Sunday 11 July 2021

ಸೋಲಾರ್ ಬಬಲ್ ಡ್ರೆಯರ್



             ಬರಹ : ಕೂಡಂಡ ರವಿ, ಹೊದ್ದೂರು. ಕೊಡಗು



 ರೈತರು ಕೊಯ್ಲೋತ್ತರ ಬೆಳೆ ಒಣಗಿಸಲು ವಿನೂತನ ತಂತ್ರಜ್ಞಾನವು ಸಂಶೋಧಿಸಲ್ಪಟ್ಟಿದೆ. ನೂತನ ಯಂತ್ರವನ್ನು  ಫಿಲಿಫೈನ್ಸ್ ಇಂಟರ್ ನ್ಯಾಷನಲ್ ರೈಸ್ ರಿರ‍್ಚ್ ಇನ್ಸಿಟ್ಯೂಟ್ , ಮತ್ತು ಸೋಲಾರ್ ಬಬಲ್ ಡ್ರೆಯರ್ ಎಂಬ ಸಂಸ್ಥೆಯು ಜಂಟಿಯಾಗಿ ಈ ಅವಿಷ್ಕಾರವನ್ನು ಮಾಡಿದೆ.
ಈ ನೂತನ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವುದರಿಂದ ಕೊಯ್ಲೋತ್ತರ ಸಂಸ್ಕರಣೆಯು ಅತ್ಯಂತ ಸರಳವಾಗಿರಲಿದೆ. ಹೆಚ್ಚಿನ ತೇವಾಂಶ ಹೆಚ್ಚಳದಿಂದ ಉಂಟಾಗುವ ನಷ್ಟವನ್ನು ಗಣನೀಯವಾಗಿ ತಡೆಯಬಹುದೆಂದು ಹೇಳಲಾಗಿದೆ.  ಇದು ಹವಾಮಾನ, ಪ್ರಾಣಿಪಕ್ಷಿಗಳು, ಕೀಟಗಳಿಂದ, ಕಳ್ಳರಿಂದಲೂ, ಧಾನ್ಯಗಳ ಮೇಲೆ ಹರಿಯಬಹುದಾದ ವಾಹನಗಳಿಂದಲೂ ರಕ್ಷಣೆ ಮಾಡಲಿದೆ. ಸಾಂಪ್ರಾದಾಯಿಕ ಸೂರ್ಯನ ಬೆಳಕಿನಲ್ಲಿ ಕೃಷಿ ಉತ್ಪನ್ನಗಳ ಒಣಗಿಸುವಿಕೆಗೆ ಈ ಆಧುನಿಕ ವಿಧಾನಕ್ಕೂ ಹೋಲಿಸಿದ್ದಲ್ಲಿ ಶೇ. ೧೫-೩೦ರಷ್ಟು ಕಡಿಮೆಯಾಗಿರಲಿದೆ ಎಂದು ಅಂದಾಜಿಸಲಾಗಿದೆ.
 ಇದಕ್ಕೆ ಬೇಕಾದ ವಿದ್ಯುತ್ ಅನ್ನು ಸೋಲಾರ್ ಅಥವಾ ಪರ್ಯಾಯ ರೀತಿಯಲ್ಲಿ ವಿದ್ಯುತ್ ಅನ್ನು ಬಳಸಬಹುದಾಗಿದೆ. ೨೦೧೬ರಿಂದಲೂ ಈ ತಂತ್ರಜ್ಞಾನವು ಆಗ್ನೇಯ ಏಷ್ಯಾದ ದೇಶಗಳಲ್ಲಿ ಬಳಕೆಯಲ್ಲಿದೆ. ಆದರೆ, ಇದೀಗ ಭಾರತದಲ್ಲಿ ಪರಿಚಯಿಸಲಾಗಿದೆ. 


 ಈ ಯಂತ್ರವು ಸೂರ್ಯನ ಶಕ್ತಿಯನ್ನು ಎರಡು ವಿಧಗಳಲ್ಲಿ ಬಳಸುತ್ತದೆ. ಬಬಲ್‌ನೊಳಗಿನ ಗಾಳಿಯ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಸೌರಫಲಕಗಳ ಮೇಲೆ ಬೀಳುವ ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವುದು.  ಧಾನ್ಯಗಳಿಂದ ಆವಿಯಾಗುವ ನೀರನ್ನು ತೆಗೆದು ಹಾಕಲಿದೆ. ಈ ವಿಧಾನಗಳಿಂದ ಯಂತ್ರದೊಳಗೆ ಹರವಲಾದ ಧಾನ್ಯಗಳು ಬೇಗನೇ ಒಣಗುತ್ತವೆ. ಮೋಡಗಳಿರುವ ಸಮಯದಲ್ಲಿ ಕಾಫಿ, ಕಾಳುಮೆಣಸು, ಭತ್ತ ಮೊದಲಾದವುಗಳನ್ನು ಈ ಆಧುನಿಕ ಯಂತ್ರದ ಮೂಲಕ ಸುಲಭವಾಗಿ ಅತ್ಯಂತ ವೇಗವಾಗಿ ಒಣಗಿಸಬಹುದಾಗಿದೆ. ಇದರಿಂದಾಗಿ ಯಂತ್ರದೊಳಗೆ ಹರಡಲಾದ ಧಾನ್ಯಗಳು ೨೪ ಘಂಟೆಗಳಲ್ಲಿ ನಿರಂತರವಾಗಿ ಒಣಗುತ್ತಿರುತ್ತದೆ. ಇದನ್ನು ಸುಲಭವಾಗಿ ಕಳ್ಳತನ ಮಾಡಲಾಗದು. ಜೊತೆಗೆ ಯಂತ್ರ ಕಾರ್ಯ ನಿರ್ವಹಣೆಗೆ ಇಂಧನದ ಅಗತ್ಯವಿಲ್ಲ. ಇತರ ಯಂತ್ರಗಳಿಗೆ ಹೋಲಿಸಿದ್ದಲ್ಲಿ ಶಬ್ಧ ರಹಿತ. ಖರ್ಚು ರಹಿತ ಸೇವೆ.ನಿರ್ವಹಣೆಗೆ ಕೂಲಿಯಾಳುಗಳ ಅಗತ್ಯವಿಲ್ಲ.  






 


No comments:

Post a Comment