಯಮುನೇಚಾ...ಶ್ಲೋಕ ಪಠಿಸುತ್ತೇವೆ. ಅವುಗಳನ್ನು ಭಕ್ತಿಭಾವದಿಂದ ಪೂಜಿಸುತ್ತೇವೆ. ಆರಾಧಿಸುತ್ತೇವೆ. ಆರ್ಘವನ್ನು ಅರ್ಪಿಸುತ್ತೇವೆ. ಪಿಂಡ ಪ್ರಧಾನ ಮಾಡುತ್ತೇವೆ. ಎಲ್ಲದಕ್ಕೂ ನೀರೇ ಮೂಲ. ಅಲ್ಲವೇ ? ಆದರೂ, ನಾವು ನೀರಿನ ಬಗ್ಗೆ ಇಲ್ಲ ಸಲ್ಲದ ತಾತ್ಸಾರ ಮನೋಭಾವನೆ ತೆಳೆದಿರುವೆವು ! ಕೃಷಿಯಂತೂ ನೀರಿಲ್ಲದ ಇಲ್ಲವೇ ಇಲ್ಲ.  ಬರೇ ನೀರನ್ನೇ ಬಳಸಿ ಮಾಡುವ ಕೃಷಿಯೂ ಇದೆ ! (ಮಣ್ಣು ರಹಿತ !) ಆದರೂ, ನೀರನ್ನು ವ್ಯರ್ಥ ಪೋಲು ಮಾಡುತ್ತೇವೆ. ಇದರ ಅರಿವು ಬಹುತೇಕರಿಗೆ ಇಲ್ಲ. ಇದ್ದರೂ ಅದು ಕೇವಲ ಭಾಷಣಗಳಿಗಷ್ಟೇ ಸೀಮಿತ !? 


ನೀರಿನ ಬರ ಎಷ್ಟು ಭೀಕರ !

ನಮ್ಮ ದೇಶದಲ್ಲಿ ೪೦ ಲಕ್ಷ ಮಂದಿ ನೀರಿನ ಕೊರತೆ, ನೈರ್ಮಲ್ಯರಹಿತ ನೀರಿನ ಬಳಕೆಯಿಂದ ಸಾಯುತ್ತಿದ್ದಾರೆ. ನಮ್ಮ ದೇಶದ ೧೦೦ ಮಿಲಿಯನ್ ಮಕ್ಕಳಿಗೆ ಮನೆಯಲ್ಲಿ ಕುಡಿಯಲು ಶುದ್ಧ ನೀರಿಲ್ಲ !? ವಿಶ್ವದ  ಸರಿಸುಮಾರು ೨.೨ ಶತಕೋಟಿ ಜನತೆಗೆ ಕುಡಿಯುವ ನೀರಿನ ಕೊರತೆ ಇದೆ. ೩ ಬಿಲಿಯನ್ ಜನತೆಗೆ ಕೈ ತೊಳೆಯಲು ನೀರಿಲ್ಲ. 

ನಮ್ಮ ರಾಜ್ಯದ ಸಮಸ್ಯೆಯೇನು ? 

ಮೈಸೂರು ಜಿಲ್ಲೆಯ ೧೩ ಹಳ್ಳಿಗಳಲ್ಲಿ ಇನ್ನೂ ಕುಡಿಯುವ ನೀರಿನ ಸೌಲಭ್ಯವಿಲ್ಲ. ಕೊಡಗಿನ ಬಹುಪಾಲು ಹಳ್ಳಿ ಪಟ್ಟಣಗಳು ಕಾವೇರಿ ನದಿಯ ದಂಡೆಯಲ್ಲಿವೆ. ಅದರೂ, ಅವುಗಳಲ್ಲಿ ಹೆಚ್ಚಿನ ಪಟ್ಟಣಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ ! ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು ಕೃಷಿಗೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವರು. ಉದಾಹರಣೆಗಾಗಿ ಹಾರಂಗಿ ಜಲಾಶಯದ ಕೆಳಭಾಗದ ಜನತೆಯ ಕೃಷಿಗೆ ನೀರೇ ಇಲ್ಲ. ಹೇಮಾವತಿ ಜಲಾಶಯದ ಕೆಳ ಭಾಗ ಅಂದರೆ, ತುಮಕೂರು ಜಿಲ್ಲೆಯ ಬಹುಪಾಲು ಕೆರೆಗಳನ್ನು ತುಂಬಿಸಲು ಹೇಮಾವತಿ ಜಲಾಶಯದಿಂದ ನೀರನ್ನು ಹರಿಸುತ್ತಿಲ್ಲ, ನಮ್ಮ ಸರಕಾರಗಳು ! ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯಾವ ಸರಕಾರಗಳು ಪ್ರಯತ್ನಿಸುತ್ತಿಲ್ಲ. ಜನತೆಯ ಪ್ರತಿಭಟನೆ ಮುಗಿಲು ಮುಟ್ಟಿದರೂ, ಜನಪ್ರತಿನಿಧಿಗಳ ಕಿವುಡರಾಗಿದ್ದಾರೆ !

