Sunday, 9 February 2025

*ಮಣ್ಣಿನ ಸಹಾಯವಿಲ್ಲದೆ ಬೆಳೆಯುವ ಹೈಡ್ರೋಫೋನಿಕ್ ಕೃಷಿ ವಿಧಾನ*

  


ಯಾವುದೇ ಕೃಷಿ ಮಾಡಲು ಮಣ್ಣೇ ಮುಖ್ಯ. 'ಮಣ್ಣಿಲ್ಲದೆ ಕೃಷಿ ಮಾಡಬಹುದೇ?' ಎಂಬ ಪ್ರಶ್ನೆಗೆ, 'ಹೌದು ಮಣ್ಣಿಲ್ಲದೆ ಕೃಷಿ ಮಾಡಲು ಸಾಧ್ಯ' ಎಂಬ ಉತ್ತರ ಈಗ ನಮ್ಮಲ್ಲಿದೆ. ಇತ್ತೀಚಿನ ದಿನಗಳಲ್ಲಿ ಹೈಡ್ರೋಫೋನಿಕ್ಸ್ ಎಂಬ ವಿನೂತನ ಕೃಷಿ ವಿಧಾನ ಚಾಲ್ತಿಯಲ್ಲಿದೆ. ಈ ಪದ್ಧತಿ ಕೃತಕ ಪರಿಸರದಲ್ಲಿ ನೀರು ಆಧರಿತ ಖನಿಜ ಪೋಷಕಾಂಶಗಳನ್ನು ಬಳಸಿಕೊಂಡು ಮಣ್ಣು ಇಲ್ಲದೆ ನೀರಿನ ಮೂಲಗಳಿಂದ ಸಸ್ಯಗಳನ್ನು ಬೆಳೆಸಬಹುದು. ಸಾಮಾನ್ಯವಾಗಿ ಕೆಲವು ತೋಟಗಾರಿಕಾ ಬೆಳೆಗಳು, ಸೊಪ್ಪು ತರಕಾರಿಗಳು, ಔಷಧಿಯ ಸಸ್ಯಗಳನ್ನು ಚೆನ್ನಾಗಿ ಬೆಳೆಸಬಹುದು. ಈಗ‌ ಈ ವಿಧಾನದಲ್ಲಿ ಪ್ರಾಣಿಗಳಿಗೆ ಮೇವುಗಳನ್ನು ಸಹ ಬೆಳೆಯುತ್ತಿದ್ದಾರೆ.


 *ಏನಿದು ಹೈಡ್ರೋಫೋನಿಕ್ ಕೃಷಿ ವಿಧಾನ?* 

          ಜಲ ಕೃಷಿ ಅಥವಾ ಹೈಡ್ರೋಫೋನಿಕ್ ಕೃಷಿ ಎನ್ನುವುದು ಒಂದು ತಂತ್ರಜ್ಞಾನ. ಹೈಡ್ರೋ ಎಂದರೆ ನೀರು, ಫೋನಸ್ ಎಂದರೆ ಕೆಲಸ ಮಾಡುವುದು ಎಂದರ್ಥ. ಒಟ್ಟಾರೆಯಾಗಿ, ಹೈಡ್ರೋಫೋನಿಕ್ಸ್ ಅಂದರೆ ಮಣ್ಣಿಲ್ಲದೆ ನೀರಿನಲ್ಲಿ ಕೃಷಿ ಮಾಡುವುದು ಎಂಬ ಅರ್ಥ ಕೊಡುತ್ತದೆ. ಸಸ್ಯಗಳಿಗೆ ಬೇಕಾದ ಎಲ್ಲಾ ಪೋಷಕಾಂಶವನ್ನು ನೀರಿಗೆ ಹಾಕಲಾಗುತ್ತದೆ. ಇದರಲ್ಲಿ ಬಳಸುವ ದ್ರಾವಣವನ್ನು ಅದರ ನಿರ್ದಿಷ್ಟ ಉಷ್ಣಾಂಶ ಹಾಗೂ phನ್ನು ಕಾಪಾಡಬೇಕು.

 *ವಿಧಗಳು:* 

ಜಲಕೃಷಿಯಲ್ಲಿ ಸಾಕಷ್ಟು ವಿಧಗಳಿವೆ. ಪ್ರತಿಯೊಂದು ವಿಧವು ವಿಭಿನ್ನ ಬೆಳೆ ಹಾಗೂ ಪರಿಸ್ಥಿತಿಗಳಿಗೆ ಸೂಕ್ತ ವಾಗುವಂತೆ ಬೆಳೆಸಲಾಗುತ್ತದೆ. 

 *1. Deep water culture:* ಇದರಲ್ಲಿ ಸಸ್ಯದ ಬೇರುಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುತ್ತದೆ. ಬೇರುಗಳು ಕೊಳೆಯಬಾರದೆಂದು ಆಮ್ಲಜನಕವನ್ನು ಕೃತಕವಾಗಿ ನೀಡಲಾಗುತ್ತದೆ.
ಲೆಟ್ಯುಸ್, ಪಾಲಕ್ ನಂತಹ ಸೊಪ್ಪು ತರಕಾರಿ, ಗಿಡಮೂಲಿಕೆಗಳನ್ನು ಈ ರೀತಿಯಲ್ಲಿ ಬೆಳೆಸಬಹುದು.

 *2. Nutrient film technique (NFT):* ಸಸ್ಯದ ಬೇರುಗಳನ್ನು  ಪೌಷ್ಟಿಕಾಂಶದ ದ್ರಾವಣದಲ್ಲಿ ಹರಿಬಿಡಲಾಗುತ್ತದೆ. ಇದರಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದ್ದು ಸಸ್ಯಗಳು ಇದರಿಂದ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳುತ್ತವೆ. ಸ್ಟ್ರಾಬೆರಿ, ಪಾಲಕ್, ಗಿಡ ಮೂಲಿಕೆಗಳನ್ನು ಬೆಳೆಯಬಹುದು.

 *3. Ebb and flow(Flood and drain):* ಈ ವಿಧಾನದಲ್ಲಿ ಟ್ರೇ ಅಥವಾ ಪ್ಲೇಟ್ ನಲ್ಲಿ ಸಸ್ಯವನ್ನು ಪೌಷ್ಟಿಕಾಂಶದ ದ್ರಾವಣದಲ್ಲಿ ಇಡಲಾಗುತ್ತದೆ. ನಿರ್ದಿಷ್ಟ ಸಮಯದವರೆಗೆ ಹಾಗೆ ಇಟ್ಟು ನೀರನ್ನು ಬಸಿಯಲಾಗುವುದು. ಟೊಮೇಟೊ,ಮೆಣಸಿನಕಾಯಿ,ಸೌತೆಕಾಯಿ ಈ ವಿಧಾನದಲ್ಲಿ ಬೆಳೆಸಬಹುದು. 

 *4. Drip system:* ಪೋಷಕಾಂಶದ ದ್ರಾವಣವನ್ನು ನಿಯಂತ್ರಿತ ವ್ಯವಸ್ಥೆಯನ್ನು ಬಳಸಿಕೊಂಡು ಬೇರುಗಳ ಮೇಲೆ ತೊಟ್ಟಿಕ್ಕಲಾಗುತ್ತದೆ.

 *5. Aeroponics:* ಸಸ್ಯದ ಬೇರುಗಳನ್ನು ಗಾಳಿಗೆ ನೇತಾಡಲು ಬಿಡುತ್ತಾರೆ. ಪೋಷಕಾಂಶಗಳ ದ್ರಾವಣವನ್ನು  ಸಿಂಪಡಿಸುವ ಮೂಲಕ ಬೇರುಗಳು ಪೋಷಕಾಂಶಗಳನ್ನು ಪಡೆಯುತ್ತವೆ.

 *6. Wick system:* ಈ ವಿಧಾನದಲ್ಲಿ ಸಣ್ಣ ದಾರವನ್ನು ಪೋಷಕಾಂಶಗಳ ದ್ರಾವಣಕ್ಕೆ ಹರಿಬಿಟ್ಟಾಗ ಇದು ಗಿಡಕ್ಕೆ ಬೇಕಾದಷ್ಟು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. 

 *ಜಲಕೃಷಿಯ ಪ್ರಯೋಜನಗಳು;* 

ಜಲ ಕೃಷಿಯಲ್ಲಿ ಸಸಿಗಳ ಅರ್ಧ ಬೇರುಗಳು ನೀರಿನಲ್ಲಿ ಮುಳುಗಿದ್ದು, ಅದೇ ನೀರಿಗೆ ಪೋಷಕಾಂಶಗಳನ್ನು ಹಾಕುತ್ತಾರೆ. ಬೇಕಾದಷ್ಟು ಮಾತ್ರ ಹೀರಿಕೊಂಡು ತುಂಬಾ ವೇಗವಾಗಿ ಬೆಳೆಯಲು ಆರಂಭಿಸುತ್ತದೆ. ಹಾಗಾಗಿ, ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭಗಳಿಸಲು ಸಾಧ್ಯವಿದೆ. 

ಜಲ ಕೃಷಿ ಅಂತ ಅಂದ ತಕ್ಷಣ ಹೆಚ್ಚು ನೀರಿನ ಅವಶ್ಯಕತೆ ಇದೆ ಅಂತ ಅಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಕೃಷಿ ಜಾಗ ಕಮ್ಮಿ ಇದ್ದಾಗ ತಮ್ಮ ಮನೆಯ ಟೆರೇಸ್ ಮೇಲೆ ಟ್ಯಾಂಕ್ ನೀರು ಬಳಸಿ ಕೃಷಿ ಮಾಡುವವರಿದ್ದಾರೆ. ಈ ಕೃಷಿ ವಿಧಾನದಲ್ಲಿ ನೀರಿನ ಖರ್ಚು ಕೂಡ ಕಡಿಮೆ ಇರುತ್ತದೆ. 

ಹೈಡ್ರೊಫೋನಿಕ್ಸ್ ಕ್ರಷಿಯಲ್ಲಿ ಮಣ್ಣಿನ ಬಳಕೆ ಇಲ್ಲದಿರುವುದರಿಂದ ಕಳೆ ಸಮಸ್ಯೆ ಇರುವುದಿಲ್ಲ. ಬೆಳೆ ಹಾಳು ಮಾಡುವ ಕೀಟಗಳ ಸಮಸ್ಯೆ ಕೂಡ ಇರೋದಿಲ್ಲ. ಹಾಗಾಗಿ, ಉತ್ತಮ ದರ್ಜೆಯ ಬೆಳೆಗಳು ಹೆಚ್ಚು ಇಳುವರಿಯೊಂದಿಗೆ ಸಿಗುತ್ತದೆ. 

ಹೈಡ್ರೋಫೋನಿಕ್ಸ್ ಕೃಷಿಯಲ್ಲಿ ಪಾಲಿಹೌಸ್‌ಗಳ ಬಳಕೆಯಿದ್ದು, ರೋಗಗಳಿಂದ ರಕ್ಷಣೆ ಸಿಗುತ್ತದೆ. ಜೊತೆಗೆ ಕೀಟನಾಶಕ ಬಳಸುವುದು ಕೂಡ ತಪ್ಪುತ್ತದೆ. 

ಜಲ ಕೃಷಿಯನ್ನು ಅತ್ಯಂತ ಕಡಿಮೆ ಜಾಗದಲ್ಲಿ ಮಾಡಿ ಅದಕ್ಕಿಂತ  ದುಪಟ್ಟು ಆದಾಯ ಗಳಿಸಬಹುದು.
 
ಈ ಕೃಷಿ ವಿಧಾನದಲ್ಲಿ ಬಿಸಿಲಿನಲ್ಲಿ ಇಳಿದು ಇಡೀ ದಿನ ಕೆಲಸ ಮಾಡಬೇಕೆಂದಿಲ್ಲ. ಜೊತೆಗೆ ಜಾಸ್ತಿ ಕೂಲಿಗಳ ಅಥವಾ ಜನರ ಅವಶ್ಯಕತೆ ಕೂಡ ಇಲ್ಲ.

ಸೊಪ್ಪು, ತರಕಾರಿಗಳು, ಗಿಡಮೂಲಿಕೆಗಳು ಹಾಗೂ ಕೆಲವೊಂದು ಸಣ್ಣ ಬೇರಿನ ಸಸ್ಯಗಳನ್ನು ಹೈಡ್ರೋಫೋನಿಕ್ ವಿಧಾನದಲ್ಲಿ ಬೆಳೆದರೆ ಹೆಚ್ಚು ಲಾಭಗಳಿಸಬಹುದು.

 *ಹೈಡ್ರೋಫಾನಿಕ್ಸ್  ಕೃಷಿಯ ಸಮಸ್ಯೆಗಳು;* 

ಹೆಚ್ಚು ಆರಂಭಿಕ ಖರ್ಚು: ಹೈಡ್ರೋಫೋನಿಕ್ಸ್ ಕೃಷಿಯ ಸ್ಥಾವರವನ್ನು ಸ್ಥಾಪಿಸಲು ಅದಕ್ಕೆ ಬೇಕಾದ ಉಪಕರಣಗಳು ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಖರ್ಚು ತಗಲುತ್ತದೆ. ಜೊತೆಗೆ, ಪಾಲಿಹೌಸ್ ಕೂಡ ಸ್ಥಾಪಿಸಬೇಕಾಗುತ್ತದೆ. ಅದಕ್ಕೂ ಹೆಚ್ಚು ಖರ್ಚಿದೆ. 

