Saturday 3 July 2021

ರೈತರ ಬೆಳೆ ಗಳಾದ ತರಕಾರಿ ಬೇಳೆಕಾಳು ದವಸ ಧಾನ್ಯ ಗೆಡ್ಡೆಗೆಣಸು ಗಳ ಬೆಲೆ ಕಡಿಮೆಯಾಗಲು ಮತ್ತು ಬೇಡಿಕೆ ಇಲ್ಲದಿರಲು ನಾನು ಕೆಳಗಡೆ ವಿವರಿಸುವ ಕ್ರಮದಿಂದ ಕೂಡ ಆಗಿರಬಹುದು

 ರೈತರ ಬೆಳೆ ಗಳಾದ ತರಕಾರಿ ಬೇಳೆಕಾಳು ದವಸ ಧಾನ್ಯ ಗೆಡ್ಡೆಗೆಣಸು ಗಳ ಬೆಲೆ ಕಡಿಮೆಯಾಗಲು ಮತ್ತು ಬೇಡಿಕೆ ಇಲ್ಲದಿರಲು ನಾನು ಕೆಳಗಡೆ ವಿವರಿಸುವ ಕ್ರಮದಿಂದ ಕೂಡ ಆಗಿರಬಹುದು .ಮೂವತ್ತು ವರ್ಷಗಳ ಹಿಂದಿನಿಂದ ನನ್ನ ತಂದೆ ತರಕಾರಿ ಕೃಷಿ ಮಾಡುತ್ತಾ ಬರುತ್ತಿದ್ದರು .ಈಗ 2ವರ್ಷದಿಂದ ಬಿಟ್ಟಿದ್ದಾರೆ .ನಾನು ಮುಂದುವರಿಸುತ್ತಾ ಇದ್ದೇನೆ .ತಂದೆಯವರು ಕೆಮಿಕಲ್ ಕೃಷಿ ಮಾಡುತ್ತಿದ್ದರು .ನಾನು ಪ್ರಸ್ತುತ ನೈಸರ್ಗಿಕ ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ .ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ತರಕಾರಿಗಳನ್ನು ಖರೀದಿ ಮಾಡಲು ವ್ಯಾಪಾರಸ್ಥರು ಮನೆಗೆ ಬರುತ್ತಿದ್ದರು .ಈಗಲೂ ನನಗೆ ನೆನಪಿದೆ ಇಪ್ಪತ್ತೈದು ವರ್ಷದ ಹಿಂದೆ ಸುಳ್ಯ ತಾಲ್ಲೂಕಿನ ಪಂಜ ದ ಗೋವಿಂದ ಪೈ ರವರು ಅವರ ಬೇಕರಿ ಮತ್ತು ತರಕಾರಿ ಅಂಗಡಿ ಈಗಿರುವ ಪಂಜ ಬಸ್ ಸ್ಟಾಂಡಿನ ಹಿಂದಿನ ಹಳೆಯ ಕಟ್ಟಡದಲ್ಲಿತ್ತು .ಅವರು ತರಕಾರಿಯ ಡಿಮಾಂಡ್ ಹೆಚ್ಚಿದಾಗ ಮನೆಗೆ ಬಂದು ತರಕಾರಿ ಕೊಂಡು ಹೋದ ನೆನಪು ನನಗೆ ಈಗಲೂ ಇದೆ .ನಮಗೆ ವರ್ಷದಲ್ಲಿ ಮೂವತ್ತರಿಂದ ನಲವತ್ತು ಕಿಂಟ್ವಾಲ್ ಬದನೆಕಾಯಿ ಮಾತ್ರವೇ ಆಗುತ್ತಿತ್ತು ಬೆಂಡೆಕಾಯಿ ತೊಂಡೆಕಾಯಿ ಹರಿವೆ ಊರು ಸೌತೆ ಮುಳ್ಳುಸೌತೆ ಹಾಗಲಕಾಯಿ ಹೀರೆಕಾಯಿ ಹೀಗೆ ಹಲವಾರು ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತಿತ್ತು .ನನ್ನ ತಂದೆ ಒಬ್ಬರಲ್ಲ ಊರಿನಲ್ಲಿ ಹಲವಾರು ಮಂದಿ ವ್ಯಾಪಾರಕ್ಕೋಸ್ಕರ ತರಕಾರಿಗಳನ್ನು ಬೆಳೆಯುತ್ತಿದ್ದರು .ಆದರೂ ಎಲ್ಲರ ತರಕಾರಿಗಳು ಸೇಲ್ ಆಗುತ್ತಿತ್ತು ನಮ್ಮ ಹತ್ತಿರದ ಪೇಟೆ ಗಳಲ್ಲಿ .ನಾನು ಕೂಡ ಶಾಲೆಗೆ ಹೋಗುವಾಗ ತಂದೆಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ .ನನಗೆ ಕೃಷಿಯಲ್ಲಿ ಆಸಕ್ತಿ ಬರಲು ತಂದೆ ಕಾರಣ .ಈಗ ಮಾಂಸ ಆಹಾರಕ್ಕಾಗಿ ಬೇಡಿಕೆ ಹೆಚ್ಚಿದ್ದು ಸಸ್ಯ ಆಹಾರಕ್ಕೆ ಬೇಡಿಕೆ ಕುಸಿದಿದೆ .ಇದರಿಂದ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಬೇಡಿಕೆ ಕುಸಿಯಲು ಇದೂ 1 ಕಾರಣ ಇರಬಹುದು .