Tuesday 13 July 2021

ರೈತ ಮಾರುಕಟ್ಟೆಗೆ ಬೇಕಿದೆ ಆಮ್ಲಜನಕ... !


 


ಬರಹ: ಕೂಡಂಡ ರವಿ, ಹೊದ್ದೂರು, ಕೊಡಗು.

 

 
ರೈತರ ಏಳಿಗೆಯನ್ನೇ ಪ್ರಮುಖ ಉದ್ಧೇಶವಾಗಿರಿಸಿಕೊಂಡ (ಅಗ್ರಿಕಲ್ಚರಲ್ ಮರ‍್ಕೇಟಿಂಗ್ )ಎಪಿಸಿಎಂಸಿ ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದು ಬಹುತೇಕರು ಕಂಡುಕೊAಡ ಕಟು ಸತ್ಯ. ಇಲ್ಲಿ ಲಾಭವೇ ಪ್ರಮುಖ ಉದ್ಧೇಶವೇ ಆಗಿದೆ. ಇದರಿಂದ ಇಂತಹ ಸಂಸ್ಥೆಯನ್ನು ನಂಬಿ ರೈತಾಪಿ ವರ್ಗದವರು ಬದುಕು ಕಟ್ಟಿಕೊಳ್ಳುವುದು ಕಷ್ಟವೇ ... ಇದಕ್ಕೆ ಸಂಬAಧಿಸಿದ ಕಾನೂನು ತಿದ್ದುಪಡಿಯಿಂದ ಬೆಳೆಗಾರರಿಗೆ ಪ್ರಯೋಜನ ಶೂನ್ಯ.
 ದಲ್ಲಾಳಿಗಳಿಗೆ ಅವಕಾಶವೇ ಇಲ್ಲ !
ಇದನ್ನು ಬದಲಾಯಿಸಲು ರೈತರು ಕಂಡುಕೊAಡ ಮಾರ್ಗಕ್ಕೆ ನಿರಂತರ ಆಮ್ಲಜನಕ ತುಂಬುವ ಕಾರ್ಯ ನಡೆಯಬೇಕಿದೆ. ಇದರಲ್ಲಿ ವಿಶೇಷವೆಂದರೆ, ಮೂರನೇ ಮಂದಿಗೆ (ದಲ್ಲಾಳಿಗೆ ಅವಕಾಶವೇ ಇಲ್ಲ) ಪರಿಣಾಮ ಕಡಿಮೆ ಬೆಲೆಯಲ್ಲಿ ರೈತರಿಂದ ನೇರವಾಗಿ ಬಳಕೆದಾರರಿಗೆ ಉತ್ಪನ್ನಗಳು ತಲುಪುತ್ತಿವೆ. ಇದಕ್ಕೆ ಕೆಲ ಉದಾಹರಣೆಗಳೆಂದರೆ, ಹಲಸು ಉತ್ಸವ, ಅಣಬೆ ಉತ್ಸವ, ಗೆಣಸು ಉತ್ಸವ ಇತ್ಯಾದಿ. ಮಡಿಕೇರಿಯ ಎಪಿಸಿಎಂಸಿ ಮಾರುಕಟ್ಟೆಯಲ್ಲಿ ನಡೆದ ಪ್ರಾಯೋಗಿಕ ಸಂತೆ. ಇಲ್ಲಿ ರೈತರು ಬೆಳೆದ ಕೆಸದ ಗೆಡ್ಡೆ, ನಾಟಿ ಕೋಳಿ, ಕಾಡು ಉತ್ಪನ್ನಗಳಾದ ಕಣಿಲೆ, ಅಣಬೆಗಳು ಸೇರಿದಂತೆ ರೈತರೇ ಬೆಳೆದ ತಾಜಾ ತರಕಾರಿಗಳಿದ್ದವು. ಮಹಿಳೆಯರೇ ಮಾರಾಟಗಾರರು. ನಗರದ ಬಹುತೇಕ ಖರೀದಿದಾರರು ಮುಗಿಬಿದ್ದು ತಾಜಾ ತರಕಾರಿಗಳನ್ನು ಖರೀದಿಸುತ್ತಿರುವ ದೃಶ್ಯ ಕಾಣಬಂದಿತ್ತು.