ರೈತರ ಶ್ರದ್ಧೆ, ಸಮಯ ತುಂಬಾ ಅವಶ್ಯ. ಸರಿಯಾದ ಸಮಯದಲ್ಲಿ ಸರಿಯಾದ ಪೋಷಕಾಂಶಗಳನ್ನು ನೀಡಬೇಕು. ಹಾಗಾಗಿ, ನಿರಂತರ ಮೇಲ್ವಿಚಾರಣೆ ಅಗತ್ಯ.

ಹೈಡ್ರೋಫೋನಿಕ್ಸ್‌ನಲ್ಲಿ ಗಿಡಗಳು ಕೃತಕ ವಾತಾವರಣದಲ್ಲಿ ಬೆಳೆಯುವುದರಿಂದ ಅದನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತಿರಬೇಕಾಗುತ್ತದೆ.  

ನಿರಂತರ ವಿದ್ಯುತ್ ಸರಬರಾಜು ಬೇಕು. ಸಸ್ಯಗಳಿಗೆ ನಿರಂತರ ಪೋಷಕಾಂಶಗಳ ಸರಬರಾಜು ಹಾಗೂ ಕಳೆ ವಿಲೇವಾರಿ ಮಾಡಬೇಕಾಗಿರುವುದರಿಂದ ನಿರಂತರ ವಿದ್ಯುತ್ ಅವಶ್ಯಕತೆ ಇದೆ. 

ಇದು ನಿರ್ದಿಷ್ಟ ಬೆಳೆಗಳಿಗೆ ಸೀಮಿತವಾಗಿದೆ. ಸೊಪ್ಪು, ತರಕಾರಿ, ಗಿಡ ಮೂಲಿಕೆಗಳನ್ನು ಚೆನ್ನಾಗಿ ಬೆಳೆಯಲಾಗುತ್ತದೆ. ಆದರೆ, ಆಳವಾಗಿ ಬೇರೂರಬಲ್ಲ ಸಸ್ಯಗಳನ್ನು ಬೆಳೆಯಲು ಸಾಧ್ಯವಿಲ್ಲ.

ನೀರಿನಿಂದ ಹರಡುವ ರೋಗಗಳ ಅಪಾಯವಿರುತ್ತದೆ.

 ಜನಸಂಖ್ಯೆ ಹೆಚ್ಚಿದಂತೆ ಹಾಗೂ ಕೃಷಿಯೋಗ್ಯ ಭೂಮಿ ಕಡಿಮೆ ಇದ್ದಾಗ, ಹೈಡ್ರೋಪೋನಿಕ್ ಕೃಷಿಯು ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.





ಡಾ|| ಗ್ರೀಷ್ಮಾ ಗೌಡ ಆರ್ನೋಜಿ BNYS,Msc(Clinical Nutrition and dietetics)
ವೈದ್ಯರು 
ಸಂಪೂರ್ಣ ಪಾಲಿಕ್ಲಿನಿಕ್ ಕಡಬ

Wednesday, 15 January 2025

ರಾಷ್ಟೀಯ ರೈತ ದಿನಾಚರಣೆ

ರಾಷ್ಟೀಯ ರೈತ ದಿನಾಚರಣೆ 
 ಡಿಸೆಂಬರ್-23 


 ಬರಹ: ಕೂಡಂಡ ರವಿ, ಹೊದ್ದೂರು. 

 ಅಂದಿನ ಕಾಲದ ಪ್ರಧಾನ ರೈತರ ನಾಯಕರಾಗಿದ್ದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಗೌರವಾರ್ಥ ಆಚರಿಸಲಾಗುತ್ತಿದೆ. ಅವರ ಹುಟ್ಟಿದ ದಿನವಾದ ಡಿಸೆಂಬರ್ 23 ಅನ್ನು ಭಾರತದಲ್ಲಿ ರಾಷ್ಟಿçÃಯ ರೈತ ದಿನಾಚರಣೆ ಅಥವಾ ಕಿಸಾನ್ ದಿವಾಸ್ ಎಂದು ಸ್ಮರಿಸಲಾಗುತ್ತದೆ. ಸ್ವಾತಂತ್ರ‍್ಯ ಪೂರ್ವ ಭಾರತದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದ ಅರವರು 1938 ರಲ್ಲಿ ಅಂದಿನ ಯುನೈಟೆಡ್ ಪ್ರಾಂತ್ಯದ ವಿಧಾನಸಭೆಯಲ್ಲಿ ಕೃಷಿ ಉತ್ಪಾದನಾ ಮಾರುಕಟ್ಟೆ ಮಸೂದೆಯನ್ನು ಪರಿಚಯಿಸಿದ ಕೀರ್ತಿಗೆ ಭಾಜರಾಗಿದ್ದಾರೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿರುವ ಭಾರತೀಯರ ಮೊದಲ ಶಾಸಕಾಂಗ ಕ್ರಮವಾದ್ದರಿಂದ ಆ ಮಸೂದೆ ಮಹತ್ವದ್ದಾಗಿತ್ತು. ವ್ಯಾಪಾರಿಗಳ ಒತ್ತಡ ತಂತ್ರಗಳಿAದ ರೈತರನ್ನು ರಕ್ಷಿಸುವುದು ಇದರ ಉದ್ದೇಶವಾಗಿತ್ತು. ಈ ಮಸೂದೆಯನ್ನು ಸ್ವಾತಂತ್ರ‍್ಯದ ಮೊದಲು ಕೆಲವು ಪ್ರಾಂತೀಯ ಸರ್ಕಾರಗಳು ಅಂಗೀಕರಿಸಿದವು. ಇವುಗಳಲ್ಲಿ ಪಂಜಾಬ್ ಮೊಟ್ಟ ಮೊದಲನೆಯದು. ಅವರ ಗೌರವಾರ್ಥವಾಗಿ, ಡಿಸೆಂಬರ್ 23 ರಂದು ಬರುವ ಅವರ ಜನ್ಮದಿನವನ್ನು ರೈತರ ದಿನ ಅಥವಾ ಕಿಸಾನ್ ದಿವಾಸ್ ಆಚರಿಸಲು ದಿನವಾಗಿ ಆಯ್ಕೆ ಮಾಡಲಾಯಿತು. ಸಿಂಗ್ 1902ರಲ್ಲಿ ಮೀರತ್‌ನಲ್ಲಿ ಜನಿಸಿದರು. ಅವರು ರೈತ ಕುಟುಂಬದಿAದ ಬಂದವರು ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಷ್ಟಿç ನೀಡಿದ 'ಜೈ ಜವಾನ್, ಜೈ ಕಿಸಾನ್' ಎಂಬ ಘೋಷಣೆಯನ್ನು ನಂಬಿದ್ದರು. ಭಾರತದ ರೈತರನ್ನು ಗೌರವಿಸಲು ಮತ್ತು ರಾಷ್ಟçದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ರಾಷ್ಟಿçÃಯ ರೈತ ದಿನಾಚರಣೆ ಅಥವಾ ಕಿಸಾನ್ ದಿವಾಸ್ ಅನ್ನು ಡಿಸೆಂಬರ್ 23ರಂದು ದೇಶಾದ್ಯಂತ ಆಚರಿಸಲಾಗುತ್ತದೆ. 2001ರಲ್ಲಿ, ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆಯನ್ನು ಕಿಸಾನ್ ದಿವಾಸ್ ಎಂದು ಆಚರಿಸುವ ಮೂಲಕ ಕೃಷಿ ಕ್ಷೇತ್ರ ಮತ್ತು ರೈತರ ಕಲ್ಯಾಣಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಲು ಸರ್ಕಾರ ನಿರ್ಧರಿಸಿತು. 1979 ಮತ್ತು 1980 ರ ನಡುವೆ ಸಂಕ್ಷಿಪ್ತವಾಗಿ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಚೌಧರಿ ಚರಣ್ ಸಿಂಗ್ ಅವರನ್ನು ದೇಶದ ಅತ್ಯಂತ ಪ್ರಸಿದ್ಧ ರೈತ ಮುಖಂಡರಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ರೈತರ ಕಲ್ಯಾಣ ಮತ್ತು ಕೃಷಿ ಕ್ಷೇತ್ರದ ಉತ್ತೇಜನಕ್ಕಾಗಿ ಅವರು ತಮ್ಮ ಪ್ರವರ್ತಕ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದರು. ಭಾರತೀಯ ರೈತ ಎದುರಿಸುತ್ತಿರುವ ಹೋರಾಟಗಳಿಗೆ ಚರಣ್ ಸಿಂಗ್ ಹೊಸದೇನೂ ಆಗಿರಲ್ಲಿಲ್ಲ. ಅವರು ಡಿಸೆಂಬರ್ 23, 1902 ರಂದು ಉತ್ತರ ಪ್ರದೇಶದ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದರು. ಮಹಾತ್ಮ ಗಾಂಧಿಯವರ ಬೋಧನೆಗಳಿಂದ ಹೆಚ್ಚು ಪ್ರಭಾವಿತರಾದ ಅವರು ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಚರಣ್ ಸಿಂಗ್ ಭಾರತದ ಅತಿದೊಡ್ಡ ಕೃಷಿ ರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದರು, ಅಲ್ಲಿ ಅವರು ಭೂ ಸುಧಾರಣೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 1939ರ ಭೂ ಬಳಕೆ ಮಸೂದೆ ಮತ್ತು 1939 ರಲ್ಲಿ ಸಾಲ ವಿಮೋಚನೆ ಮಸೂದೆ ಸೇರಿದಂತೆ ಹಲವಾರು ಪ್ರಮುಖ ರೈತ-ಫಾರ್ವರ್ಡ್ ಮಸೂದೆಗಳ ಜಾರಿಯ ಹಿಂದೆ ಇದ್ದರು. 1952 ರಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವಾಗ, ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಗೊಳಿಸುವ ಪ್ರಯತ್ನದಲ್ಲಿ ಯುಪಿಯನ್ನು ಮುನ್ನಡೆಸಿದರು. ವಾಸ್ತವವಾಗಿ, ಅವರು ಯುಪಿ ಜಮೀನ್ದಾರಿ ಮತ್ತು ಭೂ ಸುಧಾರಣಾ ಮಸೂದೆಯನ್ನು ಸ್ವತಃ ರಚಿಸಿದರು. ಡಿಸೆಂಬರ್ 23, 1978 ರಂದು, ಅವರು ಕಿಸಾನ್ ಟ್ರಸ್ಟ್ ಅನ್ನು ಸ್ಥಾಪಿಸಿದರು - ರಾಜಕೀಯೇತರ, ಲಾಭೋದ್ದೇಶವಿಲ್ಲದ ಸಂಸ್ಥೆ - ಅನ್ಯಾಯದ ವಿರುದ್ಧ ಭಾರತದ ಗ್ರಾಮೀಣ ಜನತೆಗೆ ಶಿಕ್ಷಣ ನೀಡುವ ಮತ್ತು ಅವರಲ್ಲಿ ಒಗ್ಗಟ್ಟನ್ನು ಬೆಳೆಸುವ ಉದ್ದೇಶದಿಂದ ಚೌಧರಿ ಚರಣ್ ಸಿಂಗ್ ಅವರು ಅಲ್ಪಾವಧಿಗೆ ಪ್ರಧಾನಿಯಾಗಿ ಭಾರತೀಯ ರೈತರ ಕಲ್ಯಾಣಕ್ಕಾಗಿ ಶ್ರಮಿಸಿದರು. ಇದು ಮಾತ್ರವಲ್ಲದೆ ಅವರು ರೈತರಿಗಾಗಿ ಹಲವಾರು ಯೋಜನೆಗಳನ್ನು ಪರಿಚಯಿಸಿದರು. ಈ ದಿನವನ್ನು ಹೇಗೆ ಆಚರಿಸಲಾಗುತ್ತದೆ? 
 • ರೈತರ ಅನುಕೂಲಕ್ಕಾಗಿ ಸರ್ಕಾರ ಹೊಸ ನೀತಿಗಳನ್ನು ಪ್ರಕಟಿಸುತ್ತದೆ. 
 • ಕಿಸಾನ್ ಸೆಮಿನಾರ್‌ಗಳನ್ನು ವಿಭಾಗೀಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಆಯೋಜಿಸಲಾಗಿದೆ. 
 • ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಇಂತಹ ಕಾರ್ಯಗಳಲ್ಲಿ ರೈತರಿಗೆ ಹೊಸ ದತ್ತಾಂಶವನ್ನು ತಿಳಿಸುತ್ತಾರೆ.
 • ರೈತರ ವಿಚಾರ ಸಂಕಿರಣಗಳನ್ನು ವಿವಿಧ ಕೃಷಿ ವಿಜ್ಞಾನ ಸ್ಥಳಗಳು ಮತ್ತು ಕೃಷಿ ಜ್ಞಾನ ಸ್ಥಳಗಳಲ್ಲಿ ನಡೆಸಲಾಗುತ್ತದೆ.
 • ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ಹಲವಾರು ಅಂಶಗಳ ಕುರಿತು ವಿಚಾರ ಸಂಕಿರಣಗಳು, ಉತ್ಸವಗಳು ಮತ್ತು ಪ್ರದರ್ಶನಗಳನ್ನು ನಡೆಸುತ್ತದೆ. ಕೃಷಿ ವಿಮಾ ಯೋಜನೆಗಳ ಬಗ್ಗೆ ರೈತರಿಗೆ ಶಿಕ್ಷಣ: ರೈತರ ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸಲು ಭಾರತ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ಸಾಮಾನ್ಯವಾಗಿ, ರೈತರ ಪಾತ್ರ ಮತ್ತು ಆರ್ಥಿಕತೆಗೆ ಅವರು ನೀಡುವ ಕೊಡುಗೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ದೇಶಾದ್ಯಂತ ಜಾಗೃತಿ ಅಭಿಯಾನಗಳನ್ನು ಆಯೋಜಿಸಲಾಗಿದೆ. ವಿದೇಶಗಳಲ್ಲಿ ರೈತರ ದಿನಾಚರಣೆ ಘಾನಾದಲ್ಲಿ : ಘಾನಾದಲ್ಲಿ ರಾಷ್ಟಿçÃಯ ರೈತ ದಿನಾಚರಣೆ ರೈತರು ಮತ್ತು ಮೀನುಗಾರರ ವಾರ್ಷಿಕ ಆಚರಣೆಯು ನಡೆಯುತ್ತದೆ. ಇದನ್ನು ಡಿಸೆಂಬರ್ ಮಾಹೆಯ ಮೊದಲ ಶುಕ್ರವಾರ ಆಚರಿಸಲಾಗುತ್ತದೆ. ರೈತರ ದಿನದಂದು, ಆಹಾರ ಮತ್ತು ಕೃಷಿ ಸಚಿವಾಲಯ (ಘಾನಾ) ಅರ್ಹ ರೈತರು ಮತ್ತು ಮೀನುಗಾರರಿಗೆ ಅವರ ಅಭ್ಯಾಸಗಳು ಮತ್ತು ಉತ್ಪಾದನೆಯ ಆಧಾರದ ಮೇಲೆ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಪಾಕಿಸ್ತಾನದಲ್ಲಿ : ಪಾಕಿಸ್ತಾನದಲ್ಲಿ ರಾಷ್ಟಿçÃಯ ರೈತ ದಿನಾಚರಣೆಯನ್ನು ಕಿಸಾನ್ ದಿನ ಎಂದೂ ಕರೆಯುತ್ತಾರೆ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 2019 ರ ಡಿಸೆಂಬರ್ 18 ರಂದು ಇಸ್ಲಾಮಾಬಾದ್‌ನಲ್ಲಿ ಆಚರಿಸಲಾಯಿತು. ಇದನ್ನು ಆಗಿನ ಪ್ರಧಾನಿ ಇಮ್ರಾನ್ ಖಾನ್ ಸಹಾ ಒಪ್ಪಿಕೊಂಡರು. ಪಾಕಿಸ್ತಾನದ ಪ್ರಮುಖ ರಸಗೊಬ್ಬರ ಉತ್ಪಾದನಾ ಕಂಪನಿ ಫಾತಿಮಾ ಗ್ರೂಪ್ ಈ ಯೋಜನೆಯನ್ನು ಡಿಸೆಂಬರ್ 18, 2019 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮೊದಲ ರೈತರ ದಿನಾಚರಣೆಯನ್ನು ಆಚರಿಸುವಾಗ ರೈತ ಕಲ್ಯಾಣ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಪರವಾಗಿ ಪ್ರಸ್ತಾಪಿಸಿತ್ತು. ಅಮೇರಿಕಾ ಸಂಯುಕ್ತ ಸಂಸ್ಥಾನ : ಅಮೆರಿಕಾದಲ್ಲಿ, ಇದನ್ನು ಪ್ರತಿವರ್ಷ ಅಕ್ಟೋಬರ್ 12 ರಂದು ಆಚರಿಸಲಾಗುತ್ತದೆ. ಅಂದು ಎಲ್ಲಾ ರೈತರಿಗೆ ಗೌರವ ಸಲ್ಲಿಸಲು ಇದನ್ನು ಆಚರಿಸಲಾಗುತ್ತದೆ.

