Thursday 15 July 2021

ದೊಡ್ಡ ಗಾಂಧಾರಿ ಮೆಣಸು... ಬರಹ:ಕೂಡಂಡ ರವಿ, ಕೊಡಗು.



ಬರಹ:ಕೂಡಂಡ ರವಿ, ಕೊಡಗು. 



ಗಾಂಧಾರಿ ಮೆಣಸನ್ನು ಹೋಲುವ ಇದು ದೊಡ್ಡ ಗಾತ್ರದ ಮೆಣಸು.  ಹಸಿರು ಬಣ್ಣದ ಕಾಯಿಗಳು, ಕೆಂಪು ಬಣ್ಣದ ಹಣ್ಣುಗಳು.
ಇದೇ ಜಾತಿಯ ನೀಲಿ ಮತ್ತು ಬಿಳಿ ಬಣ್ಣದ ದೊಡ್ಡ ಗಾತ್ರದ ಗಾಂಧಾರಿ ಮೆಣಸುಗಳ ತಳಿಗಳು ಸಹಾ ಇವೆ.  ‘ದೊಡ್ಡ ಗಾಂಧಾರಿ’ ಅಥವಾ ‘ದೊಡ್ಡ ಸೂಜಿಮೆಣಸು’. ಕಾಯಿ ಒಂದೂವರೆಯಿAದ ಒಂದೂ ಮುಕ್ಕಾಲು ಇಂಚು ಉದ್ದ. ತುದಿ ಚೂಪು. ತೀಕ್ಷ÷್ಣ ಖಾರ ಹೊಂದಿಲ್ಲ. ವಿಶಿಷ್ಟ ಪರಿಮಳ. ಚಟ್ನಿ,s ಸಂಡಿಗೆ, ಪಲ್ಯ, ಮಜ್ಜಿಗೆ ಹುಳಿಗೆ ಬಳಸಿದರೆ ಸ್ವಾದ ಇನ್ನೂ ಅಧಿಕ. ಹಣ್ಣಾದ ಕಾಯಿಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಬಳಸಬಹುದು. ಇದನ್ನು ಕೃಷಿ ಮಾಡಿ ಬೆಳೆಸುವವರು ಕಡಿಮೆ. ಹಕ್ಕಿಗಳು ತಿಂದು ಬೀಜ ಪ್ರಸಾರ ಮಾಡುವ ಮೂಲಕ ವಂಶಾಭಿವೃದ್ಧಿಯಾಗುತ್ತದೆ. ಜಾಗ ಕಡಿಮೆ ಇದ್ದವರು ಕುಂಡಗಳಲ್ಲಿ ಕೂಡ ಬೆಳೆಯಬಹುದು. ರೋಗ, ಕೀಟಬಾಧೆ ಇಲ್ಲ. ಗಿಡ ನೆಟ್ಟು ಮೂರು ತಿಂಗಳಲ್ಲಿ ಮೆಣಸು ಕೊಯ್ಯಬಹುದು. ಹೆಚ್ಚು ಆರೈಕೆ ಬೇಡದ ಸ್ವಾದಿಷ್ಟ ರುಚಿಯ ದೊಡ್ಡ ಗಾಂಧಾರಿಯನ್ನು ನೀವು ಸುಲಭವಾಗಿ ಬೆಳೆಯಬಹುದು. ಕೊಡಗು ಜಿಲ್ಲೆಯ ಹಲವಾರು ಕಡೆ ಕಾಫಿ ತೋಟಗಳಲ್ಲಿ ಮನೆಯ ಹಿತ್ತಲಲ್ಲಿ ಇದನ್ನು ಧಾರಾಳವಾಗಿ ಕಾಣಬಹುದು. ಇದನ್ನು ವಾಣಿಜ್ಯ ಉದ್ದೇಶಕ್ಕೆ ಬೆಳೆಯುವ ಪ್ರಯತ್ನ ಎಲ್ಲೂ ನಡೆದ ಉದಾಹರಣೆಗಳು ಕಾಣಬರುತ್ತಿಲ್ಲ. ವೈನ್‌ಗೂ ಇದನ್ನು ಬಳಸುತ್ತಿರುವರು. ಕಸಿಗಿಡಕ್ಕೆ ಬೇರು ಗಿಡವಾಗಿ (ಸ್ಟಾಕ್) ಆಗಿ ಬಳಸಬಹುದಾಗಿದೆ. ಚೆನ್ನಾಗಿ ಆರೈಕೆ ಮಾಡಿದ್ದಲ್ಲಿ ಹಲವಾರು ವರ್ಷಗಳ ಕಾಲ ನಿರಂತರವಾಗಿ ಫಸಲು ಪಡೆಯಬಹುದು. ಹೈಬ್ರಿಡ್ ಮೆಣಸುಗಳ ಭರಾಟೆಯಲ್ಲಿ ಈ ತಳಿ ಅಳಿವಿನಂಚಿನಲ್ಲಿದೆ.
ಆಸಕ್ತರು ಇದನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿದ್ದಲ್ಲಿ ಇದು ಮುಂದಿನ ಪೀಳಿಗೆಗೂ ವರ್ಗಾವಣೆಯಾದೀತು.

No comments:

Post a Comment