Saturday 25 September 2021

ಈಗಿನ ಕಾಲದ ಯುವಕ, ಯುವತಿ ಹಾಗೂ ಮಕ್ಕಳಲ್ಲಿ, ಅತೀ ಸಣ್ಣ ಪ್ರಾಯದಲ್ಲಿ - ಹಿರಿಯರಿಗೆ ಬರುವ ಹಲವಾರು ರೋಗ ರುಜಿನಗಳನ್ನು ಕಾಣಬಹುದು..

 ಮಣಿಪಾಲ ಶಿವರಾಂ ಭಟ್ 





ಈಗಿನ ಕಾಲದ ಯುವಕ, ಯುವತಿ ಹಾಗೂ ಮಕ್ಕಳಲ್ಲಿ, ಅತೀ ಸಣ್ಣ ಪ್ರಾಯದಲ್ಲಿ - ಹಿರಿಯರಿಗೆ ಬರುವ ಹಲವಾರು ರೋಗ ರುಜಿನಗಳನ್ನು ಕಾಣಬಹುದು..
ಉದಾಹರಣೆ - ಸಣ್ಣ ಮಕ್ಕಳಿಗೆ ಕ್ಯಾನ್ಸರ್, ಹೃದ್ರೋಗಾ, ಸಕ್ಕರೆ ಖಾಯಿಲೆ ಇತ್ಯಾದಿ.. 10 ವರ್ಷದ ಒಳಗಿನ ಹುಡುಗಿಯರ ಮೈ ನೆರೆಯುವುದು.... ಇತ್ಯಾದಿ ಇತ್ಯಾದಿ... ಬೇಕಾದಷ್ಟು ಇದೆ..
ಕಾರಣ?
ಈಗಿನ ಆಹಾರ ಕ್ರಮಗಳು, ಪರಿಸರ, ನೀರು, ವಾತಾವರಣ ಮಾಲಿನ್ಯ ಇತ್ಯಾದಿ ಅಲ್ಲವೇ?
ಇನ್ನೊಂದು ಮುಖ್ಯ ಕಾರಣ, ನಾವು ಜೀವಿಸಲು ಬೇಕಾದ ಮುಖ್ಯ ಆಹಾರವನ್ನು, ನಮ್ಮ ರೈತರು/ಕೃಷಿಕರು ಮಾಡುವಂತಹ ಕೃಷಿ ಕ್ರಮಗಳಿಂದ, ಹಾಗೂ ಇದನ್ನು ಪ್ರತಿಪಾದಿಸುವ ನಮ್ಮ ಕೃಷಿ ವಿಜ್ಞಾನಿಗಳು ಎಂದರೆ ಖಂಡಿತ ತಪ್ಪು ಆಗಲಾರದು.
ಗರಿಷ್ಠ ಇಳುವರಿ ಪಡೆಯಲು ನಮ್ಮ ರೈತರು/ಕೃಷಿಕರು ಬಳಸುವ ಅತಿಯಾದ ರಾಸಾಯನಿಕ ಒಳಸುರಿಗಳಿಂದ ನಮ್ಮ ದೇಶದ ಕೃಷಿ ಭೂಮಿಗಳು ನಾಶದ ಅಂಚಿಗೆ ತಲುಪುವ ಘಟ್ಟವನ್ನು ನೋಡುತ್ತಿದ್ದೇವೆ.
ಈ ಪೋಸ್ಟ್ ಹಾಕಲು ಮುಖ್ಯ ಕಾರಣ ಎಂದರೆ - ನಮ್ಮ ಕರಾವಳಿ ಭಾಗದಲ್ಲಿ ಅಡಿಕೆ ಕೃಷಿಗೆ ಒಂದು ಮಹತ್ವ ಸ್ಥಾನ. ಸಾವಿರಾರು ಗದ್ದೆ, ಗುಡ್ಡ ಭೂಮಿ ನಾಶವಾಗಿ, ಈಗ ಎಲ್ಲಿ ನೋಡಿದರೂ ಅಡಿಕೆ ಹಾಗೂ ರಬ್ಬರ್ ತೋಟಗಳನ್ನು ಕಾಣುತ್ತಿದ್ದೇವೆ. ಇಲ್ಲಿ ಹೆಚ್ಚಿನ ಕೃಷಿಕರು ರಾಸಾಯನಿಕ ಕೃಷಿಕರಾಗಿ ಮಾರ್ಪಟ್ಟು, ಅನಗತ್ಯ ರಾಸಾಯನಿಕ ಒಳಸುರಿ ಹಾಕಿ ಮಣ್ಣು, ಭೂಮಿ, ನೀರು, ಪರಿಸರ ಇತ್ಯಾದಿ ಬೇಕಾದಷ್ಟು ನಾಶ ಮಾಡಿ ಆಯ್ತು.
(ಹೇಗೆ ನಮ್ಮ ಸಮಾಜಶಾಸ್ತ್ರದಲ್ಲಿ ನಮ್ಮ ದೇಶದ ಬಗ್ಗೆ ಕೀಳಾಗಿ ಅವಹೇಳನ ಮಾಡುತ್ತಿದ್ದಾರೋ ಹಾಗೆ ಕೃಷಿಯಲ್ಲಿ ಕೂಡಾ, ನಮ್ಮ ಪುರಾತನ ಕೃಷಿಕ್ರಮಗಳನ್ನು ನಾಶ ಮಾಡಿ, ವಿದೇಶೀ ತಂತ್ರಜ್ಞಾನವನ್ನು ರೈತರಿಗೆ ಮೋಸ ಮಾಡಿ ಹಾಳಾಗಿ ಹೋಗುತ್ತಿದೆ)..
ಈ ಮೇಲಿನ ವಿಷಯ ಒಂದು ಪೀಠಿಕೆ.
ಈಗ ಮುಖ್ಯ ವಿಷಯಕ್ಕೆ ಬರುತ್ತಿದ್ದೇನೆ..
ಇತ್ತೀಚೆಗೆ ಅಂದರೆ ಸುಮಾರು ಕೆಲವು ವರ್ಷಗಳಿಂದ, ಅಡಿಕೆ ಕೃಷಿಯಲ್ಲಿ ವಿವಿಧ ರೋಗಗಳು, ಇದಕ್ಕೆ ಕೃಷಿ ವಿಜ್ಞಾನಿಗಳು ಏನೂ ಮಾಡುತ್ತಿಲ್ಲ, ಸರಕಾರದಿಂದ ಈ ರೋಗಗಳಿಗೆ ಪರಿಹಾರ ಕಂಡು ಹಿಡಿಯಲು ಕೋಟಿಗಟ್ಟಲೆ ಹಣ ಮೀಸಲು ಇಟ್ಟರೂ, ಯಾವುದೇ ಪ್ರಯೋಜನ ಕಾಣುತ್ತಿಲ್ಲ ಎಂದು..
ಈ ಅಡಿಕೆ ಕೃಷಿಯಲ್ಲಿ ಕಾಡುತ್ತಿರುವ ರೋಗಗಳು - ಕೊಳೆ ರೋಗ, ಹಳದಿ ರೋಗ, ಬೇರು ಹುಳುವಿನ ರೋಗ ಇತ್ಯಾದಿ ಇತ್ಯಾದಿ, ಯಾವುದಕ್ಕೂ ಇಷ್ಟರ ತನಕ ಒಂದು ಸರಿಯಾದ ಕಾರಣ ಹಾಗೂ ಪರಿಹಾರ ಸದ್ಯಕ್ಕೆ ಕೃಷಿ ವಿಜ್ಞಾನಿಗಳಿಂದ ಬರುತ್ತಿಲ್ಲ..