Wednesday, 1 January 2025

ಕೊಡಗಿನ ಅಪರೂಪದ ರುದ್ರಾಕ್ಷಿ

ಚೆಟ್ಟಳ್ಳಿಯ ಅಯ್ಯಂಡ್ರ ಗಿರೀಶ್ ಕುಮಾರ್ ಬೆಳೆಸಿದ ಕೊಡಗಿನ ಅಪರೂಪದ ರುದ್ರಾಕ್ಷಿ
ಚೆಟ್ಟಳ್ಳಿ: ಶಿವನ ಕೊರಳಲ್ಲಿರುವ ರುದ್ರಾಕ್ಷಿಮಣಿಗಳು ಯಾರಿಗೆ ತಾನೆ ತಿಳಿಯದು. ದೈವಸ್ವರೂಪವೆಂದು ಆರಾಧಿಸುವ ಭಕ್ತರು ರುದ್ರಾಕ್ಷಿಯನ್ನು ಭಕ್ತಿ ಪೂರಕವಾಗಿ ಧರಿಸಿ ಪೂಜಿಸುವ ಸಂಪ್ರದಯವಿದೆ. ಇಂತಹ ವಿಶೇಷತರವಾದ ಅಪರೂಪದ ರುದ್ರಾಕ್ಷಿ ಮರವನ್ನು ಮಡಿಕೇರಿ ಸಮೀಪದ ಚೆಟ್ಟಳ್ಳಿಯ ಅಯ್ಯಂಡ್ರ ಗಿರೀಶ್ ಕುಮಾರ್ ತನ್ನ ಮನೆಯ ಅಂಗಳದಲ್ಲಿ ನೆಟ್ಟು ಬೆಳೆಸಿ ಕಾಯಿಯನ್ನು ಸಂಗ್ರಹಿಸುತ್ತಿದ್ದಾರೆ. ಹಿಮಾಚ್ಚಾದಿತ ಪರ್ವತ ಶ್ರೇಣಿಗಳಲ್ಲಿ, ನೇಪಾಳದಲ್ಲಿ ಕಂಡುಬರುವ ರುದ್ರಾಕ್ಷಿಯನ್ನು ಕೊಡಗಿನ ವಾತಾವರಣದಲ್ಲಿ ಬೆಳೆಯಲಾಗು ತಿದೆಂದರೆ ಆಶ್ಚರ್ಯವಾಗ ಬಹುದು..!!! ಭಾರತದ ಸಂಬಾರ ಮಂಡಳಿಯಲ್ಲಿ ಸೇವೆ ಸಲ್ಲಿಸಿದಂತ ನಿವ್ರತ್ತ ಅಧಿಕಾರಿ ಗಿರೀಶ್ ಕುಮಾರ್‌ರವರು ಸುಮಾರು ೧೪ವರ್ಷಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಸೇವೆಯಲ್ಲಿದಾಗ ಅಲ್ಲಿ ಬೆಳೆಯಲಾಗುತಿದ್ದ ರುದ್ರಾಕ್ಷಿಯ ಗಿಡವನ್ನು ತನ್ನ ಉತ್ತರ ಕೊಡಗಿನ ಚೆಟ್ಟಳ್ಳಿಯ ಮನೆ ಮುಂದಿನ ಕಾಫಿತೋಟದ ಬದಿಯಲ್ಲಿ ನೆಟ್ಟು ಪೋಷಿಸ ತೊಡಗಿದ್ದರು. ನೋಡುನೋಡುತಿದ್ದಂತೆ ಬೆಳೆದು ಸುಮಾರು ೬ವರ್ಷಗಳಲ್ಲಿ ಹೂವಾಗಿ ಕಾಯಾಗತೊಡಗಿತ್ತು. ವರ್ಷದ ಜೂನ್, ಜುಲೈನಲ್ಲಿ ಮೊದಲಫಸಲು ನವೆಂಬರ್ ಡಿಸಂರ‍್ನಲ್ಲಿ ಎರಡನೇ ಫಸಲಾತತೊಡಗಿತ್ತು. ೧೫ವರ್ಷಗಳಲ್ಲಿ ಸುಮಾರು ೩೫ರಿಂದ ೪೦ ಅಡಿ ಎತ್ತರದ ಹೆಮ್ಮರವಾಗಿ ಕಪ್ಪುಮಿಶ್ರಿತ ದುಂಡಗಿನ ಸಣ್ಣಸಣ್ಣ ಕಾಯಿಗಳು ಬೆಳೆದು ಬೀಳತೊಡಗಿದವು. ಅವನೆಲ್ಲ ಹೆಕ್ಕಿತಂದು ನೀರಿನಲ್ಲಿಟ್ಟು ಸಿಪ್ಪೆತೆಗೆದು ತೊಳೆದು ರುದ್ರಾಕ್ಷಿ ಕಾಯಿಗಳನ್ನು ಸಂಗ್ರಹಿಸುತಿದ್ದಾರೆ. ಪಂಚಮುಖಿಯ ಕಾಯಿಗಳೇ ಹೆಚ್ಚಾಗಿದ್ದು ೮ರಿಂದ೧೨ರಡು ಮುಖದ ಕಾಯಿ(ಮಣಿ)ಗಳು ಅಪರೂಪವಾಗಿ ದೊರೆತಿವೆ.ವಿಶೇಷ ಪಟ್ಟ ಗೌರಿಶಂಕರ ವೆಂಬ ಜೋಡಿ ರುದ್ರಾಕ್ಷಿ ಕಾಯಿ ಒಂದು ದೊರೆತಿದ್ದು ದೇವರ ನೆಲೆಯಲ್ಲಿಟ್ಟು ಪೂಜಿಸಲಾಗುತಿದೆ. ಏಕಮುಖ, ದ್ವಿಮುಖ, ತ್ರಿಮುಖ, ಚುರ್ತುರ್ ಮುಖಿ, ಪಂಚಮುಖಿ, ಷಷ್ಠತಮುಖಿ, ಸಪ್ತಮುಖಿ, ಅಷ್ಟಮುಖಿ, ನವಮುಖಿ, ದಶಮುಖಿ, ಏಕದಶಮುಖಿ, ದ್ವಾಸಶಾಮುಖಿ, ತ್ರಯೋದಶಿಮುಖಿ, ಚರ್ತುಮುಖಿ ವಿಶೇಷಪಟ್ಟ ಹೆಸರಿನಕಾಯಿಯ ಗುಣಲಕ್ಷಣದ ಮೇರೆ ೧೫ರೂಪಾಯಿಯಿಂದ ಸಾವಿರಗಟ್ಟಲೆ ಬೆಲೆಬಾಳುವ ರುದ್ರಾಕ್ಷಿಗಳು ದಕ್ಷಿಣ ಭಾರತದಲ್ಲಿ ಅಪರೂಪ ಜೊತೆಗೆ ಫಸಲು ಬಿಡುವುದಂತೂ ಇನ್ನೂ ಅಪರೂಪ. ಸಂಗ್ರಹಿಸಿದ ಶಿವನಿಗೆ ಪ್ರಿಯವಾದ ಈ ರುದ್ರಾಕ್ಷಿ ಕಾಯಿಗಳನ್ನು ಕೊಡಗಿನ ನಾನಾ ಶಿವಾದೇವಾಯಲಕ್ಕೆ, ಶ್ರೀ ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ ಶಿವಾರಾಧನ ಮಠಗಳಿಗೆ ಕಾಯಿ ನೀಡಿದ್ದು ಹಾಗು ಕೊಡಗಿನ ಕೆದಕಲ್ಲö್ನ ಭದ್ರಕಾಳಿ ದೇವಾಲಯಕ್ಕೆ ಇಗ್ಗುತಪ್ಪ ದೇವಾಲಯಕ್ಕೆ, ಮದೆನಾಡಿನ ಮದೆಮಹದೇಶ್ವರ ದೆವಾಲಯಕ್ಕೆ ಗಿಡಗಳನ್ನು ನೀಡಲಾಗಿದೆಂದು ಅಯ್ಯಂಡ್ರ ಗಿರೀಶ್ ಹೇಳುತ್ತಾರೆ. ರುದ್ರಾಕ್ಷಿ ಕಾಯಿಗಳನ್ನು ತಂದು ಮಣಿಗಳಾಗಿ ಪೋಣಿಸಿ ಮಾಲೆಯಾಗಿಸಿ ದೇವರ ನೆಲೆಯಲ್ಲಿಟ್ಟು ನಿತ್ಯದ ಜಪಕ್ಕೆ ಬಳಸಲಾಗುತಿದ್ದು ಕುಟುಂಬಕ್ಕೆ ಉತ್ತಮ ಫಲ ಜೊತೆಗೆ ಧರಿಸಿದರೆ ಒಳ್ಳೆಯದಾಗುವುದೆಂಬ ನಂಬಿಕೆಯೊAದಿಗೆ ಕುಟುಂಬದವರಲ್ಲರು ಲಾಕೆಟ್ ಮಾಡಿ ಧರಿಸಿದ್ದ ಬಗ್ಗೆ ಪತ್ನಿ ಹೇಳುತ್ತಾರೆ. ಕ್ರಷಿಯ ಬಗ್ಗೆ ಆಸಕ್ತಿಹೊಂದಿರುವ ಗಿರೀಶ್‌ರವರು ತೋಟದಲ್ಲಿ ಮೂರು ರುದ್ರಾಕ್ಷಿ ಗಿಡಗಳನ್ನು ನೆಟ್ಟು ಪೋಶಿಸುತಿರುವ ಜೊತೆಗೆ ಜಾಯಿಕಾಯಿ, ಅಂಜುರ(ಫಿಗ್) ನಾನಾ ವಿಧದ ಸುಗಂಧ ದ್ರವ್ಯದ ಮರಗಳು,ಕಾಚಂಪುಳಿಯAತಹ ಹಲವು ಬಗೆಯ ಮರಗಳನ್ನು ನೆಟ್ಟಿದ್ದಾರೆ. ರುದ್ರಾಕ್ಷಿ ಕಾಯಿಯಲ್ಲಿ ವಿಶೇಷ ಪಟ್ಟ ಔಷಧಿಯ ಗುಣ ಇರುವುದರಿಂದ ಬೋಂಬೆಯ ಮಹೇಶ್‌ಗೋಡ್ ಬೇಲ್ ಎಂಬವರು ಗಿರೀಶ್ ರವರನ್ನು ಸಂಪರ್ಕಿಸಿ ಕಾಯಿಗಳನ್ನು ಕಳುಸಿಕೊಡಬೇಕೆಂದು ಬೇಡಿಕೆ ಇಟ್ಟಮೇರೆಗೆ ಕಳುಸಿದ್ದಾರೆ. ಮನೆಯಲ್ಲಿ ಸಂಗ್ರಹಿಸಿಟ್ಟ ಕಾಯಿಗಳನ್ನು ಬಂಧನೆಟ್ಟರಿಷ್ಟರಿಗೆಲ್ಲ ನೀಡುತಿರುವ ಬಗ್ಗೆ ಹೇಳುತ್ತಾರೆ. ಹೆಚ್ಚಿನ ಮಹಿತಿಗಾಗಿ ೯೪೪೮೦೪೫೪೯೭ ಸಂಪರ್ಕಿಸ ಬಹುದು. -ಪುತ್ತರಿರ ಕರುಣ್ ಕಾಳಯ್ಯ, ಪಪ್ಪುತಿಮ್ಮಯ್ಯ

