Saturday 25 September 2021

ಈಗಿನ ಕಾಲದ ಯುವಕ, ಯುವತಿ ಹಾಗೂ ಮಕ್ಕಳಲ್ಲಿ, ಅತೀ ಸಣ್ಣ ಪ್ರಾಯದಲ್ಲಿ - ಹಿರಿಯರಿಗೆ ಬರುವ ಹಲವಾರು ರೋಗ ರುಜಿನಗಳನ್ನು ಕಾಣಬಹುದು..

 ಮಣಿಪಾಲ ಶಿವರಾಂ ಭಟ್ 





ಈಗಿನ ಕಾಲದ ಯುವಕ, ಯುವತಿ ಹಾಗೂ ಮಕ್ಕಳಲ್ಲಿ, ಅತೀ ಸಣ್ಣ ಪ್ರಾಯದಲ್ಲಿ - ಹಿರಿಯರಿಗೆ ಬರುವ ಹಲವಾರು ರೋಗ ರುಜಿನಗಳನ್ನು ಕಾಣಬಹುದು..
ಉದಾಹರಣೆ - ಸಣ್ಣ ಮಕ್ಕಳಿಗೆ ಕ್ಯಾನ್ಸರ್, ಹೃದ್ರೋಗಾ, ಸಕ್ಕರೆ ಖಾಯಿಲೆ ಇತ್ಯಾದಿ.. 10 ವರ್ಷದ ಒಳಗಿನ ಹುಡುಗಿಯರ ಮೈ ನೆರೆಯುವುದು.... ಇತ್ಯಾದಿ ಇತ್ಯಾದಿ... ಬೇಕಾದಷ್ಟು ಇದೆ..
ಕಾರಣ?
ಈಗಿನ ಆಹಾರ ಕ್ರಮಗಳು, ಪರಿಸರ, ನೀರು, ವಾತಾವರಣ ಮಾಲಿನ್ಯ ಇತ್ಯಾದಿ ಅಲ್ಲವೇ?
ಇನ್ನೊಂದು ಮುಖ್ಯ ಕಾರಣ, ನಾವು ಜೀವಿಸಲು ಬೇಕಾದ ಮುಖ್ಯ ಆಹಾರವನ್ನು, ನಮ್ಮ ರೈತರು/ಕೃಷಿಕರು ಮಾಡುವಂತಹ ಕೃಷಿ ಕ್ರಮಗಳಿಂದ, ಹಾಗೂ ಇದನ್ನು ಪ್ರತಿಪಾದಿಸುವ ನಮ್ಮ ಕೃಷಿ ವಿಜ್ಞಾನಿಗಳು ಎಂದರೆ ಖಂಡಿತ ತಪ್ಪು ಆಗಲಾರದು.
ಗರಿಷ್ಠ ಇಳುವರಿ ಪಡೆಯಲು ನಮ್ಮ ರೈತರು/ಕೃಷಿಕರು ಬಳಸುವ ಅತಿಯಾದ ರಾಸಾಯನಿಕ ಒಳಸುರಿಗಳಿಂದ ನಮ್ಮ ದೇಶದ ಕೃಷಿ ಭೂಮಿಗಳು ನಾಶದ ಅಂಚಿಗೆ ತಲುಪುವ ಘಟ್ಟವನ್ನು ನೋಡುತ್ತಿದ್ದೇವೆ.
ಈ ಪೋಸ್ಟ್ ಹಾಕಲು ಮುಖ್ಯ ಕಾರಣ ಎಂದರೆ - ನಮ್ಮ ಕರಾವಳಿ ಭಾಗದಲ್ಲಿ ಅಡಿಕೆ ಕೃಷಿಗೆ ಒಂದು ಮಹತ್ವ ಸ್ಥಾನ. ಸಾವಿರಾರು ಗದ್ದೆ, ಗುಡ್ಡ ಭೂಮಿ ನಾಶವಾಗಿ, ಈಗ ಎಲ್ಲಿ ನೋಡಿದರೂ ಅಡಿಕೆ ಹಾಗೂ ರಬ್ಬರ್ ತೋಟಗಳನ್ನು ಕಾಣುತ್ತಿದ್ದೇವೆ. ಇಲ್ಲಿ ಹೆಚ್ಚಿನ ಕೃಷಿಕರು ರಾಸಾಯನಿಕ ಕೃಷಿಕರಾಗಿ ಮಾರ್ಪಟ್ಟು, ಅನಗತ್ಯ ರಾಸಾಯನಿಕ ಒಳಸುರಿ ಹಾಕಿ ಮಣ್ಣು, ಭೂಮಿ, ನೀರು, ಪರಿಸರ ಇತ್ಯಾದಿ ಬೇಕಾದಷ್ಟು ನಾಶ ಮಾಡಿ ಆಯ್ತು.
(ಹೇಗೆ ನಮ್ಮ ಸಮಾಜಶಾಸ್ತ್ರದಲ್ಲಿ ನಮ್ಮ ದೇಶದ ಬಗ್ಗೆ ಕೀಳಾಗಿ ಅವಹೇಳನ ಮಾಡುತ್ತಿದ್ದಾರೋ ಹಾಗೆ ಕೃಷಿಯಲ್ಲಿ ಕೂಡಾ, ನಮ್ಮ ಪುರಾತನ ಕೃಷಿಕ್ರಮಗಳನ್ನು ನಾಶ ಮಾಡಿ, ವಿದೇಶೀ ತಂತ್ರಜ್ಞಾನವನ್ನು ರೈತರಿಗೆ ಮೋಸ ಮಾಡಿ ಹಾಳಾಗಿ ಹೋಗುತ್ತಿದೆ)..
ಈ ಮೇಲಿನ ವಿಷಯ ಒಂದು ಪೀಠಿಕೆ.
ಈಗ ಮುಖ್ಯ ವಿಷಯಕ್ಕೆ ಬರುತ್ತಿದ್ದೇನೆ..
ಇತ್ತೀಚೆಗೆ ಅಂದರೆ ಸುಮಾರು ಕೆಲವು ವರ್ಷಗಳಿಂದ, ಅಡಿಕೆ ಕೃಷಿಯಲ್ಲಿ ವಿವಿಧ ರೋಗಗಳು, ಇದಕ್ಕೆ ಕೃಷಿ ವಿಜ್ಞಾನಿಗಳು ಏನೂ ಮಾಡುತ್ತಿಲ್ಲ, ಸರಕಾರದಿಂದ ಈ ರೋಗಗಳಿಗೆ ಪರಿಹಾರ ಕಂಡು ಹಿಡಿಯಲು ಕೋಟಿಗಟ್ಟಲೆ ಹಣ ಮೀಸಲು ಇಟ್ಟರೂ, ಯಾವುದೇ ಪ್ರಯೋಜನ ಕಾಣುತ್ತಿಲ್ಲ ಎಂದು..
ಈ ಅಡಿಕೆ ಕೃಷಿಯಲ್ಲಿ ಕಾಡುತ್ತಿರುವ ರೋಗಗಳು - ಕೊಳೆ ರೋಗ, ಹಳದಿ ರೋಗ, ಬೇರು ಹುಳುವಿನ ರೋಗ ಇತ್ಯಾದಿ ಇತ್ಯಾದಿ, ಯಾವುದಕ್ಕೂ ಇಷ್ಟರ ತನಕ ಒಂದು ಸರಿಯಾದ ಕಾರಣ ಹಾಗೂ ಪರಿಹಾರ ಸದ್ಯಕ್ಕೆ ಕೃಷಿ ವಿಜ್ಞಾನಿಗಳಿಂದ ಬರುತ್ತಿಲ್ಲ..

ಹಾಗಾದರೆ, ಅಡಿಕೆ ಕೃಷಿಕರಾಗಿ, ಈ ಕೃಷಿಕರು ಏನು ಮಾಡುತ್ತಿದ್ದಾರೆ ಎಂಬುದನ್ನು ಅವಲೋಕಿಸೋಣ
1. ಅತಿಯಾದ, ಅನಗತ್ಯ ರಾಸಾಯನಿಕ ಒಳಸುರಿ, ಇದರಿಂದಾಗಿ ಪರಿಸರ, ಮಣ್ಣು, ಭೂಮಿ, ನೀರು, ozone layer ನಲ್ಲಿ ದುಷ್ಪರಿಣಾಮ, ಹೆಚ್ಚುತ್ತಿರುವ ಸೂರ್ಯನ ಶಾಖ.
2. ಕೃಷಿ ಭೂಮಿಯ ಮಣ್ಣು ನಾಶವಾಗಿ, ಮಣ್ಣಿನಲ್ಲಿ ಯಾವುದೇ ರೋಗ ವಿರೋಧ ಮಾಡುವ ಶಕ್ತಿ ಇಲ್ಲ.
3. ಹಾಕುವ ರಾಸಾಯನಿಕ ಒಳಸುರಿ - ಇದರಲ್ಲಿ 60 - 70% ಅನುಪಯುಕ್ತ ಆಗಿ, ಮಾಲಿನ್ಯ ಮಾಡುವುದು.
4. ಎರೆಹುಳು, ಸೂಕ್ಷ್ಮಜೀವಾಣುಗಳ ನಾಶ.
5. ಮಣ್ಣು ಗಟ್ಟಿಯಾಗಿ, ನೀರು ಇಂಗದೆ, ಉತ್ತಮ ಮಣ್ಣಿನ ಸವಕಳಿ ಆಗಿ, ಕೃಷಿ ಭೂಮಿ ಅವಸಾನದತ್ತ (6" ಉತ್ತಮ ಮೇಲ್ಪದುರು ಮಣ್ಣು ಆಗಲು ಸುಮಾರು 1000 ವರ್ಷ ಬೇಕು)
6. ಕೀಟನಾಶಕ, ಕಳೆನಾಶಕ ಇತ್ಯಾದಿ ಪ್ರಯೋಗಿಸಿ, ಎಲ್ಲಾ ಸೂಕ್ಷ್ಮಜೀವಿಗಳ ಸರ್ವನಾಶ.
7. ಮಾರುಕಟ್ಟೆಯಲ್ಲಿ ಸಿಗುವ, ಸಾವಯವ ಒಳಸುರಿ ಎಂದು ಮಾಡುವ ಜಾಲದವರಿಂದ, ಮೋಸ ಹೋಗಿ ಹಾಕುವ ರಾಸಾಯನಿಕ ಗೊಬ್ಬರ
8. ನಮ್ಮ ಕೃಷಿ ಭೂಮಿ ಬಿಟ್ಟು, ಹೊರಗಡೆಯಿಂದ ರೋಗವಿರುವ ಒಳಸುರಿ, ಗೊಬ್ಬರ ಹಾಕಿ ಮೋಸ ಹೋಗುವುದು....
ಹೀಗೆ ನೂರಾರು...