ಈಗ ಕೆಲವು ಮನೆಗಳಲ್ಲಿ ವಾರದ ಎಲ್ಲಾ ದಿನಗಳಲ್ಲಿ ಮಾಂಸ ಆಹಾರ ಮಾಡುವವರಿದ್ದಾರೆ .ಹಿಂದೆ 2 ತಿಂಗಳಿಗೊಮ್ಮೆ ಅದು ಇಲ್ಲ ಯಾರಾದ್ರು ನೆಂಟರು ಬಂದರೆ ಮಾತ್ರ ಊರಿನ ಕೋಳಿ ಸಾರು .ಉಳಿದ ಎಲ್ಲ ದಿನಗಳಲ್ಲಿ ತರಕಾರಿ ಪದಾರ್ಥ . ಹೀಗೆ ಮುಂದುವರಿದರೆ ಮುಂದಿನ ವರ್ಷಗಳಲ್ಲಿ ಮಾಂಸ ಆಹಾರ 1 ಎಲ್ಲರ ಫ್ಯಾಷನ್ ಆಗಬಹುದು . ಸಸ್ಯ ಆಹಾರ ಪ್ರಾಚೀನ ಕಾಲದಿಂದಲೂ ತಿನ್ನುತ್ತಿದ್ದ ವರ್ಗದವರು ಮಾತ್ರ ತಿನ್ನುವ ಪರಿಸ್ಥಿತಿ ಬರಬಹುದು .ಶುದ್ಧ ಸಸ್ಯ ಆಹಾರದ ಕೊರತೆ ಉಂಟಾಗಬಹುದು .ನನ್ನ ಫ್ರೆಂಡ್ ಫ್ರಾನ್ಸಿನ ನೀಸ್ ನಲ್ಲಿ ಕೆಲಸ ಮಾಡು ತ್ತಿದ್ದ ಅವನು ಹೇಳುತ್ತಿದ್ದ ಅಲ್ಲಿ ಮಾಂಸ ಆಹಾರ 1 ಫ್ಯಾಷನ್ ಆಗಿದೆ ಅಂತೆ .ದಿನದ ಹೆಚ್ಚಿನ ಹೊತ್ತು ಗಳಲ್ಲಿ ಮಾಂಸ ಆಹಾರವನ್ನು ತಿನ್ನುವವರು ಜಾಸ್ತಿಯಂತೆ .ನಾನು ಯಾರಿಗೂ ಕೂಡ ಮಾಂಸ ಆಹಾರವನ್ನು ತ್ಯಜಿಸಲು ಹೇಳುತ್ತಿಲ್ಲ .ನಾನು ಮಾತ್ರ ಮಾಂಸ ಆಹಾರ ಉತ್ತಮಇಲ್ಲ ಎಂದು ತಿಳಿದು ತ್ಯಜಿಸಿದ್ದೇನೆ .ಸುಭಾಷ್ ಪಾಳೇಕರ್ ಅವರು ಹೇಳುತ್ತಾರೆ ಅವರ ಜೀವಾಮೃತ ನೈಸರ್ಗಿಕ ಕೃಷಿಗೆ ಸಸ್ಯ ಆಹಾರ ಮಾನವನ ಮೂತ್ರವನ್ನು ಕೂಡ ಬಳಸಬಹುದು ಎಂದು ಹೇಳಿದ್ದಾರೆ .ಆದ್ದರಿಂದ ಅವರು ಸಸ್ಯ ಆಹಾರ ಉತ್ತಮವೆಂದು ಕಂಡು ಕೊಂಡಿದ್ದಾರೆ .ನನ್ನ ಚಿಂತನೆ ಪ್ರಕಾರ ಪ್ರಕೃತಿ ಶಕ್ತಿ ಮಾನವ ಎಂಬ ಪ್ರಾಣಿಯನ್ನು ಸೃಷ್ಟಿಸಿದ್ದು ಸಸ್ಯ ಆಹಾರ ತಿನ್ನಲು ಎಂಬುದು ನನ್ನ ಅನಿಸಿಕೆ .ಮಾಂಸ ಆಹಾರ ತಿನ್ನುವ ಪ್ರಾಣಿಗಳಿಗೆ ಚೂಪಾದ ಕೋರೆ ಹಲ್ಲುಗಳಿವೆ ಉದಾಹರಣೆ ಹುಲಿ .ನೀವು ಸಸ್ಯ ಆಹಾರಿ ಪ್ರಾಣಿಗಳ ಹಲ್ಲುಗಳ ರಚನೆಯನ್ನು ನೋಡಿ ಚೂಪಾದ ಕೋರೆಹಲ್ಲುಗಳು ಇಲ್ಲ ಉದಾಹರಣೆ ಮಾನವ ಜಾನುವಾರು ಮಂಗ ಇತ್ಯಾದಿ .ವಿಜ್ಞಾನಿಗಳು ಹೇಳುತ್ತಾರೆ ಮಂಗನಿಂದ ಮಾನವ ಎಂದು .ಮಂಗಗಳು ಮುಖ್ಯವಾಗಿ ಸಸ್ಯಹಾರಿಗಳು .ಕೆಲವೊಂದು ಜಾತಿಯ ಮಂಗಗಳು ಮಾತ್ರ ಸತ್ಯ ಆಹಾರದ ಒಟ್ಟಿಗೆ ಸಣ್ಣ ಇರುವೆಗಳನ್ನು ತಿನ್ನುತ್ತವೆ .ಅವುಗಳ ಆಹಾರ ಕೂಡ ಸಸ್ಯ ಆಹಾರವೇ ಮುಖ್ಯ .ಹೀಗೆ ಮಾಂಸ ಆಹಾರ ತಿನ್ನುವ ಮಾನವರ ಸಂಖ್ಯೆ ಜಾಸ್ತಿ ಆಗುತ್ತಾ ಹೋಗಿ ಮುಂಬರುವ 100 ವರ್ಷಗಳಲ್ಲಿ ಅದೂ ಬೇಡ ಅಷ್ಟು ವರ್ಷಗಳು ನಮ್ಮ ದೇಶದಲ್ಲಿ ಮಾಂಸ ಆಹಾರ ಪ್ರಧಾನ ಆಗಬಹುದು .ನಮ್ಮ ದೇಶದಲ್ಲಿ ಮಾಂಸ ಆಹಾರಕ್ಕಾಗಿ ಪ್ರಾಣಿ ಪಕ್ಷಿಗಳನ್ನು ಬೆಳೆಯುವವರ ಸಂಖ್ಯೆ ಜಾಸ್ತಿಯಾಗಿ ಸಸ್ಯ ಆಹಾರ ಉತ್ಪನ್ನಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿ .

ಸಸ್ಯ ಆಹಾರ ಉತ್ಪನ್ನಗಳನ್ನು ಉತ್ಪಾದಿಸುವ ಬೆಳೆಯುವವರ ರೈತರ ಸಂಖ್ಯೆ ಕಡಿಮೆಯಾಗಿ ನಮ್ಮ ಫಲವತ್ತಾದ ಕೃಷಿ ಭೂಮಿಗಳು ಬೆಳೆ ಗಳನ್ನು ಬೆಳೆಯಲಾಗದೆ ಬಂಜರು ಮರುಭೂಮಿ ಗಳಾಗಬಹುದು .ಇಂತಹ ಪರಿಸ್ಥಿತಿಯಲ್ಲಿ ಪರಿಸರದಲ್ಲಿ ನಮ್ಮ ಮುಂದಿನ ನಮ್ಮ ಪೀಳಿಗೆಯವರು ಹೇಗೆ ಇರುತ್ತಾರೋ ಆ ದೇವರೇ ಬಲ್ಲ .ಕೊನೆಯದಾಗಿ ಹೇಳುವುದೇನೆಂದರೆ ನಮಗೆ ಬೇಕು ಭಾರತೀಯ ತಳಿಯ ಜಾನುವಾರುಗಳು ,ಭಾರತೀಯ ಹಿಂದಿನ ತಳಿ ಬೀಜಗಳು , ಜಾನುವಾರುಗಳು ಆಧಾರಿತ ನೈಸರ್ಗಿಕ ಕೃಷಿ ,ಭಾರತೀಯ ಹಿಂದಿನ ನಮ್ಮ ಹಿರಿಯರ ಸಂಸ್ಕೃತಿ ಪದ್ಧತಿ .ಇದು ನನ್ನ ಸ್ವಂತ ಚಿಂತನಾ ಅಭಿಪ್ರಾಯ ತಪ್ಪುಗಳಿದ್ದರೆ ಸರಿಪಡಿಸಿ ಕ್ಷಮಿಸಿ ಯಾರನ್ನಾದ್ರೂ ನೋಯಿಸಲು ಬರೆದಿರುವ ಈ ಲೇಖನವಲ್ಲ .
 






 
 
 
ಜೈ ಭಾರತ್
🌾🌴🍎🍏🫑🌶️ಷಣ್ಮುಖ ಕಟ್ಟ ,ಅಗ್ರಿಕಲ್ಚರ್ ಡೆಸ್ಕ್ 🦆🐘🐒🕷️🦋

No comments:

Post a Comment