Wednesday, 25 September 2024

*ಆರೋಗ್ಯದ ದೃಷ್ಟಿಯಲ್ಲಿ ಸಾವಯವ ಕೃಷಿ ಪದ್ಧತಿ*-ಡಾ || ಗ್ರೀಷ್ಮಾ ಗೌಡ ಆರ್ನೋಜಿ

ಡಾ || ಗ್ರೀಷ್ಮಾ ಗೌಡ ಆರ್ನೋಜಿ ವೈದ್ಯರು,ಸಂಪೂರ್ಣ ಪಾಲಿಕ್ಲಿನಿಕ್ ಕಡಬ 'ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ', ಎಂಬ ಮಾತಿದೆ.ಅದರಂತೆ, ನಾವು ಹೇಗೆ ನಮ್ಮ ದೇಹವನ್ನು ನೋಡಿಕೊಳ್ಳುತ್ತೇವೆಯೋ,ಹಾಗೆ ನಮಗೆ ಬರುವ ರೋಗಗಳನ್ನು ತಡೆಯ ಬಹುದು.ಸರಿಯಾದ ಆಹಾರ ಪದ್ಧತಿ, ವ್ಯಾಯಾಮ,ವಿಶ್ರಾಂತಿ,ನಿದ್ದೆ,ಒಳ್ಳೆಯ ಆಚಾರ-ವಿಚಾರಗಳನ್ನು ಪಾಲಿಸುವುದು ಇವೆಲ್ಲ ಸದೃಢ ಆರೋಗ್ಯಕ್ಕೆ ಸುಲಭ ಮಾರ್ಗ.ಉತ್ತಮ ಆಹಾರ ಪದ್ಧತಿ ಅಂದಾಗ ಬರಿ ಅಡುಗೆ ಮನೆಗೆ ಸಂಬಂಧ ಪಟ್ಟಿದ್ದಲ್ಲ.ಆಹಾರ ಪದಾರ್ಥಗಳು ಎಲ್ಲಿಂದ ಬಂತು ಹಾಗೂ ಅವುಗಳನ್ನು ಹೇಗೆ ಬೆಳೆಸಲಾಯಿತು ಎಂಬುದರ ಬಗ್ಗೆ ಯೋಚಿಸಬೇಕು. ರೈತರು ಉತ್ತಮ ಇಳುವರಿಗೆ ರಾಸಾಯನಿಕ ರಸ ಗೊಬ್ಬರಗಳು, ಕಳೆನಾಶಕ ,ವಿಷಪೂರಿತ ಕೀಟನಾಶಕಗಳನ್ನು ಬಳಸುತ್ತಾರೆ.ಇದರಿಂದಾಗಿ, ಮಾರಣಾಂತಿಕ ರೋಗಗಳು ಬರುತ್ತವೆ. ಸಸ್ಯದ ಬೆಳವಣಿಗೆಯನ್ನು ಹೆಚ್ಚಿಸಲು ನೈಟ್ರೋಜನ್, ಪಾಸ್ಫರಸ್, ಫೋಟೋಸ್ ಗಳನ್ನು ಹೊಂದಿದ ರಾಸಾಯನಿಕ ರಸಗೊಬ್ಬರಗಳನ್ನು ಬಳಸುತ್ತಾರೆ.ಇದು ಕುಡಿಯುವ ನೀರನ್ನು ಕಲುಷಿತಗೊಳಿಸುತ್ತದೆ. ಜೊತೆಗೆ,ನೀರಲ್ಲಿದ್ದ ಜಲಚರಗಳನ್ನು ನಾಶ ಮಾಡಿ ವಿಷಪೂರಿತ ಸಸ್ಯಗಳು ಬೆಳೆಯುವಂತೆ ಮಾಡುತ್ತದೆ.ಇದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಕೀಟನಾಶಕಗಳು ಕೃಷಿಗೆ ಬರುವ ಹುಳ-ಉಪ್ಪಟೆಗಳನ್ನು ನಾಶಮಾಡುತ್ತದೆ.ಅದೇ ಕೀಟನಾಶಕ ಗಳನ್ನು ಬಳಸಿದ ಹಣ್ಣು,ತರಕಾರಿಗಳನ್ನು ನಾವು ತಿಂದರೆ ಕ್ಯಾನ್ಸರ್, ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಗಳು,ಬಂಜೆತನ, ಬೆಳವಣಿಗೆ ಕುಂಟಿತಗೊಳ್ಳುವ ಸಮಸ್ಯೆಗಳು ಉಂಟಾಗುತ್ತದೆ. ಈಗ ನಾನಾ ರೀತಿಯ ಕಳೆ ನಾಶಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದನ್ನು ಸಿಂಪಡಿಸಿದರೆ ಎರಡು ದಿನದಲ್ಲಿ ಹುಲ್ಲು ಸುಟ್ಟು ಹೋಗುತ್ತದೆ.ಇದರಲ್ಲಿ ಬಳಸುವ ಗ್ಯೆಫಾಸೆಟ್ ಎಂಬ ರಾಸಾಯನಿಕ ವಸ್ತು ಕ್ಯಾನ್ಸರ್ ಕಾರಕವಾಗಿದೆ.ಜೊತೆಗೆ,ದೇಹದ ಹಾರ್ಮೋನ್ ಸಮಸ್ಯೆ,ಬಂಜೆತನ,ಬುದ್ಧಿಮಾಂದ್ಯತೆ, ಬೆಳವಣಿಗೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನೆಲ್ಲ ನೋಡಿದಾಗ ನಮಗೆ ಅನಿಸುವುದು ಒಂದೆ, ನಾವು ದಿನನಿತ್ಯ ಸೇವಿಸುವುದು ವಿಷಪೂರಿತ ಆಹಾರವೇ?. ಹೇಗೆ ನಾವು ಇದರಿಂದ ಹೊರಬಂದು ಸ್ವಚ್ಛ ಆಹಾರ ಪದಾರ್ಥಗಳನ್ನು ಸೇವಿಸುವ ಎಂದು. ಅದಕ್ಕೆ ಇರುವುದು ಒಂದೇ ದಾರಿ ಸಾವಯವ ಕೃಷಿ. ಸಾವಯವ ಕೃಷಿ ಎಂದರೆ ಸುಸ್ಥಿರತೆ, ಜೀವವೈವಿಧ್ಯ ಮತ್ತು ಪರಿಸರ ಸಮತೋಲನಕ್ಕೆ ಒತ್ತು ನೀಡುವ ಕೃಷಿ ವಿಧಾನ. ಪ್ರಾಣಿಗಳ ಗೊಬ್ಬರ,ದನದ ಹಟ್ಟಿಗೊಬ್ಬರ,ಜೀವಾಮೃತ ಅಥವಾ ನೈಸರ್ಗಿಕ ತ್ಯಾಜ್ಯಗಳನ್ನು ಉಪಯೋಗಿಸಿ ಮಾಡುವ ಕೃಷಿ ಪದ್ಧತಿ.ಇದರಲ್ಲಿ,ಜೈವಿಕ ಕೀಟ ನಿಯಂತ್ರಣ,ಸರದಿ ಬೆಳೆ,ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಹೆಚ್ಚು ಕಾಳಜಿ ವಹಿಸುತ್ತದೆ. *ನಮ್ಮ ಆರೋಗ್ಯದ ಮೇಲೆ ಸಾವಯವ ಕೃಷಿಯ ಆಹಾರದ ಪ್ರಯೋಜನಗಳೇನು* * ಪ್ರತಿಯೊಬ್ಬರ ಮನೆಯ ಸುತ್ತಲು ಒಂದು ಸಣ್ಣ ಕೈತೋಟ ಮಾಡಿದರೆ, ತಮ್ಮ ದಿನನಿತ್ಯಕ್ಕೆ ಬೇಕಾದ ತರಕಾರಿ, ಸೊಪ್ಪು, ಹಣ್ಣು-ಹಂಪಲುಗಳನ್ನು ತಾವೇ ಬೆಳೆಸಬಹುದು. ಈ ರೀತಿ ಬೆಳೆದ ಆಹಾರ ಉತ್ಪನ್ನಗಳಲ್ಲಿ ದೇಹಕ್ಕೆ ಬೇಕಾದ ಜೀವ ಸತ್ವಗಳು, ಖನಿಜಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರೆಯುತ್ತದೆ.ಇದು, ದೇಹದಲ್ಲಿ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸುತ್ತದೆ ಹಾಗೂ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. * ಸಾವಯವ ಕೃಷಿಯಲ್ಲಿ ಯಾವುದೇ ಹಾರ್ಮೋನ್ ಗಳು ಅಥವಾ ರಾಸಾಯನಿಕ ಗಳನ್ನು ಬಳಸದ ಕಾರಣ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ * ಸಾವಯವ ಕೃಷಿಯಿಂದ ಬೆಳೆದ ಆಹಾರ ಉತ್ಪನ್ನ ಗಟ್ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವುದರಿಂದ ಜೀರ್ಣಾಂಗವ್ಯೂಹದ ಆರೋಗ್ಯ ವನ್ನು ಕಾಪಾಡುತ್ತದೆ. * ಸಾವಯವ ಕೃಷಿಯಿಂದ ನಮಗೆ ಬೇಕಾದ ಋತುಕಾಲಿಕ ಆಹಾರಗಳು ದೊರೆಯುತ್ತವೆ. ಇದು ನಮಗೆ ಆ ಋತುವಿನ ಆರೋಗ್ಯವನ್ನು ಕಾಪಾಡುತ್ತದೆ.ಜೊತೆಗೆ,ಸ್ಥಾನಿಕ ಆಹಾರ ಉತ್ಪನ್ನ ಸಿಗುತ್ತದೆ.ಇದು,ನಮ್ಮ ದೇಹದಲ್ಲಿ ಕೊರತೆ ಇರುವ ಜೀವಾಂಶವನ್ನು ಒದಗಿಸುತ್ತದೆ. * ನೈಸರ್ಗಿಕ ಕೃಷಿಯಲ್ಲಿ ದನ-ಕರುಗಳನ್ನು ಗುಡ್ಡೆಗೆ ಮೇಯಲು ಬಿಡುವುದರಿಂದ ಆ ದನದ ಹಾಲು, ಸಂಸ್ಕರಿಸಿದ ಹಾಲಿನಲ್ಲಿ ಕೊರತೆ ಇರುವ ವಿಟಮಿನ್ ಡಿ ಅಂಶವನ್ನು ಒದಗಿಸುತ್ತದೆ. ಸಾವಯವ ಕೃಷಿ ಉತ್ಪನ್ನಗಳು ಆರೋಗ್ಯ ದೃಷ್ಟಿಯಿಂದ ಎಷ್ಟು ಉಪಯುಕ್ತವೋ, ಈ ರೀತಿಯ ಕೃಷಿ ಪದ್ಧತಿ ಪರಿಸರದ ಸಮತೋಲನಕ್ಕೆ ಅಷ್ಟೇ ಉಪಕಾರಿಯಾಗಿದೆ. ಹಾಗಾಗಿ,ಆದಷ್ಟು ನೈಸರ್ಗಿಕ ಕೃಷಿ ಪದ್ಧತಿಯನ್ನು ಪಾಲಿಸೋಣ ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಯುಕ್ತ ಕೃಷಿ ಭೂಮಿಯನ್ನು ಒದಗಿಸೋಣ.