ಪರಿಹಾರ -
ದೇಸೀ ಗೋವಾಧಾರಿತ ವಿಷಮುಕ್ತ ನೈಸರ್ಗಿಕ ಕೃಷಿ

Friday 24 September 2021

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ

ಕೂಡಂಡ ರವಿ, ಹೊದ್ದೂರು.
ಎಲ್ಲರಿಗೂ ಶಿಷ್ಯವೇತನ ಬರುತ್ತಿದೆ, ನಮಗಿಲ್ಲ. ಬಹುತೇಕ ಪೋಷಕರ ಮತ್ತು ವಿದ್ಯಾರ್ಥಿ೵ಗಳ ಕೊರಗು ದೂರವಾಗುತ್ತಿದೆ. ರಾಜ್ಯ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ರೈತ ಮಕ್ಕಳ ಶಿಷ್ಯವೇತನ ಸೌಲಭ್ಯ ಜಾರಿಯಾಗಲಿದೆ. ರೈತ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು “ಶಿಷ್ಯವೇತನ ಯೋಜನೆ ಜಾರಿಗೆ ತರಲಾಗಿದೆ. 10 ನೇ ತರಗತಿ ನಂತರ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೊಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳವರೆಗೆ ಪ್ರವೇಶ ಪಡೆದಿರುವ ಕರ್ನಾಟಕ ರಾಜ್ಯದ ರೈತರ ಅರ್ಹ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಯಾವುದೇ ಮಕ್ಕಳ ಪೋಷಕರು ಕೃಷಿ ಮಾಡುವ ಜಮೀನನ್ನು ಅವರು ಹೊಂದಿರಬೇಕು ಎಂಬ ನಿಯಮವನ್ನು ರೂಪಿಸಲಾಗಿದೆ. ಆದರೆ, ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ, ಪ್ರಶಸ್ತಿ, ಪ್ರತಿಫಲ ಇವುಗಳನ್ನು ರೈತರ ಮಕ್ಕಳು ಪಡೆದಿದ್ದರೂ ಈ ಶಿಷ್ಯವೇತನವನ್ನು ಪಡೆಯಲು ಅರ್ಹರು. ರೈತರ ಮಕ್ಕಳ ತಂದೆ- ತಾಯಿ ಇಬ್ಬರೂ ಕೃಷಿ ಜಮೀನಿನ ಒಡೆಯರಾಗಿದ್ದರೆ, ಈ ಯೋಜನೆಯಲ್ಲಿ ಒಂದು ಶಿಷ್ಯ ವೇತನಕ್ಕೆ ಮಾತ್ರ ವಿದ್ಯಾರ್ಥಿಗಳು ಅರ್ಹರು. ಸೆಮಿಸ್ಟರ್ನಲ್ಲಿ, ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣ ಹೊಂದಿದಲ್ಲಿ ಶಿಷ್ಯವೇತನ ಲಭ್ಯವಾಗುವುದಿಲ್ಲ. ವೇತನಗಳಂತೆ ಇದರಲ್ಲಿಯೂ ಸಹಾ ಮಹಿಳೆಯರಿಗೆ ಅಧಿಕ ಒತ್ತು ನೀಡಲಾಗಿರುವುದೇ ವಿಶೇಷ. ವಿದ್ಯಾಥಿ೵ ವೇತನ ಎಷ್ಟು? ಪದವಿಯ ಮುಂಚೆ ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಕೋರ್ಸ ವಿದ್ಯಾರ್ಥಿಗಳಿಗೆ ರೂ.2,500/-, ವಿದ್ಯಾರ್ಥಿನಿಯರಿಗೆ ರೂ.3,000/-, ಬಿ.ಎ, ಬಿ.ಎಸ್ಸಿ, ಬಿ.ಕಾಂ ಇತ್ಯಾದಿ ಎಂ.ಬಿ.ಬಿ.ಎಸ್, ಬಿ.ಇ/, ಬಿ.ಟೆಕ್ ಮತ್ತು ವೃತ್ತಿಪರ ಕೋರ್ಸಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ರೂ.5,000 ಹಾಗೂ ವಿದ್ಯಾರ್ಥಿನಿಯರಿಗೆ ರೂ.5,500. ಎಲ್.ಎಲ್.ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ರೂ.7,500, ವಿದ್ಯಾರ್ಥಿನಿಯರಿಗೆ ರೂ.8,000, ಎಂ.ಬಿ.ಎಸ್, ಬಿ.ಇ, ಬಿ.ಟೆಕ್ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರೂ.10,000 ಹಾಗೂ ವಿದ್ಯಾರ್ಥಿನಿಯರಿಗೆ ರೂ. 11,000 ವಾರ್ಷಿಕ ಹಣ ನೀಡಲಾಗುತ್ತದೆ. ನೀವೇನು ಮಾಡಬೇಕು ? ಪ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿಯಾಗದೆ (ಎಫ್ಐಡಿ) ಇರುವಂತಹ ರೈತರು ಪಹಣಿ, ಆಧಾರ ಝರಾಕ್ಸ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಕೂಡಲೇ ರೈತ ಸಂಪರ್ಕ ಕೇಂದ್ರಗಳಿಗೆ ನೀಡಿ. ಎಫ್ಐಡಿ ಮಾಡಿಸಿಕೊಂಡು ಈ ಸೌಲಭ್ಯ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಹಾಗೂ ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದ

