Wednesday 14 July 2021

ವಿಶ್ವಪ್ರಸಿದ್ಧ ಗಿರ್ ಹಸು


ಕೂಡಂಡ ಧರಣಿ. ಹೊದ್ದೂರು-ಮೂರ್ನಾಡು.  


 

 

 

 
  ಭಾರತೀಯ ಮೂಲದ ಹಲವಾರು ಜಾತಿಯ ಹಸುಗಳು ವಿಶ್ವದಲ್ಲಿ ಹೆಸರುಗಳಿಸಿವೆ. ಇದರಲ್ಲಿ ಗಿರ್ ಕೂಡಾ ಒಂದು. ಗಿರ್ ಹಸು ಮೂಲತಃ ಗುಜರಾತಿನದ್ದು, ಇದು ದಕ್ಷಿಣ ಏಷ್ಯಾದ ಜೆಬು ಜಾನುವಾರುಗಳಲ್ಲಿ ಒಂದು. ಹಸುವಿನ ದೇಹದ ಬಣ್ಣವು ಕೆಂಪು, ಇಲ್ಲವೇ ಕೆಂಪು ಬಿಳಿ ಮಿಶ್ರಿತವಾದ ಮಚ್ಚೆಗಳಿಂದ ಕೂಡಿ ಹೊಳೆಯುತ್ತಿರುತ್ತದೆ. ಚರ್ಮವು ಅತ್ಯಂತ ಮೃದು.  
ಈ ಹಸುವಿಗೆ ಭೋಡಾಲಿ, ಗುಜರಾತಿ, ಸೋರ್ತಿ, ಸರತಿ ಎಂಬ ಹೆಸರುಗಳಿವೆ.
 ವೈಶಿಷ್ಟ್ಯಗಳೇನು ?
ಗುಜರಾತಿನ ಅಮ್ರೆಲಿ, ಭಾವನಗರ, ಜುನಾಗ, ರಾಜ್‍ಕೋಟ್ ಜಿಲ್ಲೆಗಳಲ್ಲಿ ಈ ಹಸುಗಳಿವೆ.  ಇದು ತನ್ನ ವೈವಿಧ್ಯಮಯ ಗುಣಗಳಿಂದ ಹೆಸರು ವಾಸಿಯಾಗಿದೆ. ವಿಶ್ವಪ್ರಸಿದ್ಧಿಯನ್ನು ಪಡೆದಿದೆ.
ಇದು ಆಹಾರ ಕೊರತೆಯ ನಡುವೆಯೂ ಅಧಿಕ ಹಾಲು ನೀಡುವ ಸಾಮಾಥ್ರ್ಯವನ್ನು ಹೊಂದಿದೆ. ಹವಾಮಾನ ವೈಪರೀತ್ಯಗಳನ್ನು ಗಿರ್ ಸಮರ್ಥವಾಗಿ ಎದುರಿಸಬಲ್ಲದು. ವಿವಿಧ ರೋಗಗಳ ನಿರೋಧಕ ಗುಣಗಳನ್ನು ಹೊಂದಿವೆ. ಇಂತಹ ಗುಣಗಳಿಂದ ಇವುಗಳನ್ನು ಹಲವಾರು ದೇಶಗಳು ಆಮದು ಮಾಡಿಕೊಂಡು ಸಾಕುತ್ತಿವೆ. ಬ್ರೆಜಿಲ್, ಅಮೇರಿಕಾ, ವೆನಿಜುವೆಲಾ, ಮೆಕ್ಸಿಕೋ ದೇಶಗಳಲ್ಲಿವೆ ಗಿರ್ ಹೆಸರು ಪಡೆದಿವೆ. ಅತ್ಯಂತ ದೊಡ್ಡ ಗಾತ್ರದ ಈ ಹಸುವಿನ ತೂಕ ಸರಾಸರಿ 385 ಕಿಲೋಗ್ರಾಂಗಳು. ಹೋರಿಯ ತೂಕ ಸರಾಸರಿ 545 ಕಿಲೋಗ್ರಾಂಗಳು. ಗಿರ್ ಹಸುವಿನ ವಾರ್ಷಿಕ ಹಾಲಿನ ಇಳುವರಿ 1590 ಕಿಲೋಗ್ರಾಂಗಳು !  ಪ್ರತೀ ದಿನ ಸರಾಸರಿ 6 ರಿಂದ 15 ಲೀಟರ್ ಹಾಲು ನೀಡುತ್ತವೆ. ಗಿರ್ ಭಾರತದ ಅತ್ಯಂತ ಪ್ರಾಚೀನ ತಳಿ. ಇದರ ಹಾಲಿಗೆ ಅತ್ಯಂತ ಬೇಡಿಕೆ. ಇದರ ಸಗಣಿ- ಗಂಜಲ ಜೀವಾಮೃತ ತಯಾರಿಕೆಗೆ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ.  ಗಿರ್ ಹಸುವಿನ ಸರಾಸರಿ ಬೆಲೆ ಸುಮಾರು 80 ಸಾವಿರದಿಂದ 1 ಲಕ್ಷದ ಹತ್ತು ಸಾವಿರ.
 