Thursday, 12 September 2024

ಕುಕ್ಕೆ ಸುಬ್ರಮಣ್ಯ ದಲ್ಲಿ "ಮಿಯಾವಕಿ" ವನ ಆರಂಭ-ರೋಟರಿ ಕ್ಲಬ್ ಸುಬ್ರಮಣ್ಯ ದಿಂದ

 ಬರಹ :ಷಣ್ಮುಖ ಕಟ್ಟ,ಅಗ್ರಿಕಲ್ಚರ್ ಡೆಸ್ಕ್ 



ನಿನ್ನೆ (12 .9 .24) ಕುಕ್ಕೆ ಸುಬ್ರಮಣ್ಯ ದಲ್ಲಿ "ಮಿಯಾವಕಿ" ವನ ಆರಂಭಕ್ಕೆ ಹೋಗಿದ್ದೆ .ರೋಟರಿ ಕ್ಲಬ್ ಸುಬ್ರಮಣ್ಯ ಮತ್ತು ಇತರ ಸಂಘ ಸಂಸ್ಥೆಗಳ ಮುಂದಾಳುವತ್ವ ದಲ್ಲಿ ನಡೆದಿತ್ತು .ಸಂಪನ್ಮೂಲ ವಕ್ತಿ ಯಾಗಿ ಶ್ರೀ ಕೆ ಮಹೇಶ್ shenoy ರವರು ದೂರದ ಕಟಪಾಡಿ ಉಡುಪಿನಿಂದ ಬಂದಿದ್ದರು .ಸುಬ್ರಮಣ್ಯ ಕೆ. ಸ್. ಸ್. ಡಿಗ್ರಿ ಕಾಲೇಜು ವಿದ್ಯಾರ್ಥಿ ಗಳು ಸ್ವಯಂಸೇವಕರಾಗಿ ಪಾಲ್ಗೊಂಡರು .ಮಹೇಶ್ shenoy ರವರು ಮಿಯಾವಕಿ ಅರಣ್ಯ ತಜ್ಞ ರಾಗಿದ್ದು ಕರ್ನಾಟಕ ದಾದ್ಯಂತ ಹಲವಾರು ಮಿಯಾವಕಿ ಕಾಡುಗಳನ್ನು ನಿರ್ಮಿಸಿದ್ದಾರೆ .ಮಹೇಶ್ shenoy ರವರ ಪರಿಸರ ದ ಬಗ್ಗೆ ಭಾಷಣ ಕೇಳಿ ಮೈ ರೋಮಾಂಚನ ಆಯಿತು .ಮಹೇಶ್ shenoy ರವರು online ನಲ್ಲಿ "ಮಾರ್ನಿಂಗ್ ಮಿರಾಕಲ್ " ಎಂಬ ಕಾನ್ಸೆಪ್ಟ್ ನಲ್ಲಿ ಕ್ಲಾಸ್ ಕೊಡುತಾರೆ . ಬೆಳಿಗ್ಗೆ ಬೇಗ ಬ್ರಾಹ್ಮೀ ಮುಹೂರ್ತ ದಲ್ಲಿ ಎದ್ದೇಳಿದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಎಂದು ಇವರ ಕಾನ್ಸೆಪ್ಟ್ .ಇವರ ತರಗತಿ ಇಂದ ಪ್ರೇರಿಪಿತರಾಗಿ ಹಲವಾರು ಜೀವನದಲ್ಲಿ ಸಾಧನೆ ಮಾಡಿದ್ದಾರೆ .ಇಂತಹ ವ್ಯಕ್ತಿಯ ಪರಿಚಯ ವಾದದ್ದು ನನ್ನ ಸೌಭಾಗ್ಯ .ಸುಬ್ರಮಣ್ಯ ರೋಟರಿ ಕ್ಲಬ್ ನ ಇಂತಹ ಪರಿಸರ ಕಾಳಜಿಯ ಕೆಲಸ ಅಭಿನಂದನೆಗೆ ಅರ್ಹ .ಯಾವುದೇ ಪ್ರಚಾರ ಬಯಸದೆ ಸುಬ್ರಮಣ್ಯ ರೋಟರಿ ಕ್ಲಬ್ ಇಂತಹ ಹಲವಾರು ಸಮಾಜ ಕಾರ್ಯ ಕೆಲಸಗಳನ್ನು ಮಾಡಿದೆ ಮತ್ತು ಮಾಡುತ್ತಿದೆ ."ಮಿಯಾವಕಿ " ಬಗ್ಗೆ ಮಾಹಿತಿ ಮತ್ತು ನಾನ ುಕೂಡಾ ಗಿಡನೆಡುವ ಕಾರ್ಯ ದಲ್ಲಿ ಪಾಲ್ಗೊಂಡದ್ದು ನೆನಪಿನಲ್ಲಿ ಅಚ್ಚಳಿಯದಂತೆ ಇರುವbಸಂತೋಷದ ವಿಷಯ -------------------------------------------------------------------------------------------

 ವಿಷಯ .ಜಪಾನ್‌ ಮೂಲದ ʻಮಿಯಾವಾಕಿ ಫಾರೆಸ್ಟ್‌ʼ(From Facebook)

✍🏻 ನಾಗೇಶ್ ಹೆಗ್ಡೆ 

ಇಪ್ಪತ್ತು ವರ್ಷಗಳಲ್ಲಿ ಬೆಳೆಯುವಷ್ಟು ಅರಣ್ಯವನ್ನು ಐದೇ ವರ್ಷಗಳಲ್ಲಿ, ಅಷ್ಟೇ ದಟ್ಟವಾಗಿ  ನಿರ್ಮಿಸುವ ಸಾಧನೆಗೆ ʻಮಿಯಾವಾಕಿ ವಿಧಾನʼ ಎನ್ನುತ್ತಾರೆ.  ಚಿಕ್ಕ ಪುಟ್ಟ (10x40ಅಡಿ) ವಿಸ್ತೀರ್ಣದಲ್ಲೂ ಇಂಥ ಅರಣ್ಯಗಳನ್ನು ಬೆಳೆಸಬಹುದು.
ಇಂದು, ಮಾರ್ಚ್‌ 21 ವಿಶ್ವ ಅರಣ್ಯ ದಿನ. ಹಿಂದೆಂದೂ ಕಾಣದಷ್ಟು ತೀವ್ರ ಮಟ್ಟದಲ್ಲಿ ಭೂಮಿ 2023ರಲ್ಲಿ ಬಿಸಿಯಾಗಿದೆ ಎಂದು ವಿಶ್ವ ಪವನವಿಜ್ಞಾನ ಸಂಸ್ಥೆ ಹೇಳಿದೆ. ತಾಪಮಾನದ ಈ ಏರಿಕೆ ಈ ವರ್ಷ ಇನ್ನೂ ಹೆಚ್ಚುತ್ತದೆ ಎಂತಲೂ ವಿಜ್ಞಾನಿಗಳು ಹೇಳುತ್ತಿದ್ದಾರೆ. 
ಅದನ್ನು ತಡೆಯಲು ನಮಗೆ ಸದ್ಯದಲ್ಲಂತೂ ಸಾಧ್ಯವಿಲ್ಲ. ಆದರೆ ಸ್ವಲ್ಪ ಪ್ರಯತ್ನಪಟ್ಟರೆ ತ್ವರಿತವಾಗಿ ದಟ್ಟ ಅರಣ್ಯವನ್ನು ನಿರ್ಮಿಸಿಕೊಂಡರೆ ಅಷ್ಟರ ಮಟ್ಟಿಗೆ ನಮ್ಮ ಸಮೀಪ ತಂಪನ್ನು ಸೃಷ್ಟಿಸಬಹುದು. ಆಘಾತವನ್ನು ತಗ್ಗಿಸಿಕೊಳ್ಳಬಹುದು. ತಮ್ಮದಲ್ಲದ ತಪ್ಪಿನಿಂದ ಸಂಕಟ ಅನುಭವಿಸಬೇಕಾದ ಪ್ರಾಣಿಪಕ್ಷಿಗಳ ಸಂತತಿಯೂ ಆಶ್ರಯ ಪಡೆಯಬಹುದು.  ಪ್ರಕೃತಿ ನಮಗೆ ಅಷ್ಟು ಕಾಲಾವಕಾಶವನ್ನು ನೀಡಿದೆ.
ಮಿಯಾವಾಕಿ ಅರಣ್ಯ ನಿರ್ಮಾಣದ ಕ್ರಮಗಳು ಹೀಗಿವೆ:
ಮೊದಲು ನಿಮ್ಮ ಊರಿನ ಆಸುಪಾಸಿನ ಸಹಜ ನಿಸರ್ಗದಲ್ಲಿ ಯಾವ ಯಾವ ಗಿಡಮರ ಬೆಳೆಯುತ್ತವೆ ಎಂಬುದನ್ನು ಪಟ್ಟಿ ಮಾಡಿಕೊಳ್ಳಿ.
ಅವುಗಳಲ್ಲಿ ಎತ್ತರಕ್ಕೆ ಬೆಳೆಯುವ ಮರಗಳು ಯಾವವು, ಮಧ್ಯಮ ಎತ್ತರಕ್ಕೆ ಬೆಳೆಯುವುದು ಯಾವವು ಮತ್ತು ಆಳೆತ್ತರಕ್ಕೆ ಮಾತ್ರ ಬೆಳೆಯುವ ಸಸ್ಯಗಳು ಯಾವವು ಎಂಬುದನ್ನು ಗಮನಿಸಿ. ಅವೆಲ್ಲವುಗಳ ಬೀಜಗಳನ್ನು (ಇಲ್ಲವೆ ಅಂಕುರಗಳನ್ನು ಅಥವಾ ಗಡ್ಡೆ/ಟೊಂಗೆಗಳನ್ನು) ಶೇಖರಿಸಿ ಇಟ್ಟುಕೊಳ್ಳಿ.
ಮುಂದಿನ ಹಂತದಲ್ಲಿ (ಇದು ತುಸು ಕಷ್ಟ) ನೀವು ಅರಣ್ಯ ಬೆಳೆಸಲು ಆಯ್ಕೆ ಮಾಡಿಕೊಂಡ ತಾಣದಲ್ಲಿ ಮೂರು/ನಾಲ್ಕು ಅಡಿ ಆಳವಾದ ಗುಂಡಿಯನ್ನು ತೋಡಿರಿ. ಅಥವಾ ಜೆಸಿಬಿ ಮೂಲಕ ಉದ್ದನ್ನ ಕಂದಕವನ್ನು ತೋಡಿ. ಅದರಲ್ಲಿ ಕಳಿತ ಗೊಬ್ಬರ, ತರಗೆಲೆ, ಒಣಹುಲ್ಲು ಅಥವಾ ಕೊಕೊಪಿತ್‌ನಂಥ ನಾರುಗಳನ್ನೂ  ತುಸು ಮಣ್ಣನ್ನೂ ಸೇರಿಸಿ ತುಂಬಿರಿ. 
ಅದರಲ್ಲಿ ಅತ್ಯಂತ ಸಾಂದ್ರವಾಗಿ, ಅಂದರೆ ಒಂದೊಂದು ಮೀಟರಿಗೆ ಎರಡು ಮೂರು  ಸಸಿಗಳು ಚಿಗುರಿ ಏಳುವಂತೆ ವ್ಯವಸ್ಥೆ ಮಾಡಿ. ಅಂದರೆ ಬೀಜ/ಗಡ್ಡೆ/ ಮೊಳಕೆಗಳನ್ನು ಊರಿ, ಮುಚ್ಚಿ, ಆರಂಭದಲ್ಲಿ ನೀರುಣ್ಣಿಸಿ. 
ಮಳೆಗಾಲದ ಪ್ರಾರಂಭದಲ್ಲಿ ಇದನ್ನು ಮಾಡುವುದು ಒಳ್ಳೆಯದು. ಅಥವಾ ಸಸ್ಯಗಳು ಚಿಗುರಿ ಏರುವವರೆಗೂ ನೀರುಣ್ಣಿಸಬೇಕು. ಒಂದೇ ವರ್ಗದ  (ಎತ್ತರ, ಮಧ್ಯಮ ಮತ್ತು ಗಿಡ್ಡ) ಸಸ್ಯಗಳು ಒಂದರ ಪಕ್ಕ ಒಂದು ಬಾರದಂತೆ, ಮಧ್ಯೆ ಮಧ್ಯೆ ವಿಭಿನ್ನ ಎತ್ತರದವು  ಏಳುವಂತೆ ಬೀಜ ನಾಟಿ ಮಾಡಿ.
ಗೊಬ್ಬರ ಮತ್ತು ಮೆದುಮಣ್ಣಿನ ಅಂಶಗಳು ಇರುವುದರಿಂದ ಅವೆಲ್ಲ ಸಸ್ಯಗಳೂ ಆಳಕ್ಕೆ ಬೇರುಗಳನ್ನು ಇಳಿಸುತ್ತ ತ್ವರಿತವಾಗಿ ಮೇಲೇರುತ್ತವೆ. ಸೂರ್ಯನ ಬೆಳಕಿಗಾಗಿ ಪೈಪೋಟಿ ಇರುವುದರಿಂದ ಹಲಸು, ಮಾವು, ನಂದಿ, ಹೊನ್ನೆಯಂಥ ಸಸ್ಯಗಳೂ ನೇರವಾಗಿ ತ್ವರಿತವಾಗಿ ಮೇಲೇಳುತ್ತವೆ. ತಕ್ಷಣ ಮೇಲಕ್ಕೆ ಏಳದಂತೆ ಕಂಡರೂ ಚಿಂತೆಯಿಲ್ಲ. ಅವು ಆಳಕ್ಕೆ ಬೇರುಗಳನ್ನು ಇಳಿಸುತ್ತಿರುತ್ತವೆ. 
ಮೂರೇ ತಿಂಗಳಲ್ಲಿ ಒಂದು ಮೀಟರ್‌ಗಿಂತ ಆಳಕ್ಕೆ ಬೇರು ಇಳಿದಿರುತ್ತವೆ. ಮಣ್ಣು ಸಡಿಲ ಇರುವುದರಿಂದ ಅವಕ್ಕೆ ಉಸಿರಾಟವೂ ಸಲೀಸಾಗಿರುತ್ತದೆ. ಎಲ್ಲವೂ ಶೀಘ್ರ ಮೇಲೇಳುತ್ತವೆ. ಮೊದಲ ಮಳೆಗೇ ಅಣಬೆಗಳು ಏಳುವುದನ್ನು ಕಾಣುತ್ತೀರಿ. ಅದರ ಅರ್ಥ ಅಣಬೆಯ ಬೇರುಗಳ ಜಾಲ ನೆಲದಾಳದಲ್ಲಿ ಹಬ್ಬಿದೆ ಅಂತ. ಇನ್ನು ಚಿಂತೆ ಇಲ್ಲ.  ಮಳೆ ಸಾಕಷ್ಟು ಇಲ್ಲದಲ್ಲಿ ನೀರು ಕೊಡುತ್ತಿರಿ. ತರಗೆಲೆಗಳ ದಟ್ಟ ಮುಚ್ಚಿಗೆ ಇರಲಿ.  ಮೊದಲ ಎರಡು ಮೂರು ವರ್ಷ ಅಷ್ಟೆ. ಆಮೇಲೆ ಏನನ್ನೂ ಕೊಡಬೇಕಾಗಿಲ್ಲ.
ಮೊದಲ ಎರಡು ಮೂರು ವರ್ಷ ನೆಲಮಟ್ಟದಲ್ಲಿ ಸಾಕಷ್ಟು ಕಳೆ ಬೆಳೆಯಬಹುದು. ಆಗೆಲ್ಲ ಅವುಗಳನ್ನು ಕಿತ್ತು ಅಲ್ಲಲ್ಲೇ ಹರವುತ್ತಿರಿ. ಗಿಡಗಳು ಎತ್ತರಕ್ಕೆ ಬೆಳೆದು ದಟ್ಟ ನೆರಳು ಆವರಿಸುವುದರಿಂದ ಕಳೆಯ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತದೆ. ಪ್ರಾಣಿಪಕ್ಷಿಗಳು, ಕೀಟಪತಂಗಗಳು,  ಇರುವೆ ಗೆದ್ದಲುಗಳು, ಎರೆಹುಳುಗಳು ಅಲ್ಲಿಗೆ ಆಶ್ರಯಕ್ಕೆ ಬಂದು ಮುಂದೆ ಅವೇ ಅರಣ್ಯ ನಿರ್ವಹಣೆ ಮಾಡುತ್ತವೆ. 
ಸಹಜ ನಿಸರ್ಗದಲ್ಲಿ ನೂರು ವರ್ಷಗಳಲ್ಲಿ ಬೆಳೆಯುವ ಅರಣ್ಯವನ್ನು ನಮ್ಮ ಯತ್ನದಿಂದ ಹತ್ತೇ ವರ್ಷಗಳಲ್ಲಿ ನಿರ್ಮಿಸಬಹುದು. ಏನನ್ನೂ ಬೆಳೆಸಲಾಗದಂಥ ದಟ್ಟ ದುಸ್ಥಿತಿಯ ತಾಣದಲ್ಲೂ ಇಂಥ ಅರಣ್ಯವನ್ನು ಬೆಳೆಸಬಹುದು. 
ಮಣ್ಣಿನಲ್ಲಿ ಸತ್ವ ಏನೇನೂ ಇಲ್ಲದಿದ್ದರೂ ಕ್ರಮೇಣ ನೀವು ಇಟ್ಟ ಮುಚ್ಚಿಗೆಯಲ್ಲೇ ಸೂಕ್ಷ್ಮಾಣುಗಳು ಸಸ್ಯಗಳಿಗೆ ಪೋಷಣೆ ನೀಡುತ್ತವೆ. 
ಅರಣ್ಯ ಬೆಳೆದಂತೆಲ್ಲ ಎಲೆಗಳಿಂದ ಹೊಮ್ಮುವ ತೇವಾಂಶ ಆಕಾಶಕ್ಕೆ ಹೋಗುವುದಿಲ್ಲ. ಅಲ್ಲಲ್ಲೇ ತಂಪಿನ ವಾತಾವರಣದಲ್ಲಿ ಇಬ್ಬನಿ ರೂಪದಲ್ಲಿ ಬೀಳುತ್ತಿರುತ್ತದೆ. 
ಜಪಾನಿನ ಅಕಿರಾ ಮಿಯಾವಾಕಿ ಎಂಬ ಸಸ್ಯವಿಜ್ಞಾನಿ 1970ರಲ್ಲಿ ರೂಢಿಗೆ ತಂದ ಈ ವಿಧಾನ ಪೂರ್ವ ಏಷ್ಯದಲ್ಲಿ ತುಂಬ ಆಕರ್ಷಣೀಯವಾಗಿ ಬೆಳೆದವು. ಬೆಂಗಳೂರಿನ ಬಳಿ ಇರುವ ಟೊಯೊಟಾ ಕಿರ್ಲೊಸ್ಕರ್‌ ಕಂಪನಿಯ ಆವರಣದಲ್ಲಿ ಆತನ ಸಲಹೆಯ ಪ್ರಕಾರ ಮಾದರಿ ಅರಣ್ಯವನ್ನು ಬೆಳೆಸಲಾಯಿತು. ಆ ದಿನಗಳಲ್ಲಿ ಮಿಯಾವಾಕಿಯ ಸಹಾಯಕ್ಕೆಂದು ನಿಯುಕ್ತಿಗೊಂಡವರು  ಕಾರುಗಳ ಉತ್ಪಾದನೆಯಲ್ಲಿ ತೊಡಗಿದ್ದ ಶುಭೇಂದು ಶರ್ಮಾ.  ಅವರ ಕಣ್ಣೆದುರೇ ಎರಡೂವರೆ ಎಕರೆಯಲ್ಲಿ 30 ಸಾವಿರ ಗಿಡಗಳು ತಲೆ ಎತ್ತಿದವು (ನಾನಿದನ್ನು ಕಣ್ಣಾರೆ ನೋಡಿದ್ದೇನೆ).
ಶರ್ಮಾ ತನ್ನ ಎಂಜಿನಿಯರಿಂಗ್‌ ವೃತ್ತಿಯನ್ನು ತೊರೆದು ಈ ಬಗೆಯ ಅರಣ್ಯಗಳನ್ನು ಬೆಳೆಸಲೆಂದೇ ಪೂರ್ಣಾವಧಿ ಮೀಸಲಿಟ್ಟಿದ್ದಾರೆ. ಇಂದು ಭಾರತದ ಹತ್ತಾರು ನಗರಗಳಲ್ಲಿ ಮತ್ತು ಪಶ್ಚಿಮದ ಹತ್ತಾರು ರಾಷ್ಟ್ರಗಳಲ್ಲಿ ಶುಭೇಂದು ಶರ್ಮಾ ನಿರ್ಮಿಸಿದ ಮಿಯಾವಾಕಿ ಅರಣ್ಯಗಳು ತಲೆ ಎತ್ತಿವೆ.
ಅವರ ಅನೇಕ ಉಪನ್ಯಾಸಗಳು ಯೂಟ್ಯೂಬ್‌ನಲ್ಲಿ ನೋಡಸಿಗುತ್ತವೆ. ತುರ್ತಾಗಿ ಅರಣ್ಯ ಬೆಳೆಸುವ ಪ್ರಾಥಮಿಕ ಮಾಹಿತಿ ನೀಡುವ ಅವರ ಟೆಡ್‌ ಉಪನ್ಯಾಸದ ಲಿಂಕ್‌ ಇಲ್ಲಿದೆ: 
ನೋಡಿ.  ವಿಡಿಯೊದ ಕನ್ನಡದ ಡಬ್ಬಿಂಗ್‌ ಸಾಧ್ಯವಿದೆಯೊ ನೋಡಿ.   ಇತರರೊಂದಿಗೆ ಹಂಚಿಕೊಳ್ಳಿ. ವಿಶೇಷವಾಗಿ ಶಾಲಾ ಶಿಕ್ಷಕರು ಮಕ್ಕಳ ಜೊತೆ ಕೈಜೋಡಿಸಿ ಇಂಥ ಅರಣ್ಯಗಳನ್ನು ನಿರ್ಮಿಸಬಹುದು.  ನಾವು ಬಿಸಿಪ್ರಳಯದ ತುರ್ತು ಸ್ಥಿತಿಯ ಕಡೆ ಹೊರಳುತ್ತಿದ್ದೇವೆ. ಮಳೆಗಾಲ ಬರುವವರೆಗೆ ಕಾಯುತ್ತ ಕೂರಬೇಡಿ. ಈಗಲೇ ಬೀಜ ಸಂಗ್ರಹಣೆಗೆ, ಸೂಕ್ತ ಸಸ್ಯಗಳ ಪತ್ತೆಗೆ ತೊಡಗಿಕೊಳ್ಳಿ.