Sunday 19 September 2021

ದಿಗುಜೆ ಸೇವನೆಯಿಂದಾಗುವ ಲಾಭಗಳು

ದಿಗುಜೆ ಸೇವನೆಯಿಂದಾಗುವ ಲಾಭಗಳು ಬರಹ: ಕೂಡಂಡ ರವಿ, ಹೊದ್ದೂರು, ಕೊಡಗು
ದಿಗುಜೆ ಅಥವಾ ಬ್ರೆಡ್‌ಫ್ರೂಟ್ (ಅಲ್ಟಿಲಿಸ್) ಮೊರೇಸೀ ಕುಲದ ಸದಸ್ಯ. ಇದು ಸುಮಾರು ೫೦ ಜಾತಿಗಳನ್ನು ಹೊಂದಿದೆ. ಬ್ರೆಡ್‌ಫ್ರೂಟ್‌ನ ರಾಸಾಯನಿಕ ಅಂಶಗಳ ಮೇಲಿನ ಸಂಶೋಧನೆಯು ಹಲವಾರು ಟ್ರೈಟರ್‌ಪೆನ್‌ಗಳು ಮತ್ತು ಫ್ಲೇವನಾಯ್ಡ್ಗಳಂತಹ ಹಲವಾರು ವರ್ಗಗಳ ಸಂಯುಕ್ತಗಳನ್ನು ಪ್ರತ್ಯೇಕಿಸಿದೆ. ಆರ್ಟೋಕಾರ್ಪಸ್ ಜೆರನೈಲೇಟೆಡ್ ಫ್ಲೇವೊನ್‌ಗಳಂತಹ ಪ್ರಿನಿಲೇಟೆಡ್ ಫೀನಾಲಿಕ್ ಸಂಯುಕ್ತಗಳ ಸಮೃದ್ಧ ಮೂಲವಾಗಿದೆ. ಈ ಮರವನ್ನು ಕತ್ತರಿಸಿದರೆ ಅಥವಾ ಹಾನಿಗೊಳಗಾದರೆ ಬೇರುಗಳು ನೆಲದ ಮೇಲ್ಮೈಯ ಮೇಲೆ ಅಥವಾ ಸ್ವಲ್ಪ ಕೆಳಗೆ ಬೆಳೆಯುತ್ತವೆ. ವಿಶೇಷವಾಗಿ ಚಿಗುರುಗಳನ್ನು ಉತ್ಪಾದಿಸುತ್ತವೆ. ಇದನ್ನು ಮುಖ್ಯವಾಗಿ ಅದರ ಪೌಷ್ಟಿಕಾಂಶದ ಪ್ರಯೋಜನಗಳಿಗಾಗಿ ಮತ್ತು ಕಾರ್ಬೋಹೈಡ್ರೇಟ್‌ಗಳ ಪ್ರಮುಖ ಮೂಲವಾಗಿ ಸೇವಿಸಲಾಗುತ್ತದೆ. ಹಣ್ಣುಗಳು ಮತ್ತು ಬೀಜಗಳು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಡಯೆಟರಿ ಫೈಬರ್, ಕೊಬ್ಬಿನಾಮ್ಲಗಳು, ಪ್ರೊ-ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನ ಗಮನಾರ್ಹ ಪ್ರಮಾಣದ ಆಸ್ಕೋರ್ಬಿಕ್ ಆಸಿಡ್, ನಿಯಾಸಿನ್ ಮತ್ತು ಕಬ್ಬಿಣದ ಉತ್ತಮ ಮೂಲಗಳಾಗಿವೆ. ಬೀಜಗಳಿಂದ ಪ್ರಸಾರ ಮಾಡುವುದು ಜನಪ್ರಿಯವಲ್ಲ. ಸಸ್ಯ ಅಂಗಾAಶ ಕೃಷಿತಂತ್ರಗಳು ಸಾಮೂಹಿಕ ಕ್ಲೋನಲ್ ಪ್ರಸರಣ, ಜರ್ಮ್ಪ್ಲಾಸಂ ಸಂರಕ್ಷಣೆ ಮತ್ತು ವಿನಿಮಯ ಮತ್ತು ಬೆಳೆ ಜಾತಿಗಳ ಸುಧಾರಣೆಗೆ ಅವಕಾಶ ಮಾಡಿಕೊಟ್ಟಿವೆ. ಬ್ರೆಡ್‌ಫ್ರೂಟ್‌ನ ಪೌಷ್ಠಿಕಾಂಶ ಮತ್ತು ಔಷಧೀಯ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು ಬಳಕೆಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಾಮಾಜಿಕ ಕಳಂಕವನ್ನು ತೆಗೆದುಹಾಕುವುದು ಮತ್ತು ಅದರ ಪೌಷ್ಠಿಕಾಂಶದ ಗುಣಗಳ ಬಗ್ಗೆ ಅರಿವು ಹೆಚ್ಚಿಸುವುದು ಬ್ರೆಡ್‌ಫ್ರೂಟ್ ಅನ್ನು ಅದರ ಗುಪ್ತ ಗುರುತಿನಿಂದ ಜೀವನೋಪಾಯವನ್ನು ಹೆಚ್ಚಿಸುವ ಬೆಳೆಯಾಗಿ ಪರಿವರ್ತಿಸುವ ಅನ್ವೇಷಣೆಯಲ್ಲಿ ಪ್ರಮುಖ ಸವಾಲುಗಳಾಗಿವೆ. ಬ್ರೆಡ್‌ಫ್ರೂಟ್ ಗಮನಾರ್ಹವಾದ ಪೋಷಕಾಂಶಗಳು ಮತ್ತು ರುಚಿಕರವಾದ ಆಹಾರಗಳ ಪ್ರಮುಖ ಮೂಲವಾಗಿದೆ. ಆರೋಗ್ಯಕಾರಿ ಪ್ರಯೋಜನಗಳು ದಿಗುಜೆ ಪೋಷಕಾಂಶಗಳಿAದ ಕೂಡಿದ್ದು, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಯುವ ಚರ್ಮ ಮತ್ತು ಆರೋಗ್ಯಕರ ಕೂದಲನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುವುದರಿAದ ಗ್ಲೂಕೋಸ್ ಹೀರಿಕೊಳ್ಳುವಿಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹ ಸ್ನೇಹಿ ಆಹಾರವಾಗಿದೆ. ಇದು ಹೃದಯ ಸ್ನೇಹಿ ಪೋಷಕಾಂಶ ಪೊಟ್ಯಾಶಿಯಂನಿAದ ತುಂಬಿದ್ದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ನಿಯಂತ್ರಿಸುತ್ತದೆ. ಹೃದಯ ರಕ್ತನಾಳದ ಆರೋಗ್ಯ ಪೊಟ್ಯಾಸಿಯಮ್‌ನ ಅತ್ಯುತ್ತಮ ಮೂಲವಾಗಿದೆ. ಈ ಹೃದಯ ಸ್ನೇಹಿ ಪೋಷಕಾಂಶವು ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸೋಡಿಯಂ ಪರಿಣಾಮಗಳನ್ನು ಕಡಿಮೆ ಮಾಡುವ ಮೂಲಕ ಹೃದಯ ಬಡಿತವನ್ನು ನಿಯಂತ್ರಿಸುತ್ತದೆ. ಇದು ಹೃದಯವನ್ನು ಒಳಗೊಂಡAತೆ ಅಸ್ಥಿಪಂಜರದ ವ್ಯವಸ್ಥೆಯಲ್ಲಿ ಸ್ನಾಯುವಿನ ಸಂಕೋಚನವನ್ನು ಉಂಟುಮಾಡುವ ವಿದ್ಯುತ್ ಶುಲ್ಕಗಳನ್ನು ನಡೆಸುತ್ತದೆ. ಡಯಟರಿ ಫೈಬರ್ ಕರುಳಿನಲ್ಲಿ ಅದರ ಹೀರಿಕೊಳ್ಳುವಿಕೆಯನ್ನು ತಡೆಯುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ, ಆದರೆ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಿ ಹೃದಯಾಘಾತವನ್ನು ತಡೆಗಟ್ಟುತ್ತದೆ. ಚರ್ಮದ ಆರೋಗ್ಯಕ್ಕೆ ಉತ್ತಮ. ಬ್ರೆಡ್‌ಫ್ರೂಟ್ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮವು ಹೊಳೆಯುವ ಮತ್ತು ತಾರುಣ್ಯದ ನೋಟವನ್ನು ನೀಡುತ್ತದೆ. ಬ್ರೆಡ್‌ಫ್ರೂಟ್‌ನಲ್ಲಿರುವ ವಿಟಮಿನ್ ಸಿ ಅಂಶವು ಚರ್ಮಕ್ಕೆ ಸ್ಥಿತಿಸ್ಥಾಪಕತ್ವವನ್ನು ಒದಗಿಸುವ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಬ್ರೆಡ್‌ಫ್ರೂಟ್ ಉರಿಯೂತದ ಕಿಣ್ವಗಳ ಚಟುವಟಿಕೆಯನ್ನು ತಡೆಯುತ್ತದೆ. ನೈಟ್ರಿಕ್ ಆಕ್ಸೈಡ್‌ಗಳ ಅಧಿಕ ಉತ್ಪಾದನೆಯನ್ನು ತಡೆಯುತ್ತದೆ, ಆದ್ದರಿಂದ ಚರ್ಮದ ಉರಿಯೂತವನ್ನು ತಡೆಯುತ್ತದೆ. ಮಧುಮೇಹ ನಿಯಂತ್ರಕ ಬ್ರೆಡ್‌ಫ್ರೂಟ್‌ನಲ್ಲಿ ಬಹಳಷ್ಟು ಫೈಬರ್ ಇದ್ದು ಇದು ಮಾನವ ದೇಹದಲ್ಲಿ ಮಧುಮೇಹದ ಪರಿಣಾಮವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಯು ಸೇವಿಸಬೇಕಾದ ಆರೋಗ್ಯಕರ ಖಾದ್ಯ. ಫೈಬರ್ ಜೀರ್ಣಿಸಿಕೊಳ್ಳಲು ಸಾಕಷ್ಟು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಶಕ್ತಿಯ ಸಂಗ್ರಹದ ಮಟ್ಟವನ್ನು ನಿಯಂತ್ರಿಸುತ್ತದೆ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಫೈಬರ್ ಅನ್ನು ಜೀರ್ಣಿಸಿಕೊಳ್ಳುವ ಮೂಲಕ, ದೇಹವು ಜೀರ್ಣಕ್ರಿಯೆಗೆ ಮುಂಚಿನAತೆ ಸಂಗ್ರಹಿಸಲು ಹೆಚ್ಚು ಕ್ಯಾಲೊರಿಗಳನ್ನು (ಸಕ್ಕರೆ) ಪಡೆಯುವುದಿಲ್ಲ ಜತೆಗೆ ಮಧುಮೇಹವನ್ನು ನಿಯಂತ್ರಿಸುತ್ತದೆ. ನಿದ್ದೆಗೆ ಸಹಕಾರಿ. ವ್ಯಕ್ತಿಯ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಸಿಯಮ್ ಇರುತ್ತದೆ, ಅದು ನಿದ್ರೆಯ ಗುಣಮಟ್ಟ, ಅವಧಿ ಮತ್ತು ಶಾಂತಿಯನ್ನು ಸುಧಾರಿಸಲು ನೇರವಾಗಿ ಸಂಬAಧಿಸಿದೆ. ಬ್ರೆಡ್‌ಫ್ರೂಟ್ ಚಯಾಪಚಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿದ್ರೆಯ ಅಸ್ವಸ್ಥತೆಗಳನ್ನು ಮತ್ತು ನಿದ್ರಾಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ನೆರವು ಬ್ರೆಡ್‌ಫ್ರೂಟ್‌ನಲ್ಲಿರುವ ಫೈಬರ್ ಕರುಳಿನಿಂದ ವಿಷವನ್ನು ಹೊರಹಾಕುತ್ತದೆ, ಕರುಳು ಮತ್ತು ಕರುಳಿನ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಇದು ಎದೆಯುರಿ, ಆಮ್ಲೀಯತೆ, ಹುಣ್ಣು ಮತ್ತು ಜಠರದುರಿತದಂತಹ ಜೀರ್ಣಕ್ರಿಯೆಗೆ ಸಂಬAಧಿಸಿದ ಕಾಯಿಲೆಗಳನ್ನು ತಪ್ಪಿಸುತ್ತದೆ, ಕರುಳಿನಿಂದ ವಿಷಕಾರಿ ಸಂಯುಕ್ತಗಳನ್ನು ತೆಗೆದುಹಾಕುತ್ತದೆ. ಅದರ ಹೊರತಾಗಿ ಬ್ರೆಡ್‌ಫ್ರೂಟ್ ಕರುಳಿನ ಲೋಳೆಯ ಪೊರೆಯನ್ನು ಕೊಲೊನ್‌ನಿಂದ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳನ್ನು ತಡೆಗಟ್ಟುವ ಮೂಲಕ ರಕ್ಷಿಸುತ್ತದೆ. ಮೂಳೆಯ ಸದೃಡತೆಗೆ ಮೂಳೆಯನ್ನು ಬಲಪಡಿಸಲು ಮತ್ತು ರೋಗಗಳಿಂದ ದೂರವಿರಿಸಲು, ಕ್ಯಾಲ್ಸಿಯಂ ಜೊತೆಗೆ ಒಂದು ಪ್ರಮುಖ ಪೋಷಕಾಂಶವೆAದರೆ ಒಮೆಗಾ ಕೊಬ್ಬಿನಾಮ್ಲಗಳು. ಬ್ರೆಡ್‌ಫ್ರೂಟ್ ಅಗತ್ಯವನ್ನು ಸಂಪೂರ್ಣವಾಗಿ ಒದಗಿಸುತ್ತದೆ ಮತ್ತು ನಿಮ್ಮ ಉತ್ತಮ ಮೂಳೆ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ಖಾತ್ರಿಪಡಿಸುತ್ತದೆ. ದಂತ ಆರೋಗ್ಯ ನೀವು ಹಲ್ಲುನೋವಿನಿಂದ ಬಳಲುತ್ತಿದ್ದರೆ, ನೀವು ಹುರಿದ ಬ್ರೆಡ್‌ಫ್ರೂಟ್ ಹೂವನ್ನು ಸೇವಿಸಬೇಕು. ಬ್ರೆಡ್‌ಫ್ರೂಟ್‌ನ ಎಲೆಗಳನ್ನು ನಾಲಿಗೆಗೆ ಹಚ್ಚುವುದರಿಂದ ಥ್ರಷ್ ಅನ್ನು ಗುಣಪಡಿಸಲು ಸಹ ಸಹಾಯ ಮಾಡಬಹುದು. ನೈಸರ್ಗಿಕ ಶಕ್ತಿವರ್ಧಕ ಬ್ರೆಡ್‌ಫ್ರೂಟ್‌ನ ಫೈಬರ್ ಸೇವನೆಯು ಯಾವುದೇ ಕ್ಯಾಲೋರಿ ಸೇವನೆಯಿಲ್ಲದೆ ಪೂರ್ಣವಾಗಿರಲು ನಿಮಗೆ ಸಹಾಯ ಮಾಡುತ್ತದೆ. ಇದು ಶಕ್ತಿಯ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಹೃದಯ ಸಂಬAಧಿ ಕಾಯಿಲೆಗಳನ್ನು ತಪ್ಪಿಸುತ್ತದೆ. ಸೋಂಕುಗಳ ವಿರುದ್ಧ ಪ್ರತಿರೋಧ ಬ್ರೆಡ್‌ಫ್ರೂಟ್‌ನಲ್ಲಿ ಉತ್ತಮ ಪ್ರಮಾಣದ ಆ್ಯಂಟಿಆಕ್ಸಿಡೆAಟ್‌ಗಳಿವೆ, ಇದು ದೇಹವು ಸಾಂಕ್ರಾಮಿಕ ಏಜೆಂಟ್‌ಗಳ ವಿರುದ್ಧ ಪ್ರತಿರೋಧವನ್ನು ಬೆಳೆಸಲು ಸಹಾಯ ಮಾಡುತ್ತದೆ. ಇದು ವಯಸ್ಸಾದ ಮತ್ತು ವಯಸ್ಸಿಗೆ ಸಂಬAಧಿಸಿದ ಇತರ ಕಾಯಿಲೆಗಳಿಗೆ ಕಾರಣವಾಗುವ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ದೇಹದಿಂದ ದೂರೀಕರಿಸುತ್ತದೆ. ತಲೆ ಮತ್ತು ಕೂದಲು ಚಿಕಿತ್ಸೆ ದಿಗುಜೆಯು ಒಮೆಗಾ ೩ ಮತ್ತು ಒಮೆಗಾ ೬ರ ಉತ್ತಮ ಮೂಲವಾಗಿದೆ. ತಲೆಹೊಟ್ಟು, ತುರಿಕೆ ಮತ್ತು ಕೂದಲು ಒಡೆಯುವಿಕೆಗೆ ಚಿಕಿತ್ಸೆ ನೀಡುತ್ತದೆ. ಬ್ರೆಡ್‌ಫ್ರೂಟ್ ವಾಸ್ತವವಾಗಿ ಒಮೆಗಾ ೩ ಮತ್ತು ಒಮೆಗಾ ೬ ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ, ಇದು ಕೂದಲನ್ನು ಒಡೆಯುವುದನ್ನು ಕಡಿಮೆ ಮಾಡುತ್ತದೆ. ಬ್ರೆಡ್‌ಫ್ರೂಟ್‌ನಲ್ಲಿರುವ ಕೊಬ್ಬಿನಾಮ್ಲಗಳು ನೆತ್ತಿಯ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ತಲೆಹೊಟ್ಟು ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ. ಇದು ನೆತ್ತಿಯ ಉರಿಯೂತ ಮತ್ತು ಜೀವಕೋಶದ ಸಾವನ್ನು ತಡೆಯುತ್ತದೆ, ಕೂದಲು ಉದುರುವುದನ್ನು ತಡೆಯುತ್ತದೆ. ಕೊನೆ ಹನಿ ಆದುದರಿಂದ ಜನತೆ ದಿಗುಜೆಯನ್ನು ಬೆಳಸಿ, ಬಳಸಬೇಕಿದೆ. ತನ್ಮೂಲಕ ದೇಹದ ಆರೋಗ್ಯವನ್ನು ಕಾಪಾಡುವುದರ ಜತಗೆ ಪರಿಸರ ಸಮತೋಲನಕ್ಕೂ ತಮ್ಮ ಅತ್ಯಮೂಲ್ಯ ಕೊಡುಗೆಯನ್ನು ನೀಡಬಹುದಾಗಿದೆ.

