Monday 5 July 2021

ನಮ್ಮ ಪರಿಸರದಲ್ಲಿ ಕಪ್ಪೆ ಗಳಿಲ್ಲ ಕಾಗೆಗಳು ಇಲ್ಲ ನರಿಗಳು ಇಲ್ಲ ಕಾಡುಕೋಣಗಳ ಸಂತತಿ ಕಡಿಮೆಯಾಗಿದೆ ಗುಬ್ಬಚ್ಚಿ ಗಳಿಲ್ಲ ಕಾಯರ್ ಮರಗಳಿಲ್ಲ ಹೆಬ್ಬಲಸು ಮರದ ಸಂತತಿ ಕಡಿಮೆಯಾಗಿದೆ

 

ನಮ್ಮ ಪರಿಸರದಲ್ಲಿ ಕಪ್ಪೆ ಗಳಿಲ್ಲ ಕಾಗೆಗಳು ಇಲ್ಲ ನರಿಗಳು ಇಲ್ಲ ಕಾಡುಕೋಣಗಳ ಸಂತತಿ ಕಡಿಮೆಯಾಗಿದೆ ಗುಬ್ಬಚ್ಚಿ ಗಳಿಲ್ಲ ಕಾಯರ್ ಮರಗಳಿಲ್ಲ ಹೆಬ್ಬಲಸು ಮರದ ಸಂತತಿ ಕಡಿಮೆಯಾಗಿದೆ ಇವುಗಳು ಇಲ್ಲದ ಪರಿಸರದಲ್ಲಿ ನಮಗೆ ಬದುಕಲು ಸಾಧ್ಯವೇ ನೀವೇ ಚಿಂತನೆ ಮಾಡಿ ಪ್ರಾಣಿ ಪಕ್ಷಿಗಳು ಕಣ್ಮರೆ ಯಾಗುತ್ತಿವೆ 1 ದಿನ ಮಾನವ ಸಂತತಿ ಕೂಡ ಈ ಭೂಮಿಯಿಂದ ಇಲ್ಲದಾಗುತ್ತದೆ ಎನ್ನುವ ಸೂಚನೆ ಇದು .ಪೂರ್ಣಚಂದ್ರ ತೇಜಸ್ವಿಯವರು 1ಕಡೆ ಹೇಳುತ್ತಾರೆ ನಮ್ಮ ಪರಿಸರದಲ್ಲಿ 1 ಪ್ರಾಣಿ ಪಕ್ಷಿ ಬದುಕಲು ಸಾಧ್ಯವಿಲ್ಲವೆಂದು ನಾಶ ವಾಗುತ್ತಿದೆ ಎಂದು ಹೇಳಿದರೆ ಮಾನವ ಜೀವಿಯ ನಾಶದ ಸೂಚನೆ ಎಂದು ..ನಾವು ಪ್ರಕೃತಿಯನ್ನು ರಕ್ಷಿಸೋಣ ಸಂರಕ್ಷಿಸೋಣ ಪ್ರಕೃತ್ತಿಯ ಅವಶ್ಯಕತೆ ಮಾನವನಿಗೆ ವಿನಃ ಪ್ರಕೃತಿಗೆ ಮಾನವನ ಅವಶ್ಯಕತೆ ಇಲ್ಲ .ಪ್ರಾಣಿ ಪಕ್ಷಿಗಳು ಎಂದಾದರು ಪರಿಸರವನ್ನು ಹಾಳು ಮಾಡಿದ್ದೇವೆಯೇ ಇಲ್ಲ .ಪ್ರಾಣಿ ಪಕ್ಷಿಗಳು ಮಾತ್ರ ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ .ಆದರೆ ಮಾನವ ಮಾತ್ರ ಈಗಿನ ಆಧುನಿಕ ಜಗದಲ್ಲಿ ತಿನ್ನುವ ಆಹಾರಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸಿದ್ದಾರೆ .ಅದುವೇ ವಿಷಯ ಯುಕ್ತ ಆಹಾರ ಕ್ಕೆ ನಾಂದಿ ಮತ್ತು ಅನಾರೋಗ್ಯಕ್ಕೆ ನಾಂದಿ .ಹಿಂದಿನ ಕಾಲದಲ್ಲಿ ನಮ್ಮ ಅಜ್ಜಂದಿರು ತಿನ್ನುವ ಆಹಾರ ಅನ್ನ ತರಕಾರಿ ಬೇಳೆಕಾಳುಗಳನ್ನು ಅವರು ಅವರಿಗಾಗಿ ಬೆಳೆಯುತ್ತಿದ್ದರು .ಅವರು ಬೇರೊಬ್ಬರನ್ನು ತಿನ್ನುವ ಆಹಾರಕ್ಕಾಗಿ ಅವಲಂಬಿಸಿಲ್ಲ .ಆದ್ದರಿಂದ ಅವರು ವಿಷಮುಕ್ತ ಆಹಾರ ತಿಂದು ಗಟ್ಟಿ ಮುಟ್ಟಾಗಿ ತೊಂಬತ್ತು ಕ್ಕಿಂತ ಹೆಚ್ಚು ವರ್ಷ ಜೀವಿಸಿದ್ದಾರೆ ಹೆಚ್ಚಿನವರು .ನನ್ನ ಅಜ್ಜ ದಿವಂಗತ ಕಟ್ಟಾ ಮಾಯಿಲಪ್ಪ ಗೌಡರು ಇತ್ತೀಚೆಗೆ ತೊಂಭತ್ತೆಂಟು ವರ್ಷದಲ್ಲಿ ತೀರಿ ಕೊಂಡರು .ಅವರು ಆ ವಯಸ್ಸಿನಲ್ಲಿ ಕೂಡ ತೆಂಗಿನ ಮರಕ್ಕೆ ಹತ್ತಿ ಕಾಳು ಮೆಣಸು ವೀಳ್ಯದೆಲೆ ತೆಗೆಯುತ್ತಿದ್ದರು .ಅವರ ಹಿಂದಿನ ಆಹಾರ ಉತ್ತಮ ಪದ್ದತಿ ಆಗಿತ್ತು ಅವರು ತಿಂದದ್ದು ಸ್ವಂತ ತಾವೇ ಬೆಳೆದ ವಿಷಮುಕ್ತ ಆಹಾರ .ಹಾಗೆ ನಾವು ಕೂಡ ನಮಗೆ ಬೇಕಾದಷ್ಟು ಆದರೂ ಇನ್ನೊಬ್ಬರಿಗೆ ಮಾರಲು ಸಾಧ್ಯ ಇಲ್ಲದಿದ್ದರೆ ವಿಷಮುಕ್ತ ಆಹಾರವನ್ನು ಬೆಳೆದು ತಿನ್ನೋಣ .ಮುಂದಿನ ಪೀಳಿಗೆಗಾಗಿ ಇವತ್ತಿನ ಹೊಸ ಕ್ರಮಕ್ಕೆ ನಾಂದಿ ಹಾಡೋಣ .
 




 
ಜೈ ಭಾರತ್  
*******ಷಣ್ಮುಖ(Shaan) ಕಟ್ಟ and ಅಗ್ರಿಕಲ್ಚರ್ ಡೆಸ್ಕ್ Team************

No comments:

Post a Comment