ಹಲವಾರು ಕಡೆಗಳಲ್ಲಿ ರಾಷ್ಟç, ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಕೃಷಿ ಮೇಳಗಳು ಆಯೋಜಿತವಾಗುತ್ತವೆ. ಇಂತಹ ಕಡೆಗಳಲ್ಲಿ ರೈತ ಮಾರುಕಟ್ಟೆ ಆಯೋಜನೆಯಾಗುತ್ತವೆ. ಇಂತಹ ಕಡೆ ರೈತಾಪಿ ವರ್ಗದವರೇ ಮಾರಾಟಗಾರರು. ಬಹುತೇಕ ಖರೀದಿದಾರರು ಅವರೇ. ಕೃಷಿಮೇಳಗಳ ಮಾರುಕಟ್ಟೆಯಲ್ಲಿ ಅಂಗಡಿ ತೆರೆಯಲು ಬೆಳೆಗಾರರು ಸುಂಕ ಕೊಡಬೇಕಿಲ್ಲ. ಅಥವಾ ಇದ್ದರೂ ತೀರಾ ಕಡಿಮೆ. ಹಲವಾರು ಕಡೆಗಳಲ್ಲಿ ರೈತರಿಗಾಗಿ ಬಾಡಿಗೆ ರಹಿತ ಮಳಿಗೆಗಳು ಇರುತ್ತವೆ. ಇಂತಹ ಅವಕಾಶಗಳನ್ನು ರೈತಾಪಿವರ್ಗದವರು, ರೈತಕೂಟಗಳು, ಸಂಘಟನೆಗಳು ಯಶಸ್ವಿಯಾಗಿ ಬಳಸಿಕೊಳ್ಳುವ ಅವಶ್ಯಕತೆ ಇದೆ.
 ಕೆಲ ಉದಾಹರಣೆಗಳು
ನನ್ನ ಮಿತ್ರ, ಗೋಣಿಕೊಪ್ಪ ವಿಭಾಗದವರು. ಹಳ್ಳಿಭಾಗದಲ್ಲಿ ಸಿಗುವ ಹಲಸು, ಕರಿಬೇವು, ಬೆಣ್ಣೆಹಣ್ಣು, ಕೆಸ, ಕಣಿಲೆ, ಉಪ್ಪಿನಕಾಯಿ, ಕಾಫಿಪುಡಿ, ಸೊಪ್ಪು-ಸದೆಗಳನ್ನು ವಿವಿಧ ಜಿಲ್ಲೆ, ರಾಜ್ಯ ಮತ್ತು ರಾಷ್ಟç ಮಟ್ಟದ ಕೃಷಿ ಮೇಳಗಳಲ್ಲಿಯೂ ಮಾರಾಟ ಮಾಡುವ ಹವ್ಯಾಸವನ್ನು ಮೈಗೂಡಿಸಿಕೊಂಡಿರುವರು. ಮತ್ತೋರ್ವರು ಪುತ್ತೂರಿನ ಮಿತ್ರರು, ವಿವಿಧ ಹಲಸಿನ ಜಾತಿಯ ಕಸಿ ಗಿಡಗಳನ್ನು, ಬರೇ ಕೃಷಿ ಮೇಳಗಳಲ್ಲಿ ಮಾರಾಟ ಮಾಡುವರು. ಇನ್ನೋರ್ವರು ದಾವಣಗೆರೆಯವರು-ಸೋಲಾರ್ ಕೀಟನಾಶಕ ಯಂತ್ರಕ್ಕೆ ಕೃಷಿ ಮೇಳಗಳ ಮೂಲಕವೇ ಮಾರುಕಟ್ಟೆ ಕಂಡುಕೊAಡರು !
 ಮನೆಬಾಗಿಲಿಗೆ ದಾಂಗುಡಿ
ಹಲವಾರು ನಗರಗಳಲ್ಲಿ ಸಾವಯವ ಮಾರುಕಟ್ಟೆಗಳು ಭರ್ಜರಿ ಯಶಸ್ಸು ಕಾಣುತ್ತಿವೆ. ಲಾಕ್‌ಡೌನ್ ಸಂದರ್ಭದಲ್ಲAತೂ ದಲ್ಲಾಳಿಗಳಿಲ್ಲದೆ ರೈತರೇ ತಾವು ಬೆಳೆದ ಉತ್ಪನ್ನಗಳನ್ನು ರೈತರಿಗೆ ನೇರವಾಗಿ ತಲುಪಿಸಲು ಸುವರ್ಣಾವಕಾಶವನ್ನು ಕಲ್ಪಿಸಿತ್ತು. ಹಲವಾರು ಕೃಷಿ ಉತ್ಪನ್ನಗಳು ಹೊಲ-ತೋಟಗಳಿಂದ ಬಳಕೆದಾರರ ಮನೆಬಾಗಿಲಿಗೆ ದಾಂಗುಡಿ ಇಟ್ಟಿತು. ಹತಾಶಗೊಂಡ ರೈತಾಪಿ ವರ್ಗದವರಿಗೆ ಅವಕಾಶದ ಹೆಬ್ಬಾಗಿಲನ್ನು ಮುಕ್ತವಾಗಿ ತೆರೆಯಿತು. ಇದರಿಂದ ಸಿಕ್ಕಬೆಲೆಗೆ ರೈತರು ಕೃಷಿ ಉತ್ಪನ್ನಗಳನ್ನು ಮಾರುವುದು ತಪ್ಪಿತು. ಇಂತಹ ಅವಕಾಶಗಳನ್ನು ಬಳಸಿಕೊಂಡು ರೈತ ಪರ ಸಂಘಟನೆಗಳು ಮುಂದಡಿ ಇಡಬೇಕಿದೆ.