Saturday 14 August 2021

ವಿದ್ಯಾರ್ಥಿಗಳಿಗೆ ಬಾಕಾಹು ರುಚಿ ತೋರಿಸಿದ ಅರಣ್ಯ ಮಹಾವಿದ್ಯಾಲಯ*

 

ವಿದ್ಯಾರ್ಥಿಗಳಿಗೆ ಬಾಕಾಹು ರುಚಿ ತೋರಿಸಿದ ಅರಣ್ಯ ಮಹಾವಿದ್ಯಾಲಯ*


_ಕೊಡಗಿಗೂ ಹಬ್ಬಿದ ಬಾಕಾಹು ಘಮ_


*ವಿದ್ಯಾಲಯದ ಮೂಲಕ ’ಬಾಕಾಹು’ ವಿದ್ಯಾಪ್ರಸಾರ*
 
 
 
 

 
 
 
 
 
 


ಕೊಡಗಿನ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಈಚೆಗೆ ವಿದ್ಯಾರ್ಥಿಗಳ ಮೂಲಕವೇ ಬಾಳೆಕಾಯಿ ಹುಡಿ ತಯಾರಿ ಕಾರ್ಯಕ್ರಮ ನಡೆಸಿತು. ಅರಣ್ಯಶಾಸ್ತ್ರ ಬಿಎಸ್ಸಿ ಕೊನೆ ವರ್ಷದ 20 ಮತ್ತು ’ರಾಷ್ಟ್ರೀಯ ಷಿ ವಿಕಾಸ ಯೋಜನೆ’ಯ ರಾಜ್ಯಾದ್ಯಂತದ 20 - ಹೀಗೆ 40 ವಿದ್ಯಾರ್ಥಿ  - ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅರಣ್ಯ ಉತ್ಪನ್ನ ಮತ್ತು ಉಪಯೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಬಿ.ಎನ್ ಈ ತರಬೇತಿಯ ರೂವಾರಿ. ಡೀನ್ ಡಾ. ಕುಶಾಲಪ್ಪ ಅವರ ಸಕ್ರಿಯ ಬೆಂಬಲ.
 ಬಳಸಿದ್ದು ಏಲಕ್ಕಿ ಬಾಳೆ. ಸತೀಶ್ ಅವರ ಪತ್ನಿ ವಚನಾ ಹೆಚ್.ಸಿ. ಅವರಿದ ಪಾಕಪ್ರಯೋಗ. ಅರ್ಧ ಪಾಲು ಬಾಕಾಹು ( ಬಾಳೆಕಾಯಿ ಹುಡಿ / ಹಿಟ್ಟು) ಸೇರಿಸಿ ಕೊಡಗಿನ ಜನಪ್ರಿಯ ಅಕ್ಕಿ ರೊಟ್ಟಿ ಮತ್ತು ನೂ(ಲ್)ಪುಟ್ಟು ತಯಾರಿ. "ಎರಡು ತಿಂಡಿಗಳಲ್ಲೂ ಕೊರತೆ ಹೇಳಲು ಏನೂ ಇಲ್ಲ. ಬಾಕಾಹು ಅಷ್ಟು ಚೆನ್ನಾಗಿ ಬ್ಲೆಂಡ್  ಆಗಿದೆ. ಬರೇ ಅಕ್ಕಿ ತಿನ್ನೋದಕ್ಕೆ ಬದಲು ಇಷ್ಟು ಪೋಷಕಾಂಶಭರಿತ ಬಾಳೆಕಾಯಿ ಸೇರಿಸುವುದು ಉತ್ತಮ ಅಲ್ಲವೇ?" ಎಂದು ಪ್ರಶ್ನಿಸುತ್ತಾರೆ ದಾವಣಗೆರೆ ಮೂಲದ ಕೊನೆ ವರ್ಷದ ವಿದ್ಯಾರ್ಥಿನಿ ಸೌಂದರ್ಯ ಆರ್.ವಿ. 