ಇದರಿಂದ ಆ ಭಾಗದ ರೈತರಿಗೆ ಕೃಷಿಗೆ ಹೋಗಲಿ, ಕುಡಿಯಲು ನೀರಿಲ್ಲ. ಬೆಂಗಳೂರಿಗರಿಗೂ ಕುಡಿಯುವ ನೀರಿಲ್ಲ ! ಉತ್ತರ ಕರ್ನಾಟಕದ ಹಳ್ಳಿ-ಪಟ್ಟಣಗಳಲ್ಲಿ ನಾಲ್ಕಾರು ದಿನಗಳಿಗೊಮ್ಮೆ ನಲ್ಲಿಗಳಲ್ಲಿ ನೀರು ಬರುತ್ತದೆ ! ಅದನ್ನು ತುಂಬಿ ಇಡುವ ಸ್ಥಳ ಮತ್ತು ಪಾತ್ರೆ-ಪಗಡೆ ಇಡಲು ಪ್ರತೀ ವರ್ಷವೂ ಸಹಸ್ರಾರು ರೂಪಾಯಿ ಖರ್ಚು ಮಾಡುತ್ತಾರೆ. ಗದಗದ ಮಂದಿ !? ಮಹರಾಷ್ಟçದ ಬುದ್ರಕ್ ಎಂಬ ಊರಿನಲ್ಲಿ ಅತೀ ಕಡಿಮೆ ಮಳೆ ಬರುತ್ತದೆ.( ಈ ಊರು ಗೋಲಗುಂಬಜ್‌ನಿAದ ೧೫ ಕಿಲೋ ಮೀಟರ್ ದೂರದಲ್ಲಿದೆ) ಅಲ್ಲಿ ಇಡೀ ವರ್ಷಕ್ಕೆ ಮಲೆನಾಡಿನಲ್ಲಿ ಒಂದು ದಿನ ಬರುವ ಮಳೆಗಿಂತ ಕಡಿಮೆ ಮಳೆ ಬರುತ್ತದೆ. ಸುಮಾರು ೮- ೯ ಇಂಚು. ಆದರೆ, ಮಲೆನಾಡಿನಲ್ಲಿ ದಿನಕ್ಕೆ ೧೦-೧೫ ಇಂಚು ಮಳೆ ಬರುತ್ತದೆ. (ಒಂದು ಇಂಚು ಅಂದರೆ, ನಾಲ್ಕು ಸೆಂಟಿಮೀಟರ್, ಅಥವಾ -೨೫.೪ ಮಿಲಿಮೀಟರ್). ಇಂತಹ ಊರಿನಲ್ಲಿಯೂ ನೀರು ಬಳಸಿ ಕೃಷಿ ಮಾಡುತ್ತಾರೆ. ನಮ್ಮ ಊರಿನಲ್ಲಿ (ಮಲೆನಾಡಿನಲ್ಲಿ) ಕೃಷಿಗೆ ನೀರು ಸಿಗುತ್ತಿಲ್ಲ ಎಂದು ಜನತೆ ಭತ್ತದ ಗದ್ದೆಗಳನ್ನು ಹಾಳುಬಿಟ್ಟಿದ್ದಾರೆ !).

  ನೀರಿನ ಕೊರತೆಯ ಜೊತೆಗೆ, ಬೆಂಗಳೂರು ನೀರಿನ ತೊಂದರೆಗಳು ಮತ್ತೊಂದು ಆಯಾಮವನ್ನು ಹೊಂದಿವೆ. ರಾಸಾಯನಿಕ ಮಾಲಿನ್ಯ. ಅಧ್ಯಯನದ ಆವಿಷ್ಕಾರಗಳು ಭೀಕರವಾದವು. ೭೩೫ ಮಾದರಿಗಳಲ್ಲಿ ೩೭೦ಕ್ಕೂ ಅಧಿಕ ಅಂತರ್ಜಲ ಕುಡಿಯಲು ಸೂಕ್ತವಲ್ಲ. ಅಂದರೆ ನಗರದ ೫೦% ಕ್ಕಿಂತ ಹೆಚ್ಚು ಕುಡಿಯುವ ನೀರು ಕುಡಿಯಲು ಸಾಧ್ಯವಿಲ್ಲ. ಅವುಗಳು ವಿಷಕಾರಿ ವಸ್ತುಗಳಿಂದ ಕೂಡಿದೆ. ಇಂತಹವುಗಳನ್ನು ಕುಡಿದ್ದಲ್ಲಿ ಖಾಯಿಲೆ ಖಚಿತ.