Thursday, 8 August 2024

ಅಪಾಯಕಾರಿ ಕೀಟನಾಶಕಗಳ ಬಳಕೆ... ?!






ಬರಹ: ಕೂಡಂಡ ರವಿ, ಹೊದ್ದೂರು. 

ಮೊ. 8310130887. 

 ಕೃಷಿಕರು ಅಧಿಕ ಬೆಳೆ ಬೆಳೆಯುವ ಹುಮ್ಮಸ್ಸಿನಲ್ಲಿ ಮಿತಿ ಮೀರಿದ ಕೀಟ ನಾಶಕಗಳನ್ನು ಬಳಸುತ್ತಿರುವರು. ಇವು ಜೀವಸಂಕುಲಕ್ಕೆ, ಮಾನವನಿಗೂ ಹಾನಿಕಾರಕವಾಗಿವೆ. ಮಾನವ ಜೀವವನ್ನು ಬಲಿ ಪಡೆಯುವದರ ಜೊತೆಗೆ, ಬಹುತೇಕ ಮಂದಿಯ ಸರಣಿ ಅನಾರೋಗ್ಯಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿವೆ. 

ಮಾರಾಟಗಾರರಿಗೆ ಆಮಿಷ !

ವಿದೇಶಗಳಲ್ಲಿ ಬಹಿಷ್ಕರಿಸಲಾದ ಕೀಟನಾಶಕಗಳನ್ನು ನಮ್ಮ ದೇಶದಲ್ಲಿ ಮನಸೋ ಇಚ್ಛೆ ಬಳಸಲಾಗುತ್ತಿದೆ. ವಿದೇಶಿ ಬಹುರಾಷ್ಟೀಯ ಕಂಪೆನಿಗಳು ಹತ್ತಾರು ಹೆಸರಿನಲ್ಲಿ ವಿಷವನ್ನು ಮಣ್ಣಿಗೆ ಸೇರಿಸಲು ಭಾರತೀಯ ರೈತರನ್ನು ಪ್ರೇರೇಪಿಸುತ್ತಿವೆ. ಇಲ್ಲಿನ ಮಾರಾಟಗಾರರು ಆಮಿಷಗಳಿಗೆ ಬಲಿ ಬಿದ್ದು ಇವುಗಳ ಅಪಾಯದ ಅರಿವಿದ್ದರೂ, ಮಾರಾಟ ಮಾಡುತ್ತಿರುವರು ! ಬೆಳೆಗಳಿಗೆ ಮಿತಿ ಮೀರಿ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸಿದ್ದಲ್ಲಿ ಮಾನವನಿಗೆ “ಕ್ಯಾನ್ಸರ್” ಖಚಿತ. ಆದರೆ, ಈ ವಿಚಾರವನ್ನು ಬಹುತೇಕ ಮಾಧ್ಯಮಗಳು ಜನತೆಗಳು ತಿಳಿಸುತ್ತಿಲ್ಲ. ಮನೆಗಳಿಗೆ ಸಿಮೆಂಟ್ ಶೀಟ್ ಬಳಸಿದ್ದಲ್ಲಿ ಕ್ಯಾನ್ಸರ್ ಬರುವುದಂತೆ ! ಆದರೂ, ಇವುಗಳ ಮಾರಾಟ ನಿರಾಂತಕವಾಗಿ ನಡೆಯುತ್ತಿದೆ. 

ಮಿತಿಮೀರಿದ ವಿಷ !

ಮಿತಿ ಮೀರಿದ ಕೀಟನಾಶಕಗಳ ಬಳಕೆಯಿಂದ ಪಂಜಾಬ್‌ನಲ್ಲಿ ಸಾವಿರಾರು ರೈತರು ಕ್ಯಾನ್ಸರ್‌ಗೆ ಬಲಿಯಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಅದೇ ರೀತಿ  ಎರಡು ದಶಕಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಪಟ್ರಮೆಯಲ್ಲಿ ಗೇರು ತೋಟಗಳಿಗೆ  ಹೆಲಿಕಾಪ್ಟರ್ ಮೂಲಕ ಎಂಡೋಸಲ್ಪಾನ್ ವಿಷ ಸಿಂಪಡಣೆಯ ಪರಿಣಾಮ ಸಾವಿರಾರು ಮಂದಿ ಭೀಕರ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಕೊಡಗಿನಲ್ಲಿಯೂ ಶುಂಠಿ ಸೇರಿದಂತೆ ವಿವಿಧ ಬೆಳೆಗಳಿಗೆ ಮಿತಿ ಮೀರಿ ವಿಷವನ್ನು ಸಿಂಪಡಿಸಲಾಗುತ್ತದೆ ! ಸೊಪ್ಪು ತರಕಾರಿಗಳಿಗೂ ಅತಿಯಾಗಿ ಕ್ರಿಮಿನಾಶಕ, ರಾಸಯನಿಕ ಗೊಬ್ಬರ ಬಳಕೆಯಾಗುತ್ತಿದೆ. ಒಂದು ಏಕರೆಯಲ್ಲಿ  ಟೊಮೊಟೋ ಬೆಳೆ ಬೆಳೆಯಲು ಒಂದು ಫಸಲಿಗೆ ಸುಮಾರು 30 ಸಾವಿರ ರೂಪಾಯಿಗಳ ಕ್ರಿಮಿನಾಶಕಗಳನ್ನು ಬಳಸಲಾಗುತ್ತದೆ. ದಾಳಿಂಬೆ ಬೆಳೆಯಲ್ಲಿ ಸಹಾ ಧಾರಾಳ ಕ್ರಿಮಿನಾಶಕಗಳ ಬಳಕೆಯಾಗುತ್ತಿದೆ. ಜನತೆಯ ಪ್ರಾಣಕ್ಕೆ ಸಂಚಕಾರ ತರುವಂತಹ ವಿಷದ ಮಾರಾಟ, ಬಳಕೆಗೆ ಸರಕಾರಗಳು ಏಕೆ ಕಡಿವಾಣ ಹಾಕುತ್ತಿಲ್ಲ. ಅದರ ಉತ್ಪಾದನೆಗೆ ಏಕೆ ಮುಂದಾಗುತ್ತಿಲ್ಲ. ಬಹುಶ್ಯ ಕಂಪೆನಿಗಳು ಆಮಿಷಗಳಿಗೆ ಸರಕಾರ, ಜನತೆ ಬಲಿ ಪಶುವಾಗುತ್ತಿರುವರೋ ? 