ಅದೇ ವರ್ಷದ ವಿದ್ಯಾರ್ಥಿ ಶಿವಮೊಗ್ಗದ ಸುಮನ್ ಎಂ.ಡಿ.ಗೆ ಕೂಡಾ ಈ ಉಪಾಹಾರಗಳು ಮೆಚ್ಚುಗೆ ಆಗಿವೆ. ಪದವಿ ಮುಗಿಸಿ ಸೆಪ್ಟೆಂಬರಿನಲ್ಲೆ ಊರು ಸೇರುತ್ತಾರೆ. ಅಮ್ಮನನ್ನು ಎದುರಿಟ್ಟು ಬನ್ಸ್, ರೊಟ್ಟಿ ಮಾಡುವ ಪ್ಲಾನ್ ಹಾಕಿದ್ದಾರೆ. "ಬಾಳೆಹಣ್ಣು ಮಧುಮೇಹಿಗಳಿಗೆ ಆಗದು. ಬಾಕಾಹು ಬಳಸಲು ಅಡ್ಡಿಯಿಲ್ಲ ತಾನೇ. ರೈತರು ಗಾಳಿ ಮಳೆಗೆ ಬೀಳುವ ಗೊನೆಗಳ ಹುಡಿ ಮಾಡಿಟ್ಟು ಬಳಸಬಹುದು", ಸುಮನ್ ಹಾರೈಸುತ್ತಾರೆ.

ಮುಂದಿನ ಬದುಕಿಗೆ ಮಹತ್ವದ್ದಾಗಬಲ್ಲ ’ಬಾಕಾಹು ವಿದ್ಯೆ’ಯನ್ನು ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಹಂಚಿದ ಅರಣ್ಯ ಮಹಾವಿದ್ಯಾಲಯಕ್ಕೆ ಭಲೇ ಎನ್ನಲೇಬೇಕು. ಈ ಮೂಲಕ ಈ ಕಾಲೇಜು ಉಳಿದ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
_ಡಾ.ಸತೀಶ್ ಬಿ.ಎನ್_ - *98801 25962* _( 4 - 5 PM)_
 (ಆಧಾರ)

Wednesday 28 July 2021

ನೀರಿಗೆ ಬಜೆಟ್ ...!


 ಬರಹ: ಕೂಡಂಡ ರವಿ, ಹೊದ್ದೂರು, ಕೊಡಗು. 


 




ಸಾಕಷ್ಟು ಮಂದಿ ನೀರಿನ ಸದ್ಭಳಕೆ-ಕಲುಶಿತತೆಯ ಬಗ್ಗೆ ವೇದಿಕೆ ಸಿಕ್ಕೊಡನೆ ಉದ್ದುದ್ದ ಭಾಷಣ ಬಿಗಿಯುವರು. ಸಾಕಷ್ಟು ಮಂದಿ ಪುಕ್ಕಟೆ ಉಪದೇಶ ನೀಡುವುದರಲ್ಲಿ ನಿಸ್ಸೀಮರು. ನೀರಿನ ವಿಚಾರ ಬಂದಾಗಲೂ ಇದು ಕಟು ವಾಸ್ತವ.  ಇಂತಹ ಭಾಷಣಕಾರರು ತಾವು ನೀರಿನ ಉಳಿವಿನ ಬಗ್ಗೆ, ಕಲುಶಿತತೆ ನಿವಾರಣೆಯ ಬಗ್ಗೆ ತಾವೇನೂ ಮಾಡಿದ್ದೇವೆ ಎಂದು ಜನತೆಗೆ ತೋರಿಸಬೇಕು. ಬಳಿಕ ಅದನ್ನು ಎಲ್ಲರೂ ಅನುಸರಿಸುವಂತೆ, ಅನುಕರಿಸುವಂತೆ ಕರೆ ನೀಡಬೇಕು. ಆದರೆ, ಬಹುಪಾಲು ಆಗುತ್ತಿರುವುದೇ ಬೇರೆ. “ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ”...ಎಂಬAತೆ !

 ಭವಿಷ್ಯ ಕಠಿಣ

ಎಲ್ಲದಕ್ಕೂ ಸರಕಾರಗಳನ್ನೇ ನಂಬಿ ಕುಳಿತುಕೊಳ್ಳುವ ಬದಲು ಕೈಲಾದ ಮಟ್ಟಿಗೆ ಎಲ್ಲರೂ, ನೀರಿನ ವಿಚಾರದಲ್ಲಿ ಕಂಕಣ ಬದ್ಧರಾದಲ್ಲಿ ಸಮಸ್ಯೆ ಭವಿಷ್ಯದಲ್ಲಿ ಕಠಿಣವೆನಿಸಲಿಕ್ಕಿಲ್ಲ. ನಮಗೆ ನೀರು ಅತಿಯಾದಾಗ, ನೀರಿಗೆ ಬರ ಬಂದಾಗ ಮಾತ್ರ ನೀರು ನೆನಪಿಗೆ ಬರುವುದು ಸ್ವಾಭಾವಿಕ. ಆದರೆ, ನೀರು ಸಕಲ ಜೀವಚರಾಚರಗಳಿಗೆ ಮೂಲ. ಅದಕ್ಕಾಗಿ ಅದನ್ನು “ಜೀವಜಲ” ಎನ್ನುವರು. ಜಲವಿಲ್ಲದೆ ಜೀವವಿಲ್ಲ ! ಅದನ್ನು ಪುರಾಣ ಕಾಲದ ಋಷಿ ಮುನಿಗಳು ಚೆನ್ನಾಗಿ ತಿಳಿದಿದ್ದರು. 

 ಇದೇ ಹಿನ್ನೆಲೆಯಲ್ಲಿ ನಾವು “ಗಂಗೇಚ ಯಮುನೇಚಾ...ಶ್ಲೋಕ ಪಠಿಸುತ್ತೇವೆ. ಅವುಗಳನ್ನು ಭಕ್ತಿಭಾವದಿಂದ ಪೂಜಿಸುತ್ತೇವೆ. ಆರಾಧಿಸುತ್ತೇವೆ. ಆರ್ಘವನ್ನು ಅರ್ಪಿಸುತ್ತೇವೆ. ಪಿಂಡ ಪ್ರಧಾನ ಮಾಡುತ್ತೇವೆ. ಎಲ್ಲದಕ್ಕೂ ನೀರೇ ಮೂಲ. ಅಲ್ಲವೇ ? ಆದರೂ, ನಾವು ನೀರಿನ ಬಗ್ಗೆ ಇಲ್ಲ ಸಲ್ಲದ ತಾತ್ಸಾರ ಮನೋಭಾವನೆ ತೆಳೆದಿರುವೆವು ! ಕೃಷಿಯಂತೂ ನೀರಿಲ್ಲದ ಇಲ್ಲವೇ ಇಲ್ಲ.  ಬರೇ ನೀರನ್ನೇ ಬಳಸಿ ಮಾಡುವ ಕೃಷಿಯೂ ಇದೆ ! (ಮಣ್ಣು ರಹಿತ !) ಆದರೂ, ನೀರನ್ನು ವ್ಯರ್ಥ ಪೋಲು ಮಾಡುತ್ತೇವೆ. ಇದರ ಅರಿವು ಬಹುತೇಕರಿಗೆ ಇಲ್ಲ. ಇದ್ದರೂ ಅದು ಕೇವಲ ಭಾಷಣಗಳಿಗಷ್ಟೇ ಸೀಮಿತ !? 


ನೀರಿನ ಬರ ಎಷ್ಟು ಭೀಕರ !

ನಮ್ಮ ದೇಶದಲ್ಲಿ ೪೦ ಲಕ್ಷ ಮಂದಿ ನೀರಿನ ಕೊರತೆ, ನೈರ್ಮಲ್ಯರಹಿತ ನೀರಿನ ಬಳಕೆಯಿಂದ ಸಾಯುತ್ತಿದ್ದಾರೆ. ನಮ್ಮ ದೇಶದ ೧೦೦ ಮಿಲಿಯನ್ ಮಕ್ಕಳಿಗೆ ಮನೆಯಲ್ಲಿ ಕುಡಿಯಲು ಶುದ್ಧ ನೀರಿಲ್ಲ !? ವಿಶ್ವದ  ಸರಿಸುಮಾರು ೨.೨ ಶತಕೋಟಿ ಜನತೆಗೆ ಕುಡಿಯುವ ನೀರಿನ ಕೊರತೆ ಇದೆ. ೩ ಬಿಲಿಯನ್ ಜನತೆಗೆ ಕೈ ತೊಳೆಯಲು ನೀರಿಲ್ಲ. 

ನಮ್ಮ ರಾಜ್ಯದ ಸಮಸ್ಯೆಯೇನು ? 

ಮೈಸೂರು ಜಿಲ್ಲೆಯ ೧೩ ಹಳ್ಳಿಗಳಲ್ಲಿ ಇನ್ನೂ ಕುಡಿಯುವ ನೀರಿನ ಸೌಲಭ್ಯವಿಲ್ಲ. ಕೊಡಗಿನ ಬಹುಪಾಲು ಹಳ್ಳಿ ಪಟ್ಟಣಗಳು ಕಾವೇರಿ ನದಿಯ ದಂಡೆಯಲ್ಲಿವೆ. ಅದರೂ, ಅವುಗಳಲ್ಲಿ ಹೆಚ್ಚಿನ ಪಟ್ಟಣಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ ! ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು ಕೃಷಿಗೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವರು. ಉದಾಹರಣೆಗಾಗಿ ಹಾರಂಗಿ ಜಲಾಶಯದ ಕೆಳಭಾಗದ ಜನತೆಯ ಕೃಷಿಗೆ ನೀರೇ ಇಲ್ಲ. ಹೇಮಾವತಿ ಜಲಾಶಯದ ಕೆಳ ಭಾಗ ಅಂದರೆ, ತುಮಕೂರು ಜಿಲ್ಲೆಯ ಬಹುಪಾಲು ಕೆರೆಗಳನ್ನು ತುಂಬಿಸಲು ಹೇಮಾವತಿ ಜಲಾಶಯದಿಂದ ನೀರನ್ನು ಹರಿಸುತ್ತಿಲ್ಲ, ನಮ್ಮ ಸರಕಾರಗಳು ! ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯಾವ ಸರಕಾರಗಳು ಪ್ರಯತ್ನಿಸುತ್ತಿಲ್ಲ. ಜನತೆಯ ಪ್ರತಿಭಟನೆ ಮುಗಿಲು ಮುಟ್ಟಿದರೂ, ಜನಪ್ರತಿನಿಧಿಗಳ ಕಿವುಡರಾಗಿದ್ದಾರೆ !