ವಿಶ್ವ ಮಹಾ ಯುದ್ಧ 

ಬೆಂಗಳೂರಿನ ಭಾಗದ ಜನತೆಗೆ ಕುಡಿಯುವ ನೀರಿನ ಪರಿಹಾರಕ್ಕಾಗಿ ನೇತ್ರಾವತಿ ನದಿಯ ಕೆಲ ಭಾಗದ ನೀರನ್ನು ಅತ್ತ ತಿರುಗಿಸಿ ಬಳಸುವ ಯೋಜನೆ ಇದೆ. ಸಮುದ್ರ ಸೇರುವ ನೀರನ್ನು ಕುಡಿಯಲು ಬಳಸುವುದರಲ್ಲಿ ತಪ್ಪೇನು ? ಎಂಬುದು ಕೆಲವರ ವಾದ. ಇದರಿಂದ ನೇತ್ರಾವತಿ ಬತ್ತಿಹೋಗುತ್ತದೆ ಎನ್ನುವರು ಕೆಲವರು. ಕರ್ನಾಟಕ-ತಮಿಳುನಾಡು ವಿಚಾರ ಹೆಚ್ಚಾಗಿ ರಾಷ್ಟೀಯ ಮಟ್ಟದಲ್ಲಿ ಚರ್ಚೆಯಾಗುವುದೇ ಕಾವೇರಿ ನೀರಿನಿಂದ. ನೀರಿನ ವಿಚಾರಗಳೇ ಹಲವಾರು ಸಮಸ್ಯೆಗಳ ಮೂಲ. ಇದು ತೃತೀಯ ವಿಶ್ವ ಮಹಾಯುದ್ಧಕ್ಕೆ ಕಾರಣವಾಗಬುದು ಎಂದು ಎಚ್ಚರಿಸಿದ್ದಾರೆ ಹಿರಿಯರು. ಅದರೂ, ನಾವು ಎಚ್ಚರಗೊಂಡAತಿಲ್ಲ !

ಜೀವಜಲ-ಇನ್ನೆಷ್ಟು ದಿನ ?

 ನೀರಿನ ಸಮಸ್ಯೆ ಇದೇ ರೀತಿ ಮುಂದುವರಿದ್ದಲ್ಲಿ ಕುಡಿಯುವ ನೀರಿಗಾಗಿ ಹಳ್ಳಿ-ಪಟ್ಟಣಗಳಲ್ಲಿ ನಡೆಯುತ್ತಿರುವ ಗಲಭೆಗಳು ವಿಶ್ವಮಟ್ಟ ತಲುಪಲು ಹೆಚ್ಚು ದಿನ ಬೇಕಿಲ್ಲ. ಶುದ್ಧ ಕುಡಿಯುವ ನೀರು ಮುಂಬರುವ ದಿನಗಳಲ್ಲಿ ಮರೀಚಿಕೆಯಾಗಲಿದೆ. ಹಲವಾರು ಊರುಗಳಲ್ಲಿ ಸೇನೆಯ ಸೇವೆ ಸಲ್ಲಿಸಿ ಬಂದ ಮಿತ್ರನೊಬ್ಬನ ಪ್ರಕಾರ ಕೊಡಗಿನ ಪ್ರತೀ ಊರಿನಲ್ಲಿ ಮಾತ್ರ ಕುಡಿಯಲು ಶುದ್ಧ ನೀರು ಸಿಗುತ್ತದೆ. ಇತರ ಕಡೆ ನೀರು ಕುಡಿಯಲು ಭಯವಾಗುತ್ತದೆ. ಬಾಟಲಿಯಲ್ಲಿ ಮಾರುವ ನೀರು ಕೂಡ ವಿಷಮಯವಾಗಿರುತ್ತದೆ. ಯಾವ ನೀರು ಕುಡಿಯಲಿ ಎಂದು ಜನತೆ ಗೊಂದಲದಲ್ಲಿದ್ದಾರೆ. ಇಂದು ಈ ಸಮಸ್ಯೆ ಬಹುತೇಕ ಕಡೆ ಇದೆ. ಆದರೆ, ನಮ್ಮ ಜನತೆ ಎಚ್ಚರವಾಗುತ್ತಿಲ್ಲ. ಸಮಸ್ಯೆ ಅವರ ಬುಡಕ್ಕೆ ಬಂದಾಗ ಮಾತ್ರ ಎಚ್ಚರವಾಗುವವರು ಕೆಲವರು ! ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ !

ಮಕ್ಕಳಿಗೂ ನೀರಿನ ಅರಿವು 

ನೀರಿನ ಬಗ್ಗೆ ಅರಿವಿಲ್ಲದೇ ಹಲವಾರು ನದಿಗಳು ಬೇಸಿಗೆ ಬತ್ತಿ ಹೋಗುತ್ತಿವೆ. ಅದನ್ನು ನಂಬಿಕೊAಡಿರುವ ಜಲಚರಗಳು ನಿರ್ವಂಶವಾಗುತ್ತಿವೆ. ಈ ಬಗ್ಗೆ ನಾವು ತಿಳಿದುಕೊಂಡು ಅದನ್ನು ಅನುಸರಿಸಬೇಕು. ಅದನ್ನು  ನಮ್ಮ ಮಕ್ಕಳಿಗೂ ತಿಳಿ ಹೇಳಬೇಕು. ಪ್ರತೀ ನೀರಿನ ಹನಿಯ ಮೌಲ್ಯವನ್ನು ಅವರಿಗೆ ತಿಳಿಸಬೇಕು. ಅದನ್ನು ಪಾಲಿಸುವಂತೆ ಅವರಿಗೆ ಮನವರಿಕೆ ಮಾಡಬೇಕಿದೆ. ಶಾಲಾ ಕಾಲೇಜುಗಳ ಪಠ್ಯದಲ್ಲಿ ಈ ಭಾಗವನ್ನು ಸೇರಿಸುವ ಅಗತ್ಯತೆ ಇದೆ. ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಪ್ರತೀ ಶಾಲಾ-ಕಾಲೇಜುಗಳಲ್ಲಿ ಮಳೆನೀರು ಕೊಯ್ಲುವಿನ ಪ್ರಾಯೋಗಿಕ ಪಾಠ ಜಾರಿ ಮಾಡಬೇಕಿದೆ. ನಮ್ಮ ಮನೆ-ಮನಗಳಲ್ಲಿ ಪ್ರತೀ ದಿನವೂ “ಜಲೋತ್ಸವ” ನಡೆಯಬೇಕು.ಸರಕಾರದ ವತಿಯಿಂದ ನಿರ್ಮಾಣವಾಗುವ ಎಲ್ಲಾ ಕಟ್ಟಡ-ಮನೆಗಳಲ್ಲಿ ಕಡ್ಡಾಯವಾಗಿ ಮಳೆಕೊಯ್ಲು ಅಳವಡಿಸಬೇಕಿದೆ.  

ನಾನು ಈ ಕುರಿತು ಪಠ್ಯಕ್ಕೆ ಯೋಗ್ಯವಾಗಬಹುದಾದ ಲೇಖನವನ್ನು ಬರೆದಿರುವೆ. ಬೆಂಗಳೂರಿನ ಮಿತ್ರರೊಬ್ಬರು ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು ! (ಈ ಲೇಖನ ನನ್ನ ಬ್ಲಾಗ್‌ನಲ್ಲಿದೆ. ನನ್ನ ಬ್ಲಾಗ್‌ನಲ್ಲಿನ ನೀರಿನ ಕುರಿತಾದ ಲೇಖನವನ್ನು ೫೦ ಸಾವಿರಕ್ಕೂ ಅಧಿಕ ಮಂದಿ ಓದಿರುವರು. ಬರೇ ಓದಿದರೆ ಸಾಲದು. ಅದನ್ನು ಅನುಸರಿಸುವ ಪ್ರಯತ್ನ ಪಡಬೇಕು.) 