 ಸರಕಾರದ ವರದಿ

ಮಹಾರಾಷ್ಟçದ ಒಣಭೂಮಿ ಪ್ರದೇಶವಾದ ವಿದರ್ಭದಲ್ಲಿ ರೈತರ ಸಾವು- ಆತ್ಮಹತ್ಯೆಗಳಿಗೆ ಕೊನೆಯೇ ಇಲ್ಲ ಎಂಬAತಾಗಿದೆ. ಅಲ್ಲಿ 2001 ರಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017ರ ನಂತರ ರಾಸಾಯನಿಕ ಕೀಟನಾಶಕಗಳ ವಿಷದಿಂದಾಗಿ ಸುಮಾರು 35ಕ್ಕೂ ಅಧಿಕ ರೈತರು-ಕೃಷಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಾಸಾಯನಿಕ ಸಿಂಪಡಣೆ ಸಮಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲ. ಪರಿಣಾಮ  ಇವರ ಶ್ವಾಸಕೋಶಗಳಿಗೆ ವಿಷ ನುಗ್ಗಿ ಬಹುತೇಕ ಸಾವು ಸಂಭವಿಸಿವೆ. ಸಾವಿಗೆ ಮೊನೋಕ್ರೊಟೋಫಾಸ್, ಆಕ್ಸಿಡೆಮೆಟೊನ್–ಮಿಥೈಲ್, ಅಸೆಫೇಟ್, ಪ್ರೊಫೆನೊಫೋಸ್, ಫ್ರಿಪ್ರೊನಿಲ್, ಇಮಿಡಾಕ್ಲೊಫ್ರಿಡ್ ಮತ್ತು ಸೈಪಮ್ರೆಥಿನ್ ಮುಂತಾದ ಕೀಟನಾಶಕಗಳೆ ಕಾರಣವೆಂದು ಸರಕಾರ ಸಿದ್ಧಪಡಿಸಿದ ಸತ್ಯಶೋಧನಾ ವರದಿಗಳು ಉಲ್ಲೇಖಿಸಿವೆ. ಇದರ ಪರಿಣಾಮ ಕೆಲವು ಔಷಧಿಗಳ ಬಳಕೆಯನ್ನು ಅಲ್ಲಿನ ಸರಕಾರ ತಾತ್ಕಲಿಕವಾಗಿ ನಿಷೇಧಿಸಿತ್ತು. ಕೇಂದ್ರ ಸರಕಾರವು “ವಿದರ್ಭ” ಪ್ಯಾಕೇಜ್ ಅನ್ನು ಫೋಷಿಸಿತ್ತು. ಆದರೆ, ಅಪಾಯಕಾರಿ ಪೀಡೆನಾಶಕಗಳನ್ನು ಖಾಯಂ ಆಗಿ ನಿಷೇಧಿಸುವ ಚಿಂತನೆಯನ್ನು ಸರಕಾರಗಳು ಇನ್ನೂ ಮಾಡದೇ ಇರುವುದು ವಿಪರ್ಯಾಸ. 

ಮಾರಕ ವಿಷಗಳ ನಿಷೇಧ ? 

ಯೂರೋಪಿಯನ್ ಯೂನಿಯನ್ ಸೇರಿದಂತೆ ವಿವಿಧ ರಾಷ್ಟçಗಳಲ್ಲಿ ನಿಷೇಧಿತವಾದ ಕ್ರಿಮಿನಾಶಕಗಳು ನಮ್ಮಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಕೇಂದ್ರ ಕೃಷಿ ಮತ್ತು ಕೃಷಿಕ ಕಲ್ಯಾಣ ಮಂತ್ರಾಲಯದ ಅಂಗಸAಸ್ಥೆಯ ಮಾಹಿತಿಯನ್ವಯ 2015-16ರಲ್ಲಿ ಬಳಕೆಯಾದ ಒಟ್ಟು 7, 717 ಟನ್ ಕೀಟನಾಶಕಗಳಲ್ಲಿ ಶೇ. 30ರಷ್ಟು (2, 254 ಟನ್) ಮಾರಕವಾದ ಕ್ಲಾಸ್-1 ವಿಷಕಾರಿ ಕೀಟನಾಶಕಗಳಾಗಿವೆ !

2003ರಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರೊಪೆಸರ್ ಅನುಪಮಾ ವರ್ಮ ಅಧ್ಯಕ್ಷರಾಗಿದ್ದ ಪರಿಣಿತರ ಸಮಿತಿಯನ್ನು ಕೇಂದ್ರ ಸರಕಾರ ನೇಮಿಸಿತ್ತು. ಆದರ ವರದಿಯನುಸಾರ 2018ರ-21ರ ಅವಧಿಯಲ್ಲಿ ಏಳು ಭಾರೀ ವಿಷ ಹೊಂದಿರುವ ಕೀಟನಾಶಕಗಳನ್ನು ನಿಷೇಧಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಆದರೆ, ಇದರಲ್ಲಿ ಮಹಾರಾಷ್ಟçದಲ್ಲಿ ರೈತರನ್ನು ಬಲಿ ಪಡೆದ ಎರಡು ಘೋರ ಕ್ರಿಮಿನಾಶಕಗಳು ಸೇರಿಲ್ಲ ? ಪ್ರತೀ ವರ್ಷ ಭಾರತದಲ್ಲಿ ಸುಮಾರು 10 ಸಾವಿರ ಪೀಡೆನಾಶಕಗಳ ವಿಷಬಾಧೆಯ ಪ್ರಕರಣಗಳು ವರದಿಯಾಗುತ್ತಿವೆ. 

ಮಾಹಿತಿಯೇ ಇಲ್ಲದ ಕೃಷಿಕ ಸಮುದಾಯ !

ಹಲವಾರು ರೈತಾಪಿ ವರ್ಗದವರಿಗೆ ಯಾವ ಬೆಳೆೆಗಳಿಗೆ ಯಾವ ಯಾವ ಕಾಯಿಲೆ ಬರುತ್ತದೆ. ಅವುಗಳ ನಿಯಂತ್ರಣಕ್ಕೆ ಯಾವ ಔಷಧ ಸಿಂಪಡಣೆ ಮಾಡಬೇಕು ಎಂಬ ಕನಿಷ್ಠ ಜ್ಞಾನವೇ ಇಲ್ಲ. ಹಲವರು ಔಷಧಿ ಅಂಗಡಿಯ ಸಿಬ್ಬಂದಿ ಅಥವಾ ಮಾಲೀಕರನ್ನು ಈ ಬಗ್ಗೆ ವಿಚಾರಿಸುವರು. ಅವರು ಹೇಳಿದ ಔಷಧಿಗಳನ್ನು ದುಬಾರಿ ಬೆಲೆ ತೆತ್ತು ಕೊಳ್ಳುವುದು ಸಾಮಾನ್ಯ ಸಂಗತಿ. ಇಂತಹ ಸಮಸ್ಯೆಗಳು ಎದುರಾದಾಗ ಸಮೀಪದ ತೋಟಗಾರಿಕೆ ಅಥವಾ ಕೃಷಿ ಇಲಾಖಾಧಿಕಾರಿಗಳನ್ನು ಸಂಪರ್ಕಿಸುವುದು ಉತ್ತಮ. ಇಲ್ಲವೆ, ಸಮೀಪದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸುವುದು ಅತ್ಯುತ್ತಮ. ಬಹುತೇಕ ಔಷಧಿ ಮಾರಾಟ ಮಳಿಗೆಯವರಿಗೆ ಔಷಧಿಯ ಬಗ್ಗೆ ಕನಿಷ್ಠ ಜ್ಞಾನವೂ ಇರುವುದಿಲ್ಲ ಎಂಬ ಸಾಮಾನ್ಯ ವಿಚಾರವು ನಮ್ಮ ಕೃಷಿಕ ಸಮುದಾಯಕ್ಕೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಕೃಷಿಕ ಸಮುದಾಯದವರ ಅಲ್ಪಜ್ಞಾನವನ್ನೇ ದಾಳವನ್ನಾಗಿ ಬಳಸಿಕೊಂಡು ಸ್ವದೇಶಿ ಮತ್ತು ವಿದೇಶಿ ಕಂಪನಿಗಳು ಕೃಷಿಕ ಸಮುದಾಯವನ್ನು ಸುಲಿಗೆ ಮಾಡುತ್ತಿವೆ. ಮಣ್ಣಿಗೆ ಮನಬಂದAತೆ ವಿಷ ಸುರಿಯಲು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿವೆ. ಇದರಿಂದ ಬಳಕೆದಾರರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. 

ಮುಂಜಾಗರೂಕತೆಯ ಕೊರತೆ ? 

ನಮ್ಮ ದೇಶದ ಬಹುಪಾಲು ರೈತರು, ಕೃಷಿ ಕಾರ್ಮಿಕರು ಕ್ರಿಮಿನಾಶಕಗಳ ಬಳಕೆಯ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅಸುರಕ್ಷತೆಯ ಬಳಕೆಯೇ ಬಹುಪಾಲು ಸಾವಿಗೆ ಮೂಲ ಕಾರಣವೆಂದು ಕೇಂದ್ರ ಮಂತ್ರಾಲಯ ಮತ್ತು ರಾಜ್ಯಕೃಷಿ ಇಲಾಖೆಗಳೇ ಕಾರಣವೆಂದು ದೆಹಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಾರ‍್ಮೆಂಟ್ ಉಪ ಮಹಾ ನಿರ್ದೇಶಕ ಚಂದ್ರಭೂಷಣ್ ಆಭಿಪ್ರಾಯಿಸುತ್ತಾರೆ. ಬಹುಪಾಲು ರೈತರಿಗೆ, ಕಾರ್ಮಿಕ ವರ್ಗದವರಿಗೆ ಅವರ ಕುಟುಂಬದವರಿಗೆ ಪೀಡೆನಾಶಕಗಳ ಬಳಕೆಯ ಅಪಾಯಗಳ ಅರಿವಿಲ್ಲ. ಈ ಬಗ್ಗೆ ಸರಕಾರಿ ಇಲಾಖೆಗಳು, ಖಾಸಗಿ ಸ್ವಯಂಸೇವಾ ಸಂಸ್ಥೆಗಳು ಮಾಹಿತಿ ನೀಡುತ್ತಿಲ್ಲ. ಬಹುತೇಕ ಮಾಧ್ಯಮಗಳು ಇವುಗಳ ಬಗ್ಗೆ ಮೌನವಹಿಸಿವೆ. ವಿವೇಚನಾ ರಹಿತವಾಗಿ ಘೋರ ವಿಷವನ್ನು ಬಳಸುವುದರಿಂದ ಇದರ ಬಳಕೆದಾರರು ಸುಲಭವಾಗಿ ಇವಕ್ಕೆ ಬಲಿಯಾಗುತ್ತಿದ್ದಾರೆ. 

 ನಮ್ಮಲ್ಲಿ ಸಾವಿರಾರು ಕೃಷಿಯ ಮುಖಮುದ್ರೆಯುಳ್ಳ ವೆಬ್‌ಗಳು, ಕೃಷಿ ಸಂಬAಧಿತ ಪತ್ರಿಕೆಗಳು, ಸ್ವಯಂಸೇವಾ ಸಂಸ್ಥೆಗಳಿವೆ. ರೈತ ಪರ ಸಂಘಟನೆಗಳಿವೆ. ಅದರೂ, ಯಾರೂ ಈ ಬಗ್ಗೆ ಅಪಾಯಕಾರಿ ಔಷಧಿಗಳ ಬಗ್ಗೆ ಚಕಾರವೆತ್ತದಿರುವುದು ನಮ್ಮ ದುರಂತ. 

 ಇವುಗಳ ಅಪಾಯಗಳ ಬಗ್ಗೆ ಅರಿತು ರೈತ ಸೇವಾ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮಾಹಿತಿ ನೀಡಿದ್ದಲ್ಲಿ ಸಾವಿನ ಸಂಖ್ಯೆ ಕೊಂಚ ಇಳಿದೀತು. ಸರಕಾರ ಘೋರ ವಿಷಗಳನ್ನು ನಿಷೇಧಿಸುವ ಮುನ್ನಾ ರೈತರೇ ಇವುಗಳನ್ನು ನಿಷೇಧಿಸಬೇಕಿದೆ. ಇಲ್ಲವಾದಲ್ಲಿ ಭಾರತೀಯ ರೈತರಿಗೆ ಹೆಚ್ಚು ದಿನ ಆರೋಗ್ಯವಂತರಾಗಿ ಬಾಳಲಾರರು .