2 comments:

  1. ರೈತರ ಮಾರುಕಟ್ಟೆಗಳು ಮುಂದುವರಿದ ದೇಶಗಳಲ್ಲಿ ಇವೆ. ಪ್ರತಿ ವಾರವೂ ಇರುತ್ತದೆ. ಅದಕ್ಕಾಗಿ ಚೊಕ್ಕ ಸ್ತಳ, ವ್ಯವಸ್ಥೆ ಇರುತ್ತದೆ.ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಇದೆ.ನಮ್ಮಲ್ಲಿಯ ಎಪಿಯಂಸಿ ಗಳು ಬರೇ ಇನ್ನೂಂದು ವ್ಯಾಪಾರ ಕೇಂದ್ರ. ಒಮ್ಮೆ ಹೋದರೆ ಇನ್ನೆಂದಿಗೂ ಬರಬಾರದು ಅನಿಸುತ್ತದೆ.ಈ ನಿಟ್ಟಿನಲ್ಲಿ ತಾಲೂಕು, ಪಂಚಾಯಿತಿ ಮಟ್ಟದಲ್ಲಿ ಆಸಕ್ತರು ಕೆಲವರು ಮುಂದೆ ಬಂದರೆ ಸಾಧ್ಯ ಅನಿಸುತ್ತದೆ.ರೈತರಿಗೂ ಗ್ರಾಹಕನಿಗೂ ಅನುಕೂಲ. ಮಧ್ಯವರ್ತಿಗಳ ಕಾಟ ತಪ್ಪುತ್ತದೆ.

    ReplyDelete
  2. nivu heluthirudu sariyagide... comment madidakke danyavadagalu

    ReplyDelete