ಇದರಿಂದ ಆ ಭಾಗದ ರೈತರಿಗೆ ಕೃಷಿಗೆ ಹೋಗಲಿ, ಕುಡಿಯಲು ನೀರಿಲ್ಲ. ಬೆಂಗಳೂರಿಗರಿಗೂ ಕುಡಿಯುವ ನೀರಿಲ್ಲ ! ಉತ್ತರ ಕರ್ನಾಟಕದ ಹಳ್ಳಿ-ಪಟ್ಟಣಗಳಲ್ಲಿ ನಾಲ್ಕಾರು ದಿನಗಳಿಗೊಮ್ಮೆ ನಲ್ಲಿಗಳಲ್ಲಿ ನೀರು ಬರುತ್ತದೆ ! ಅದನ್ನು ತುಂಬಿ ಇಡುವ ಸ್ಥಳ ಮತ್ತು ಪಾತ್ರೆ-ಪಗಡೆ ಇಡಲು ಪ್ರತೀ ವರ್ಷವೂ ಸಹಸ್ರಾರು ರೂಪಾಯಿ ಖರ್ಚು ಮಾಡುತ್ತಾರೆ. ಗದಗದ ಮಂದಿ !? ಮಹರಾಷ್ಟçದ ಬುದ್ರಕ್ ಎಂಬ ಊರಿನಲ್ಲಿ ಅತೀ ಕಡಿಮೆ ಮಳೆ ಬರುತ್ತದೆ.( ಈ ಊರು ಗೋಲಗುಂಬಜ್‌ನಿAದ ೧೫ ಕಿಲೋ ಮೀಟರ್ ದೂರದಲ್ಲಿದೆ) ಅಲ್ಲಿ ಇಡೀ ವರ್ಷಕ್ಕೆ ಮಲೆನಾಡಿನಲ್ಲಿ ಒಂದು ದಿನ ಬರುವ ಮಳೆಗಿಂತ ಕಡಿಮೆ ಮಳೆ ಬರುತ್ತದೆ. ಸುಮಾರು ೮- ೯ ಇಂಚು. ಆದರೆ, ಮಲೆನಾಡಿನಲ್ಲಿ ದಿನಕ್ಕೆ ೧೦-೧೫ ಇಂಚು ಮಳೆ ಬರುತ್ತದೆ. (ಒಂದು ಇಂಚು ಅಂದರೆ, ನಾಲ್ಕು ಸೆಂಟಿಮೀಟರ್, ಅಥವಾ -೨೫.೪ ಮಿಲಿಮೀಟರ್). ಇಂತಹ ಊರಿನಲ್ಲಿಯೂ ನೀರು ಬಳಸಿ ಕೃಷಿ ಮಾಡುತ್ತಾರೆ. ನಮ್ಮ ಊರಿನಲ್ಲಿ (ಮಲೆನಾಡಿನಲ್ಲಿ) ಕೃಷಿಗೆ ನೀರು ಸಿಗುತ್ತಿಲ್ಲ ಎಂದು ಜನತೆ ಭತ್ತದ ಗದ್ದೆಗಳನ್ನು ಹಾಳುಬಿಟ್ಟಿದ್ದಾರೆ !).

  ನೀರಿನ ಕೊರತೆಯ ಜೊತೆಗೆ, ಬೆಂಗಳೂರು ನೀರಿನ ತೊಂದರೆಗಳು ಮತ್ತೊಂದು ಆಯಾಮವನ್ನು ಹೊಂದಿವೆ. ರಾಸಾಯನಿಕ ಮಾಲಿನ್ಯ. ಅಧ್ಯಯನದ ಆವಿಷ್ಕಾರಗಳು ಭೀಕರವಾದವು. ೭೩೫ ಮಾದರಿಗಳಲ್ಲಿ ೩೭೦ಕ್ಕೂ ಅಧಿಕ ಅಂತರ್ಜಲ ಕುಡಿಯಲು ಸೂಕ್ತವಲ್ಲ. ಅಂದರೆ ನಗರದ ೫೦% ಕ್ಕಿಂತ ಹೆಚ್ಚು ಕುಡಿಯುವ ನೀರು ಕುಡಿಯಲು ಸಾಧ್ಯವಿಲ್ಲ. ಅವುಗಳು ವಿಷಕಾರಿ ವಸ್ತುಗಳಿಂದ ಕೂಡಿದೆ. ಇಂತಹವುಗಳನ್ನು ಕುಡಿದ್ದಲ್ಲಿ ಖಾಯಿಲೆ ಖಚಿತ.


ವಿಶ್ವ ಮಹಾ ಯುದ್ಧ 

ಬೆಂಗಳೂರಿನ ಭಾಗದ ಜನತೆಗೆ ಕುಡಿಯುವ ನೀರಿನ ಪರಿಹಾರಕ್ಕಾಗಿ ನೇತ್ರಾವತಿ ನದಿಯ ಕೆಲ ಭಾಗದ ನೀರನ್ನು ಅತ್ತ ತಿರುಗಿಸಿ ಬಳಸುವ ಯೋಜನೆ ಇದೆ. ಸಮುದ್ರ ಸೇರುವ ನೀರನ್ನು ಕುಡಿಯಲು ಬಳಸುವುದರಲ್ಲಿ ತಪ್ಪೇನು ? ಎಂಬುದು ಕೆಲವರ ವಾದ. ಇದರಿಂದ ನೇತ್ರಾವತಿ ಬತ್ತಿಹೋಗುತ್ತದೆ ಎನ್ನುವರು ಕೆಲವರು. ಕರ್ನಾಟಕ-ತಮಿಳುನಾಡು ವಿಚಾರ ಹೆಚ್ಚಾಗಿ ರಾಷ್ಟೀಯ ಮಟ್ಟದಲ್ಲಿ ಚರ್ಚೆಯಾಗುವುದೇ ಕಾವೇರಿ ನೀರಿನಿಂದ. ನೀರಿನ ವಿಚಾರಗಳೇ ಹಲವಾರು ಸಮಸ್ಯೆಗಳ ಮೂಲ. ಇದು ತೃತೀಯ ವಿಶ್ವ ಮಹಾಯುದ್ಧಕ್ಕೆ ಕಾರಣವಾಗಬುದು ಎಂದು ಎಚ್ಚರಿಸಿದ್ದಾರೆ ಹಿರಿಯರು. ಅದರೂ, ನಾವು ಎಚ್ಚರಗೊಂಡAತಿಲ್ಲ !

ಜೀವಜಲ-ಇನ್ನೆಷ್ಟು ದಿನ ?

 ನೀರಿನ ಸಮಸ್ಯೆ ಇದೇ ರೀತಿ ಮುಂದುವರಿದ್ದಲ್ಲಿ ಕುಡಿಯುವ ನೀರಿಗಾಗಿ ಹಳ್ಳಿ-ಪಟ್ಟಣಗಳಲ್ಲಿ ನಡೆಯುತ್ತಿರುವ ಗಲಭೆಗಳು ವಿಶ್ವಮಟ್ಟ ತಲುಪಲು ಹೆಚ್ಚು ದಿನ ಬೇಕಿಲ್ಲ. ಶುದ್ಧ ಕುಡಿಯುವ ನೀರು ಮುಂಬರುವ ದಿನಗಳಲ್ಲಿ ಮರೀಚಿಕೆಯಾಗಲಿದೆ. ಹಲವಾರು ಊರುಗಳಲ್ಲಿ ಸೇನೆಯ ಸೇವೆ ಸಲ್ಲಿಸಿ ಬಂದ ಮಿತ್ರನೊಬ್ಬನ ಪ್ರಕಾರ ಕೊಡಗಿನ ಪ್ರತೀ ಊರಿನಲ್ಲಿ ಮಾತ್ರ ಕುಡಿಯಲು ಶುದ್ಧ ನೀರು ಸಿಗುತ್ತದೆ. ಇತರ ಕಡೆ ನೀರು ಕುಡಿಯಲು ಭಯವಾಗುತ್ತದೆ. ಬಾಟಲಿಯಲ್ಲಿ ಮಾರುವ ನೀರು ಕೂಡ ವಿಷಮಯವಾಗಿರುತ್ತದೆ. ಯಾವ ನೀರು ಕುಡಿಯಲಿ ಎಂದು ಜನತೆ ಗೊಂದಲದಲ್ಲಿದ್ದಾರೆ. ಇಂದು ಈ ಸಮಸ್ಯೆ ಬಹುತೇಕ ಕಡೆ ಇದೆ. ಆದರೆ, ನಮ್ಮ ಜನತೆ ಎಚ್ಚರವಾಗುತ್ತಿಲ್ಲ. ಸಮಸ್ಯೆ ಅವರ ಬುಡಕ್ಕೆ ಬಂದಾಗ ಮಾತ್ರ ಎಚ್ಚರವಾಗುವವರು ಕೆಲವರು ! ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ !

ಮಕ್ಕಳಿಗೂ ನೀರಿನ ಅರಿವು 

ನೀರಿನ ಬಗ್ಗೆ ಅರಿವಿಲ್ಲದೇ ಹಲವಾರು ನದಿಗಳು ಬೇಸಿಗೆ ಬತ್ತಿ ಹೋಗುತ್ತಿವೆ. ಅದನ್ನು ನಂಬಿಕೊAಡಿರುವ ಜಲಚರಗಳು ನಿರ್ವಂಶವಾಗುತ್ತಿವೆ. ಈ ಬಗ್ಗೆ ನಾವು ತಿಳಿದುಕೊಂಡು ಅದನ್ನು ಅನುಸರಿಸಬೇಕು. ಅದನ್ನು  ನಮ್ಮ ಮಕ್ಕಳಿಗೂ ತಿಳಿ ಹೇಳಬೇಕು. ಪ್ರತೀ ನೀರಿನ ಹನಿಯ ಮೌಲ್ಯವನ್ನು ಅವರಿಗೆ ತಿಳಿಸಬೇಕು. ಅದನ್ನು ಪಾಲಿಸುವಂತೆ ಅವರಿಗೆ ಮನವರಿಕೆ ಮಾಡಬೇಕಿದೆ. ಶಾಲಾ ಕಾಲೇಜುಗಳ ಪಠ್ಯದಲ್ಲಿ ಈ ಭಾಗವನ್ನು ಸೇರಿಸುವ ಅಗತ್ಯತೆ ಇದೆ. ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಪ್ರತೀ ಶಾಲಾ-ಕಾಲೇಜುಗಳಲ್ಲಿ ಮಳೆನೀರು ಕೊಯ್ಲುವಿನ ಪ್ರಾಯೋಗಿಕ ಪಾಠ ಜಾರಿ ಮಾಡಬೇಕಿದೆ. ನಮ್ಮ ಮನೆ-ಮನಗಳಲ್ಲಿ ಪ್ರತೀ ದಿನವೂ “ಜಲೋತ್ಸವ” ನಡೆಯಬೇಕು.ಸರಕಾರದ ವತಿಯಿಂದ ನಿರ್ಮಾಣವಾಗುವ ಎಲ್ಲಾ ಕಟ್ಟಡ-ಮನೆಗಳಲ್ಲಿ ಕಡ್ಡಾಯವಾಗಿ ಮಳೆಕೊಯ್ಲು ಅಳವಡಿಸಬೇಕಿದೆ.  

ನಾನು ಈ ಕುರಿತು ಪಠ್ಯಕ್ಕೆ ಯೋಗ್ಯವಾಗಬಹುದಾದ ಲೇಖನವನ್ನು ಬರೆದಿರುವೆ. ಬೆಂಗಳೂರಿನ ಮಿತ್ರರೊಬ್ಬರು ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು ! (ಈ ಲೇಖನ ನನ್ನ ಬ್ಲಾಗ್‌ನಲ್ಲಿದೆ. ನನ್ನ ಬ್ಲಾಗ್‌ನಲ್ಲಿನ ನೀರಿನ ಕುರಿತಾದ ಲೇಖನವನ್ನು ೫೦ ಸಾವಿರಕ್ಕೂ ಅಧಿಕ ಮಂದಿ ಓದಿರುವರು. ಬರೇ ಓದಿದರೆ ಸಾಲದು. ಅದನ್ನು ಅನುಸರಿಸುವ ಪ್ರಯತ್ನ ಪಡಬೇಕು.) 

 ನೀರಿನ ಮುಂಗಡ ಪತ್ರದ ಅಗತ್ಯ 

ನಾವು ಸಾಮಾನ್ಯ ಕೇಂದ್ರ ಮುಂಗಡಪತ್ರ, ರೈಲ್ವೆ ಮುಂಗಡ ಪತ್ರ, ರಾಜ್ಯ ಮುಂಗಡ ಪತ್ರ, ಕೃಷಿ ಮುಂಗಡ ಪತ್ರಗಳನ್ನು ಕೇಳಿರುವೆವು. ಆದರೆ, ಇಂದಿನ ಸಮಸ್ಯೆಗಳ ಸಮತೋಲನಕ್ಕಾಗಿ ನೀರಿನ ಮುಂಗಡ ಪತ್ರವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಂಡಿಸುವ ಅವಶ್ಯಕತೆ ಇದೆ. ಇದರಿಂದ ಪ್ರತಿ ಗ್ರಾಮ ಮಟ್ಟದಿಂದಲೇ ನೀರಿನ ಬಗ್ಗೆ ಅರಿವು ನೀರಿನ ಉಳಿವು ಮುಂತಾದವುಗಳು ಸಾಧ್ಯ. ಇವುಗಳು ಮೊಟ್ಟ ಮೊದಲಿಗೆ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾರಿಯಾಗಬೇಕಿದೆ. ಮನೆಯಲ್ಲಿಯೂ ನೀರಿನ ಮುಂಗಡ ಕಾಯ್ದಿರಿಸುವಿಕೆ ಮಾಡುವುದು ಉತ್ತಮ. ಹಲವಾರು ಕಡೆ ಮಳೆಗಾಲದಲ್ಲಿ ದೊರೆಯುವ ವಿಫುಲ ನೀರನ್ನು  ಸಂಗ್ರಹಿಸಿ, ಬೇಸಿಗೆ ದಿನಗಳಲ್ಲಿ ಬಳಸುವ ಪರಿಪಾಠವಿದೆ. ಈ ಯೋಜನೆಯು ಪ್ರತೀ ಗ್ರಾಮದ ಪ್ರತೀ ಮನೆಗೂ ತಲುಪಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ನೀರಿನ ಕ್ಲಬ್‌ಗಳ ಸಹಕಾರ ಅತ್ಯಗತ್ಯ. 

 ನೀರಿಲ್ಲದ ನಾಳೆ !

ನೀರಿಲ್ಲದ ನಾಳೆಯನ್ನು ನೀವು ಕಲ್ಪಿಸಿಕೊಳ್ಳಲೂ ಅಸಾಧ್ಯ. ನೀರು ಇದ್ದೆ ನಮ್ಮ ನೀರಿಗೆ ನಾವೇ ಪ್ರತೀ ಲೀಟರ್‌ಗೆ ೨೦ ರೂಪಾಯಿ ನೀಡಿ ಕುಡಿಯುತ್ತೇವೆ. ಹಲವಾರು ಬಹುರಾಷ್ಟೀಯ ಕಂಪೆನಿಗಳು ನಮ್ಮ ನೀರನ್ನು ನಮಗೆ ಮಾರಿ ಬಿಲಿಯನ್ ಹಣ ಸಂಪಾದಿಸುತ್ತಿವೆ. ನಾವೆಷ್ಟು ದಡ್ಡರು ! ಶೀಷೆಯಲ್ಲಿ ತುಂಬಿಸಿದ ವಿಷಭರಿತ ನೀರನ್ನು ತೀರ್ಥದಂತೆ ಕುಡಿಯುತ್ತೇವೆ. ಮುಂಬರುವ ವರ್ಷಗಳಲ್ಲಿ ಕುಡಿಯುವ ನೀರಿಗೆ ಪ್ರತೀ ಲೀಟರ್‌ಗೆ ೧೦೦ ರೂಪಾಯಿ ಆದರೂ ನೀವು ಅಚ್ಚರಿ ಪಡಬೇಕಿಲ್ಲ. ಹಲವಾರು ಕಡೆ ಶುದ್ಧ ನೀರು ದಂಧೆಯೇ ನಡೆಯುತ್ತಿದೆ. ಪ್ರತೀ ಲೀಟರ್ ನೀರು ಪೆಟ್ರೋಲಿಯಂಗಿAತಲೂ ದುಬಾರಿಯಾಗಲಿದೆ. ಇಂತಹ ದುರ್ದಿನಗಳು ತೀರಾ ಸಮೀಪದಲ್ಲಿವೆ. 

 ಹನಿ ನೀರು ದುಬಾರಿ !

ಆದುದರಿಂದ ಇಂದೇ ಪ್ರತೀ ಹನಿ ನೀರನ್ನು ಅರಿತು ಬಳಸೋಣ. ಅದನ್ನು ಸದ್ವಿನಿಯೋಗ ಮಾಡೋಣ. ಈ ವಿಚಾರವನ್ನು ನಾವೇಲ್ಲರೂ ಅನುಸರಿಸೋಣ. ಈ ಸಂದೇಶವನ್ನು ಇತರರಿಗೂ ಹಂಚೋಣ. ನೆಮ್ಮದಿ ನಾಳೆ ನಮ್ಮದಾಗಲಿ ಎಂದು ಆಶಿಸೋಣ. 


Wednesday 21 July 2021

ಸಾವಯವ-ಸಾಯುತ್ತಿರುವ ರೈತ: ಬಳಕೆದಾರ... !?


                         ಬರಹ
: ಕೂಡಂಡ ರವಿ
, ಹೊದ್ದೂರು, ಕೊಡಗು.

 


 

 

 

ಈಗ ಎಲ್ಲೆಲ್ಲೂ ಸಾವಯುವ ಕೃಷಿಯ ಮಾತು. ಇಂತಹ ಕೃಷಿಯ ಉತ್ಪನ್ನಗಳಿಗೆ ಬೇಡಿಕೆ ಅಧಿಕ. ಹಲವರು ಸಾವಯುವ ಹೆಸರನ್ನು ದುರ್ಬಳಕೆ ಮಾಡಿ ರೈತಾಪಿ ವರ್ಗವನ್ನು, ಬಳಕೆದಾರರನ್ನು ವಂಚಿಸುತ್ತಿರುವುದು ಹೆಚ್ಚಾಗುತ್ತಿದೆ.