ಇದಕ್ಕೆಲ್ಲ ಪರಿಹಾರ ದೇಸಿ ಗೋವಾಆದರಿತ ನೈಸರ್ಗಿಕ ಕೃಷಿ

                              --------

Monday, 29 July 2024

ಸಾವಯವ ರಹಿತ ಮಣ್ಣು ಸತ್ವಹೀನ !

ಬರಹ: ಕೂಡಂಡ ರವಿ, ಹೊದ್ದೂರು. 

ಮೊ; ೮೩೧೦೧೩೦೮೮೭. 



ನಮ್ಮಲ್ಲಿ ಹಲವಾರು ವಿಧದ ಮಣ್ಣುಗಳಿವೆ. ಇವುಗಳನ್ನು ಅದರ ಬಣ್ಣ, ಫಲವತ್ತತೆಗೆ ಅನುಗುಣವಾಗಿ ವರ್ಗಿಕರಿಸಲಾಗಿದೆ. ಬೇಸಾಯದಲ್ಲಿ ಮಣ್ಣಿನ ಫಲವತ್ತತೆಗೆ ಅಧಿಕ ಮಹತ್ವವಿದೆ. ಆದರೆ, ರೈತರು ಮಣ್ಣಿನ ವಿಚಾರ ಅರಿಯದೇ ಮನಬಂದಂತೆ ರಾಸಾಯನಿಕ ಗೊಬ್ಬರ, ಪೀಡೆನಾಶಕ, ಕಳೆ ನಾಶಕ ಬಳಸಿ ಅದರ ಫಲವತ್ತತೆಯನ್ನು ನಾಶ ಮಾಡುತ್ತಿರುವರು. ನೈಸರ್ಗಿಕ ವಿಪತ್ತುಗಳು ಸಹಾ ಮಣ್ಣಿನ ಸಾರವನ್ನು ಕಡಿಮೆ-ಹೆಚ್ಚು ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. 

 ಮಣ್ಣು ಸತ್ವಯುತವಾಗಿರಲು ಅದರಲ್ಲಿರುವ “ಸಾವಯವ ಅಂಶ”ಗಳೇ ಮೂಲ ಕಾರಣ. ಈ ಅಂಶವು ಎಂತಹಾ ಸಮಸ್ಯೆಯಾತ್ಮಕ ಮಣ್ಣನ್ನು ಫಲಭರಿತವನ್ನಾಗಿಸುತ್ತದೆ. ಸಾವಯವ ವಸ್ತುಗಳು ನಮ್ಮ ಹೊಲ, ಗದ್ದೆ, ತೋಟಗಳನ್ನು ಸುಂದರವಾಗಿಸಲು ಸಹಕರಿಸುತ್ತದೆ. ಅಂತಹ ಮಾಂತ್ರಿಕ ಶಕ್ತಿ ಅದಕ್ಕಿದೆ. ಮಣ್ಣಿಗೆ ಪೂರಕವಾಗಿ ಬೆರೆಯುವಂತಹ-ಮಣ್ಣಿನಲ್ಲಿ ಕರಗುವಂತಹ ಸಸ್ಯ-ಪ್ರಾಣಿಜನ್ಯ ವಸ್ತುಗಳಿಂದ ಇವು ಲಭ್ಯ. 

ನೈಸರ್ಗಿಕ ಸ್ಪಂಜ್ !

ಮರಳು ಕಣಗಳನ್ನು ಹೆಚ್ಚಾಗಿ ಹೊಂದಿರುವ ಮರಳು ಮಣ್ಣು ಕೃಷಿಗೆ ಸವಾಲು. ಮರಳು ಕಣಗಳು ಸಾಕಷ್ಟು ದೊಡ್ಡದಾಗಿರುತ್ತವೆ. ಇವುಗಳ ಮದ್ಯೆ ಸಾಕಷ್ಟು ಅಂತರವಿರುವಿರುವುದರಿಂದ ಅದರಲ್ಲಿ ನೀರು ವೇಗವಾಗಿ, ಸಲೀಸಾಗಿ ಹರಿದು ಹೋಗುತ್ತದೆ. ನೀರಿನ ಅಂಶ ಅದರಲ್ಲಿ ಕಡಿಮೆ ಕಡಿಮೆ ಇರುವ ಕಾರಣ ಅಂತಹ ಮಣ್ಣು ಬಲು ಬೇಗನೇ ಗಟ್ಟಿಯಾಗುತ್ತದೆ. ಇವುಗಳು ನೀರನ್ನು ಹಿಡಿದಿಟ್ಟು ಕೊಳ್ಳಲಾರವು. ಪರಿಣಾಮ ಇಂತಹ ಮಣ್ಣಿಗೆ ಪದೇ ಪದೇ ನೀರನ್ನು ನೀಡಬೇಕಾಗುತ್ತದೆ. ಮರಳು ಮಣ್ಣಿಗೆ ಸಾವಯುವ ಅಂಶವನ್ನು ಹಾಕಿದಾಗ ಅವು ನೀರನ್ನು ಹಿಡಿದಿಟ್ಟು ಕೊಂಡು ಗಿಡಗಳಿಗೆ ಪೂರೈಸುತ್ತದೆ. ಅದು ನೈಸರ್ಗಿಕ ಸ್ಪಂಜಿನಂತೆ ಕೆಲಸ ಮಾಡುತ್ತದೆ. ಇವು ಬೇಸಿಗೆ ಮತ್ತು ಬರಗಾಲದಲ್ಲಿ ಗಿಡಗಳಿಗೆ ನೀರನ್ನು ಒದಗಿಸಲು ಸಹಕಾರಿ. ಇದರಿಂದ ಗಿಡಗಳಿಗೆ ಬಗೆಬಗೆಯ ಪೋಷಕಾಂಶಗಳು ವರ್ಷದ ಎಲ್ಲಾ ಅವಧಿಯಲ್ಲಿ ಲಭ್ಯವಾಗುವಂತೆ ಮಾಡುತ್ತವೆ. ಮಣ್ಣಿನಲ್ಲಿ ಕರಗುವ ಸಾವಯವ ವಸ್ತುಗಳು ಪರಸ್ಪರ ಬೆರೆಯುತ್ತಾ ಮಣ್ಣು ಸವಕಳಿಯಾಗುವುದನ್ನು ನಿಯಂತ್ರಿಸುತ್ತವೆ. ಇಲ್ಲ ತಪ್ಪಿಸುತ್ತವೆ. 

 ನೆರಳು ಅನಗತ್ಯ

ಜೇಡಿ ಮಣ್ಣಿನಲ್ಲಿ ಕಣಗಳು ಸಾಕಷ್ಟು ಒತ್ತಗಿರುತ್ತವೆ. ಇವುಗಳು ಒಂದಕ್ಕೊಂದು ಬೆರೆತಿರುತ್ತವೆ. ಆದರೆ, ಇವುಗಳ ನಡುವೆ ಗಾಳಿಯಾಡುವುದು ಕಷ್ಟ. ಇಂತಹ ಮಣ್ಣಿಗೆ ಸಾವಯುವ ವಸ್ತುಗಳನ್ನು ಬೆರೆಸಿದಾಗ ಆ ಮಣ್ಣಿನಲ್ಲಿ ಸಲೀಸಾಗಿ ಗಾಳಿಯಾಡುತ್ತವೆ. ಬೇರುಗಳಿಗೆ ಧಾರಾಳವಾಗಿ ಗಾಳಿ ಲಭ್ಯವಾಗಿ ಸಸ್ಯಗಳು ಚೆನ್ನಾಗಿ ಬೆಳೆಯಲು ಅನುವಾಗುತ್ತದೆ. ಸಾವಯವ ವಸ್ತು ಮಣ್ಣಿನಲ್ಲಿ ಬೆರೆಯುವುದರಿಂದ ಮಣ್ಣಿನ ಕಣ-ಕಣಗಳ ಮಧ್ಯೆ ಜಾಗ ದೊರೆಯುತ್ತದೆ. ಇದರ ಮೂಲಕ ಗಿಡಗಳ ಬೇರುಗಳು ಸುಲಭವಾಗಿ ಬೆಳೆದು ಆಳಕ್ಕೆ ಇಳಿಯುತ್ತವೆ. ಪರಿಣಾಮ ಮಣ್ಣು ಬೇಗನೆ ಗಟ್ಟಿಯಾಗುವುದು ತಪ್ಪುತ್ತದೆ. ಈ ವಿಚಾರವನ್ನು ಅರಿತ ನಮ್ಮ ಹಿರಿಯರು ಭೂಮಿಗೆ ಸಾವಯುವ ಗೊಬ್ಬರವನ್ನು(ಕೊಟ್ಟಿಗೆ ಗೊಬ್ಬರ) ಧಾರಾಳವಾಗಿ ಬಳಸುತ್ತಿದ್ದರು. ಅದರ ಪರಿಣಾಮ ಆ ಕಾಲದಲ್ಲಿ ಧಾರಾಳ ಫಸಲು ದೊರೆಯುತ್ತಿತ್ತು. ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಮಣ್ಣು ನೀರನ್ನು ಹಿಡಿದಿಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಪರಿಣಾಮ ಬೇಸಿಗೆಯಲ್ಲಿ ಗಿಡಗಳು ಬಾಡಿ ಸಾಯುತ್ತದೆ. ಸಾವಯುವ ಗೊಬ್ಬರವನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಗಿಡಗಳಿಗೆ ನೆರಳು ಕೊಡುವ ಅಗತ್ಯವಿಲ್ಲ !

ಮರಗಳು ಅತ್ಯಗತ್ಯ 

 ಮಣ್ಣಿನಲ್ಲಿ ಸಾವಯವ ಅಂಶಗಳು ಬೆರೆತಾಗ, ಮಣ್ಣಿನ ಕಣ-ಕಣಗಳನ್ನು ಬೇರ್ಪಡಿಸುತ್ತವೆ. ಮಣ್ಣಿಗೆ ಉಪಯುಕ್ತ ಜೀವಾಣುಗಳಾದ ಎರೆಹುಳಗಳ ಚಟುವಟಿಕೆ ಹೆಚ್ಚಾಗುತ್ತದೆ. ಇದಕ್ಕಾಗಿ ತೋಟಗಳಲ್ಲಿ ಅಧಿಕ ಮರಗಳಿರುವುದು ಅಗತ್ಯ. ಈ ಮರಗಳಿಂದ ಉದುರುವ ಎಲೆಗಳಿಂದ ಸಾವಯುವ ಗೊಬ್ಬರವು ಗಿಡಗಳಿಗೆ ದೊರೆಯತ್ತದೆ. ಎರೆಹುಳಗಳ ಚಟುವಟಿಕೆ ಹೆಚ್ಚಾದಷ್ಟು ಮಣ್ಣು ಸಡಿಲವಾಗುತ್ತದೆ. ಎರೆಹುಳಗಳು ಮಣ್ಣಿನಲ್ಲಿ ರಂಧ್ರಗಳನ್ನು ಮಾಡುವುದರಿಂದ ಆ ಮೂಲಕ ನೀರು ಭೂಮಿಯೊಳಕ್ಕೆ ಸುಲಭವಾಗಿ ಸೇರುತ್ತದೆ. ಇದು ಭೂಮಿಗೆ ಬಿದ್ದ ಎಲೆಗಳ ಕೊಳೆಯುವಿಕೆಗೆ ಸಹಕಾರಿ. ಇವುಗಳು ಮಣ್ಣಿನಲ್ಲಿ ಸೂಕ್ಮಾಣು ಜೀವಿಗಳ ಸೃಷ್ಟಿಗೆ ನೆರವಾಗುತ್ತದೆ. ಇವುಗಳು ಸಸ್ಯಗಳಿಗೆ ಬೇಕಾಗುವ  ಎಲ್ಲಾ ಬಗೆಯ ಪೋಷಕಾಂಶಗಳನ್ನು ನೀಡುತ್ತವೆ.

ಸಾವಯವ ಗೊಬ್ಬರದಿಂದ ಲಾಭ

  ಆದರೆ, ರಾಸಾಯನಿಕ ಗೊಬ್ಬರಗಳು ಕೇವಲ ನಿಗದಿತ ಪೋಷಕಾಂಶಗಳನ್ನು ಮಾತ್ರ ನೀಡುತ್ತವೆ. ಇಂತಹ ಜೀವಿಗಳು ಮಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ. ಇವು ಹಲವಾರು ಸಸ್ಯ ರೋಗಗಳನ್ನು ನಿಯಂತ್ರಿಸುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ. ಪರಿಣಾಮ ನಮ್ಮ ತೋಟದ ಸಸ್ಯಗಳು ಆರೋಗ್ಯಯುತವಾಗಿ ಬೆಳೆಯುತ್ತವೆ. ಇದರಿಂದ ಸರಾಸರಿ ಫಸಲು ನಿರೀಕ್ಷಿಸಿಸುವ ಎಲ್ಲಾ ಬೆಳೆಗಾರರು ಎಲ್ಲಾ ಬೆಳೆಗಳಿಗೂ, ಎಲ್ಲಾ ಕಾಲಕ್ಕೂ ಸಾವಯವ ಗೊಬ್ಬರಗಳನ್ನೇ ಬಳಸಬೇಕು. ಎಲ್ಲರೂ ಸಾವಯವ ಗೊಬ್ಬರ ಬಳಸುವುದನ್ನು ಪ್ರೋತ್ಸಾಹಿಸಬೇಕು. ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಹಾಗಾದಲ್ಲಿ ಮಾತ್ರ ಕೃಷಿ ಲಾಭದಾಯಕವಾದೀತು.