Sunday 4 July 2021

.ನಾವು ಆಹಾರ ಬೆಳೆ ಬೆಳೆಯುವ ಗದ್ದೆಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಶುರು ಮಾಡಿದ್ದು ವಿಪರ್ಯಾಸವೇ ಸರಿ.

ಇದು ನನ್ನ ಸ್ವಂತ ಅಭಿಪ್ರಾಯ ತಪ್ಪಾಗಿದ್ದರೆ ಕ್ಷಮಿಸಿ ..

 

 

ಐರ್ಲೆಂಡ್ ದೇಶದಲ್ಲಿ ಹಿಂದೆ ಹಣ ಬರುತ್ತದೆ ಎಂದು ಹೆಚ್ಚಿನವರು ಏಕ ಬೆಳೆ ಬೆಳೆದು ..ಹತ್ತು ಲಕ್ಷ ಜನರು ಆಹಾರದ ಕೊರತೆಯನ್ನು ಎದುರಿಸಿದರು .ಅದೇ ರೀತಿ ನಾವೂ ಕೂಡ ಏಕ ಬೆಳೆ ಆಹಾರ ಬೆಳೆ ಬೆಳೆಯಬಾರದು ವಿವಿಧ ಬೆಳೆಗಳನ್ನು ಬೆಳೆಯಬೇಕು .ಉದಾಹರಣೆಗಾಗಿ ಎಲ್ಲರೂ ಹೆಚ್ಚು ಹಣ ಬರುತ್ತದೆ ಎಂದು ವಾಣಿಜ್ಯ ಬೆಳೆಗಳನ್ನು ಬೆಳೆದರೆ ಏನಾಗಬಹುದು ?ಆದ್ದರಿಂದ ವಾಣಿಜ್ಯ ಬೆಳೆಗಳು ಬೇಕು ಉದಾಹರಣೆ ಅಡಿಕೆ ರಬ್ಬರ್ ಎಷ್


ಟು ಬೇಕೋ ಅಷ್ಟು ಇರಲಿ .ಅಡಿಕೆಯಲ್ಲಿ ಹೆಚ್ಚು ಆಕ್ಸಿಜನ್ ಸಿಗುವುದು ನಿಜ .ಆದರೆ ಆಕ್ಷಿಜನ್ ಸಿಗುತ್ತದೆ ಎಂದು ಎಲ್ಲರೂ ಅಡಿಕೆಯನ್ನೇ ಬೆಳೆದರೆ ಏನಾಗಬಹುದು ?ಹೊಸದಾಗಿ ಮಾಡುವುದು ಬೇಡ .ಇದ್ದ ಜಾಗದಲ್ಲಿ ಆಹಾರ ಬೆಳೆಗಳನ್ನು ನೈಸರ್ಗಿಕವಾಗಿ ವಿಷರಹಿತವಾಗಿ ಬೆಳೆಯುವ ..ಆರೋಗ್ಯಕ್ಕೆ ಪೂರಕವಾದ ನೈಸರ್ಗಿಕ ಬೆಳೆದ ಆಹಾರವನ್ನು ನಾವು ಕೂಡ ತಿನ್ನೋಣ ..ಎಲ್ಲರಿಗೂ ತಿನ್ನಿಸೋಣ.ನಾವು ಆಹಾರ ಬೆಳೆ ಬೆಳೆಯುವ ಗದ್ದೆಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಶುರು ಮಾಡಿದ್ದು ವಿಪರ್ಯಾಸವೇ ಸರಿ.ನಾನು ಇತ್ತೀಚೆಗೆ ಕೇಳಿಕೊಂಡ 1 ಸುದ್ದಿ ಘಟ್ಟ ಪ್ರದೇಶಗಳಲ್ಲಿ ಕೂಡ ಆಹಾರ ಬೆಳೆ ಭತ್ತ ಬೆಳೆಯುವ ಗದ್ದೆಗಳಿಗೆ ಮರಗಳನ್ನು ನೆಟ್ಟು ಕಾಫಿ ಬೆಳೆಯುತ್ತಿದ್ದರಂತೆ.ಶ್ರೀಗಂಧ ಬೆಳೆಸುತ್ತಿದ್ದಾರೆ .ಹೀಗೆ ಎಲ್ಲರೂ ವಾಣಿಜ್ಯ ಬೆಳೆಗಳ ಕಡೆಗೆ ಮುಖ ಮಾಡಿದರೆ ಮುಂದೆ ನಾವು ವಿಷ ರಹಿತವಾದ ಆರೋಗ್ಯಕ್ಕೆ ಪೂರಕವಾದ ನೈಸರ್ಗಿಕವಾಗಿ ಬೆಳೆದ ಆಹಾರ ದ ಕೊರತೆ ಎದುರಿಸಬಹುದು ನಮ್ಮ ದೇಶದಲ್ಲಿ . ಎಲ್ಲರೂ ಭವಿಷ್ಯದ ಭಾರತದ ಬಗ್ಗೆ ಸಕಾರಾತ್ಮಕ ವಾಗಿ ಚಿಂತನೆ ಮಾಡಿ.ಭವ್ಯ ಭಾರತವನ್ನು ಕಟ್ಟೋಣ .ಮುಂದಿನ ಪೀಳಿಗೆಗಾಗಿ ವಿಷರಹಿತ ಮಣ್ಣು ,ಸುಂದರ ಪರಿಸರವನ್ನು ಅವರಿಗಾಗಿ ಬಿಟ್ಟು ಹೋಗೋಣ . 

 

 

ಜೈ ಭಾರತ್ .

No comments:

Post a Comment