ಭಾರತದಲ್ಲಿಯೂ ಇವುಗಳನ್ನು ವ್ಯಾಪಕವಾಗಿ ಸಾಕಲಾಗುತ್ತಿದೆ. ಮಹರಾಷ್ಟ್ರ, ಕರ್ನಾಟಕ, ರಾಜಸ್ಥಾನಗಳಲ್ಲಿ ಅನೇಕ ಮಂದಿ ಆಸಕ್ತರು ಇವುಗಳನ್ನು ಸಾಕುತ್ತಿರುವರು. ನಮ್ಮ ದೇಶದ ವಿವಿಧೆಡೆ ಇವುಗಳನ್ನು ಸಾಕುವ ಪ್ರಯತ್ನಗಳು ನಡೆಯುತ್ತಿವೆ.
 ಉಚಿತ ಕೃತಕ ಗರ್ಭಧಾರಣೆ
ನೀವು ಮಿಶ್ರ ತಳಿ ಅಥವಾ ವಿದೇಶಿ ತಳಿಗಳ ಹಸುಗಳನ್ನು ಸಾಕುತ್ತಿರುವಿರಾ ? ಹಾಗಿದ್ದಲ್ಲಿ ಅದೇ ಹಸುವಿನಿಂದ ಗಿರ್ ತಳಿಯ ಕರುಗಳನ್ನು ಪಡೆಯಬಹುದು. ಮಾಹಿತಿಗಾಗಿ ನಿಮ್ಮ ಸಮೀಪದ ಪಶು ವೈದ್ಯ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು. ಕೊಡಗಿನಲ್ಲಿಯೂ ಕೃತಕ ಗರ್ಭಧಾರಣೆಯ ಮೂಲಕ ಈ ಕರುಗಳು ಜನಿಸಿವೆ ಎಂದು ಪಶು ಸಂಗೋಪನಾ ಇಲಾಖೆಯ ಮೂರ್ನಾಡಿನ ಮಹಿಳಾ ವೈದ್ಯೆ ಡಾ. ಶಿಲ್ಪಾ ಮಾಹಿತಿ ನೀಡಿದ್ದಾರೆ. ಹೊದ್ದೂರಿನ ಪ್ರಗತಿಪರ ಕೃಷಿಕ ಚೌರೀರ ಉದಯ ಅವರು ಗಿರ್ ತಳಿಯ ಹಸುಗಳನ್ನು ಯಶಸ್ವಿಯಾಗಿ ಸಾಕುತ್ತಿರುವರು. ಆಸಕ್ತರು ಅಪ್ಪಟ ಗಿರ್ ತಳಿಯ ಹಸು-ಕರುವಿಗಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಪುರ ಮಠವನ್ನು ಸಂಪರ್ಕಿಸಬಹುದು.
 ವಿದೇಶಿ ತಳಿಗಳ ಹಸುಗಳನ್ನು ಸಾಕಿ ಸೋತ ಗೋಪಾಲಕರು ಈ ತಳಿಯನ್ನು ಸಾಕಿ ಯಶಸ್ಸು ಪಡೆಯಬಹುದು. ಒಮ್ಮೆ ಪ್ರಯತ್ನಿಸಿ ನೋಡಿ.





1 comment:

  1. How To Make Money On Sports Betting
    Online sports betting is septcasino.com available for a 메이피로출장마사지 whole 1xbet app host of US and European sports betting markets. Some US states, casinosites.one like Louisiana หาเงินออนไลน์ and New Jersey, allow

    ReplyDelete