 ನೀರಿನ ಮುಂಗಡ ಪತ್ರದ ಅಗತ್ಯ 

ನಾವು ಸಾಮಾನ್ಯ ಕೇಂದ್ರ ಮುಂಗಡಪತ್ರ, ರೈಲ್ವೆ ಮುಂಗಡ ಪತ್ರ, ರಾಜ್ಯ ಮುಂಗಡ ಪತ್ರ, ಕೃಷಿ ಮುಂಗಡ ಪತ್ರಗಳನ್ನು ಕೇಳಿರುವೆವು. ಆದರೆ, ಇಂದಿನ ಸಮಸ್ಯೆಗಳ ಸಮತೋಲನಕ್ಕಾಗಿ ನೀರಿನ ಮುಂಗಡ ಪತ್ರವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಂಡಿಸುವ ಅವಶ್ಯಕತೆ ಇದೆ. ಇದರಿಂದ ಪ್ರತಿ ಗ್ರಾಮ ಮಟ್ಟದಿಂದಲೇ ನೀರಿನ ಬಗ್ಗೆ ಅರಿವು ನೀರಿನ ಉಳಿವು ಮುಂತಾದವುಗಳು ಸಾಧ್ಯ. ಇವುಗಳು ಮೊಟ್ಟ ಮೊದಲಿಗೆ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾರಿಯಾಗಬೇಕಿದೆ. ಮನೆಯಲ್ಲಿಯೂ ನೀರಿನ ಮುಂಗಡ ಕಾಯ್ದಿರಿಸುವಿಕೆ ಮಾಡುವುದು ಉತ್ತಮ. ಹಲವಾರು ಕಡೆ ಮಳೆಗಾಲದಲ್ಲಿ ದೊರೆಯುವ ವಿಫುಲ ನೀರನ್ನು  ಸಂಗ್ರಹಿಸಿ, ಬೇಸಿಗೆ ದಿನಗಳಲ್ಲಿ ಬಳಸುವ ಪರಿಪಾಠವಿದೆ. ಈ ಯೋಜನೆಯು ಪ್ರತೀ ಗ್ರಾಮದ ಪ್ರತೀ ಮನೆಗೂ ತಲುಪಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ನೀರಿನ ಕ್ಲಬ್‌ಗಳ ಸಹಕಾರ ಅತ್ಯಗತ್ಯ. 

 ನೀರಿಲ್ಲದ ನಾಳೆ !

ನೀರಿಲ್ಲದ ನಾಳೆಯನ್ನು ನೀವು ಕಲ್ಪಿಸಿಕೊಳ್ಳಲೂ ಅಸಾಧ್ಯ. ನೀರು ಇದ್ದೆ ನಮ್ಮ ನೀರಿಗೆ ನಾವೇ ಪ್ರತೀ ಲೀಟರ್‌ಗೆ ೨೦ ರೂಪಾಯಿ ನೀಡಿ ಕುಡಿಯುತ್ತೇವೆ. ಹಲವಾರು ಬಹುರಾಷ್ಟೀಯ ಕಂಪೆನಿಗಳು ನಮ್ಮ ನೀರನ್ನು ನಮಗೆ ಮಾರಿ ಬಿಲಿಯನ್ ಹಣ ಸಂಪಾದಿಸುತ್ತಿವೆ. ನಾವೆಷ್ಟು ದಡ್ಡರು ! ಶೀಷೆಯಲ್ಲಿ ತುಂಬಿಸಿದ ವಿಷಭರಿತ ನೀರನ್ನು ತೀರ್ಥದಂತೆ ಕುಡಿಯುತ್ತೇವೆ. ಮುಂಬರುವ ವರ್ಷಗಳಲ್ಲಿ ಕುಡಿಯುವ ನೀರಿಗೆ ಪ್ರತೀ ಲೀಟರ್‌ಗೆ ೧೦೦ ರೂಪಾಯಿ ಆದರೂ ನೀವು ಅಚ್ಚರಿ ಪಡಬೇಕಿಲ್ಲ. ಹಲವಾರು ಕಡೆ ಶುದ್ಧ ನೀರು ದಂಧೆಯೇ ನಡೆಯುತ್ತಿದೆ. ಪ್ರತೀ ಲೀಟರ್ ನೀರು ಪೆಟ್ರೋಲಿಯಂಗಿAತಲೂ ದುಬಾರಿಯಾಗಲಿದೆ. ಇಂತಹ ದುರ್ದಿನಗಳು ತೀರಾ ಸಮೀಪದಲ್ಲಿವೆ. 

 ಹನಿ ನೀರು ದುಬಾರಿ !

ಆದುದರಿಂದ ಇಂದೇ ಪ್ರತೀ ಹನಿ ನೀರನ್ನು ಅರಿತು ಬಳಸೋಣ. ಅದನ್ನು ಸದ್ವಿನಿಯೋಗ ಮಾಡೋಣ. ಈ ವಿಚಾರವನ್ನು ನಾವೇಲ್ಲರೂ ಅನುಸರಿಸೋಣ. ಈ ಸಂದೇಶವನ್ನು ಇತರರಿಗೂ ಹಂಚೋಣ. ನೆಮ್ಮದಿ ನಾಳೆ ನಮ್ಮದಾಗಲಿ ಎಂದು ಆಶಿಸೋಣ. 


No comments:

Post a Comment