ಹಾಗಾದರೆ, ಅಡಿಕೆ ಕೃಷಿಕರಾಗಿ, ಈ ಕೃಷಿಕರು ಏನು ಮಾಡುತ್ತಿದ್ದಾರೆ ಎಂಬುದನ್ನು ಅವಲೋಕಿಸೋಣ
1. ಅತಿಯಾದ, ಅನಗತ್ಯ ರಾಸಾಯನಿಕ ಒಳಸುರಿ, ಇದರಿಂದಾಗಿ ಪರಿಸರ, ಮಣ್ಣು, ಭೂಮಿ, ನೀರು, ozone layer ನಲ್ಲಿ ದುಷ್ಪರಿಣಾಮ, ಹೆಚ್ಚುತ್ತಿರುವ ಸೂರ್ಯನ ಶಾಖ.
2. ಕೃಷಿ ಭೂಮಿಯ ಮಣ್ಣು ನಾಶವಾಗಿ, ಮಣ್ಣಿನಲ್ಲಿ ಯಾವುದೇ ರೋಗ ವಿರೋಧ ಮಾಡುವ ಶಕ್ತಿ ಇಲ್ಲ.
3. ಹಾಕುವ ರಾಸಾಯನಿಕ ಒಳಸುರಿ - ಇದರಲ್ಲಿ 60 - 70% ಅನುಪಯುಕ್ತ ಆಗಿ, ಮಾಲಿನ್ಯ ಮಾಡುವುದು.
4. ಎರೆಹುಳು, ಸೂಕ್ಷ್ಮಜೀವಾಣುಗಳ ನಾಶ.
5. ಮಣ್ಣು ಗಟ್ಟಿಯಾಗಿ, ನೀರು ಇಂಗದೆ, ಉತ್ತಮ ಮಣ್ಣಿನ ಸವಕಳಿ ಆಗಿ, ಕೃಷಿ ಭೂಮಿ ಅವಸಾನದತ್ತ (6" ಉತ್ತಮ ಮೇಲ್ಪದುರು ಮಣ್ಣು ಆಗಲು ಸುಮಾರು 1000 ವರ್ಷ ಬೇಕು)
6. ಕೀಟನಾಶಕ, ಕಳೆನಾಶಕ ಇತ್ಯಾದಿ ಪ್ರಯೋಗಿಸಿ, ಎಲ್ಲಾ ಸೂಕ್ಷ್ಮಜೀವಿಗಳ ಸರ್ವನಾಶ.
7. ಮಾರುಕಟ್ಟೆಯಲ್ಲಿ ಸಿಗುವ, ಸಾವಯವ ಒಳಸುರಿ ಎಂದು ಮಾಡುವ ಜಾಲದವರಿಂದ, ಮೋಸ ಹೋಗಿ ಹಾಕುವ ರಾಸಾಯನಿಕ ಗೊಬ್ಬರ
8. ನಮ್ಮ ಕೃಷಿ ಭೂಮಿ ಬಿಟ್ಟು, ಹೊರಗಡೆಯಿಂದ ರೋಗವಿರುವ ಒಳಸುರಿ, ಗೊಬ್ಬರ ಹಾಕಿ ಮೋಸ ಹೋಗುವುದು....
ಹೀಗೆ ನೂರಾರು...

ಪರಿಹಾರ -
ದೇಸೀ ಗೋವಾಧಾರಿತ ವಿಷಮುಕ್ತ ನೈಸರ್ಗಿಕ ಕೃಷಿ

No comments:

Post a Comment