ಉದಾಹರಣೆಗಾಗಿ ಸಾವಯವ ಕೃಷಿಗೆ ದೃಡೀಕರಣ ಪತ್ರ ನೀಡುವಾಗ ರೈತರ ಜಮೀನ ಮಣ್ಣು ಇಂತಹ ಗುಣಗಳನ್ನು ಹೊಂದಿರಬೇಕು. ಅಂತಹ ಜಮಿನಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಇಂತಿಷ್ಟೇ ಇರಬೇಕು. ಬೆಳೆದ ಬೆಳೆಯಲ್ಲಿ ರಾಸಾಯನಿಕದ ಅಂಶಗಳು ಇರಬಾರದು. ರಾಸಾಯನಿಕ ಗೊಬ್ಬರದ ಸೂಚ್ಯಂಕದ ಮಟ್ಟವು ಇಂತಿಷ್ಟೇ ಇರಬೇಕೆಂಬ ಮಾನದಂಡವೇ ಇಲ್ಲ ! ಆದರೂ, ಹಲವಾರು ಕಡೆ ಸಾವಯವ ಸರ್ಟಿಫಿಕೇಟ್ಗಳು ಬಿಕರಿಯಾಗುತ್ತಿವೆ ! ಇಲ್ಲಿ ವಿಪರ್ಯಾಸದ ಅಂಶವೆAದರೆ, ಸಾವಯವ ದೃಡೀಕರಣ ಪತ್ರ ಪಡೆದ ಆ ಬೆಳೆಗಾರ ಬಳಿಕ ರಾಸಾಯನಿಕ ವಸ್ತುಗಳ ಮೊರೆ ಹೋಗಬಾರದು ಎಂದೇನೂ ಇಲ್ಲವಲ್ಲ. ಅಂತಹ ದೃಡೀಕರಣ ಪತ್ರ ಹೊಂದಿರುವಾತ, ಒಂದು ಏಕರೆಗೆ ಪ್ರಮಾಣ ಪತ್ರ ಮಾಡಿಸಿ, ಬಳಿಕ ರಾಸಾಯನಿಕಕ್ಕೆ ಮೊರೆ ಹೋಗುವ ಸಂಭವ ಹೆಚ್ಚು. ಅಥವಾ ಅರ್ಧ ಏಕರೆಗೆ ಸಾವಯವ ದೃಡೀಕರಣ ಪತ್ರ ಪಡೆದು, ಉಳಿದ ಜಮೀನಿನಲ್ಲಿ ರಾಸಾಯನಿಕ ಬಳಸಿ, ಬೆಳೆ ಬೆಳೆದು ಮಿಶ್ರಣ ಮಾಡಿ ಮಾರಾಟ ಮಾಡಿ ಖರೀದಿದಾರನಿಗೆ ಮೋಸ ಮಾಡಬಹುದು. ಇಲ್ಲವಾದಲ್ಲಿ ರಾಸಾಯನಿಕ ಬಳಸಿ ಬೆಳೆದ ಬೆಳೆಗಳನ್ನು ಬೇರೆಯವರಿಂದ ಖರೀದಿಸಿ ಸಾವಯವ ಎಂಬ ಹೆಸರಿನಲ್ಲಿ ಮಾರಾಟ ಮಾಡಲೂ ಬಹುದು.

ಇದೇ ರೀತಿ ಗೊಬ್ಬರ ಮತ್ತು ಕೀಟ-ಕಳೆನಾಶಕದ ಪಾಡು. ಹಾಗಾದಲ್ಲಿ ಬಳಕೆದಾರರ ಪಾಡೇನು ? ಇದು ಸಾವಯವ ಎನ್ನಲು ನಾಮದ ಬಲವೊಂದೇ ಸಾಕೆ ? ಬೇರೇನೂ ಬೇಡವೇ ?

ಕುಲಾಂತರಿ ಬೀಜಗಳ ಬಳಕೆ !

ಸಾವಯವ ಬೆಳೆಗೆ ಕುಲಾಂತರಿ ಬೀಜಗಳ ಬಳಕೆ ಮಾಡಬಾರದು ಎಂಬ ನಿಯಮವಿದೆ. ಅದರೆ, ಎಷ್ಟು ಮಂದಿ ಈ ನಿಯಮ ಪಾಲಿಸುತ್ತಾರೆ ! ಇದನ್ನು ಖತರಿ ಪಡಿಸಿಕೊಳ್ಳುವ ಮಾರ್ಗವಾದರೂ ಯಾವುದು ? ಇಲ್ಲಿ ಮಣ್ಣು ಮತ್ತು ಬೆಳೆಯ ಪರೀಕ್ಷಗೆ ಸೂಕ್ತ ಮಾನದಂಡಗಳಿಲ್ಲ ! ಹಾಗಾದಲ್ಲಿ ಸಾವಯವ ದೃಡೀಕರಣ ಪತ್ರ ಕೇವಲ ನಾಟಕವೇ ?

ಗ್ರಾಹಕರು ರೈತರ ಜಮೀನಿಗೆ ಭೇಟಿ ನೀಡಿ ಅವರು ಬೆಳೆಯುತ್ತಿರುವ ವಿಧಾನವನ್ನು ಪರಿಶೀಲಿಸಲು ಸಾಧ್ಯವೇ ? ಹಲವು ನಗರ ಪಟ್ಟಣಗಳಲ್ಲಿ ಸಾವಯವ ತರಕಾರಿಗಳನ್ನು ಮಾರುವ ಮಳಿಗೆಗಳಿವೆ. ಇಲ್ಲಿ ಬಳಕೆದಾರನಿಗೆ ಮೋಸವಾಗುವುದಿಲ್ಲವೇ ? ಅದನ್ನು ತಡೆಯುವರಾರು ? ಇಂತಹ ಮೋಸದ ವ್ಯವಹಾರಗಳಿಂದ ನೈಜ ಸಾವಯವ ಕೃಷಿಕ ಬಾಂಧವರಿಗೆ ಮೋಸವಾಗುತ್ತಿದೆ. ಸಾವಯವ ತರಕಾರಿ ಬೇಕು ಎಂಬ ಬಳಕೆದಾರನಿಗೆ ಎಲ್ಲಾ ಕೃಷಿಕರ ಮೇಲೂ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಇದನ್ನು ಸರಿ ಪಡಿಸುವವರಾರು? ಹೇಗೆ ಸರಿ ಪಡಿಸುವುದು ಎಂಬ ವಿಚಾರಗಳು ಚರ್ಚೆಯಾಗಬೇಕಿದೆ. ಅದು ಕಟ್ಟುನಿಟ್ಟಾಗಿ ಅನುಷ್ಠಾನವಾಗಬೇಕಿದೆ. ಈ ಬಗ್ಗೆ ಕೊಳ್ಳುಗರು ರೈತಾಪಿ ವರ್ಗದವರು ಎಚ್ಚರ ವಹಿಸಬೇಕಾಗಿದೆ.

ಸದ್ಯಕ್ಕೆ ಸಾವಯವ ತರಕಾರಿಯು ಬೆಳೆಗಾರನ ನೈತಿಕತೆಯನ್ನು ಅವಂಬಿಸಿಯೇ ಹೊರತು ಯಾರ ಸರ್ಟಿಫಿಕೇಟಿನ ಹಂಗಿನಲ್ಲಿ ಇಲ್ಲ.

ಗೊಬ್ಬರದಲ್ಲಿ ಗೋಲ್ಮಾಲ್ !

ಹಲವರು ಸಾವಯವ ಗೊಬ್ಬರ ಎಂದು ಯಾವುದೋ ಮಿಶ್ರಣವನ್ನು ಮನೆ- ಮನೆಗಳಿಗೆ ವಿತರಿಸುತ್ತಾರೆ. ಅದು ಯಾವ ಗೊಬ್ಬರ ಎಂದು ಮಾರುವವರಿಗೆ ತಿಳಿದಸಿರುವುದಿಲ್ಲ. ಕೊಳ್ಳುವವರಿಗೂ ಇದರ ಸುಸ್ಪಷ್ಟ ಮಾಹಿತಿಯೂ ಇರುವುದಿಲ್ಲ. ಕೆಲವರು ಮನೆಯಲ್ಲಿ ಹಸು-ಕರು ಸಾಕಲಾಗದೆ ಸಾವಯವ ಎಂಬ ಹೆಸರನ್ನು ನೋಡಿ ಇಂತಹ ಗೊಬ್ಬರ ಖರೀದಿಸುತ್ತಾರೆ. ಇಂತಹ ಮಾರಾಟಗಾರರ ಬಳಿ ಎಂದೋ ನೀಡಿದ ದೃಡೀಕರಣ ಪತ್ರದ ನಕಲು ಪ್ರತಿ ಇರುತ್ತದೆ. ಕೆಲವೊಮ್ಮೆ ಇಂತಹ ಗೊಬ್ಬರದಲ್ಲಿ ಗಾಜಿನ ಪುಡಿ, ಬಯಲು ಸೀಮೆಯ ಕಪ್ಪು ಮಣ್ಣು, ಇದ್ದಲು ಇತ್ಯಾದಿಗಳಿರುತ್ತದೆ. ಹಲವು ಕಡೆ ಸಿಮೆಂಟ್ ಪುಡಿಯನ್ನು ಮಾರಾಟ ಮಾಡುವ ಏಜೆನ್ಸಿಗಳಿದ್ದಾರೆ !

ಕೃಷಿಕ ಮಿತ್ರರು ಈ ಬಗ್ಗೆ ಎಚ್ಚರವಾಗಿದಿದ್ದಲ್ಲಿ ನಿಮಗೆ ಟೋಪಿ ಖಚಿತ !


ಇದಕ್ಕೆ ಎಲ್ಲಾ ಪರಿಹಾರ ಗೋಆದಾರಿತ ವಿಷರಹಿತ ನೈಸರ್ಗಿಕ ಕೃಷಿ !!!

Sunday 18 July 2021

ಕಾಳುಮೆಣಸಿಗೆ ಜೈವಿಕ ಗೊಬ್ಬರ

 ಬರಹ: ಕೂಡಂಡ ರವಿ, ಹೊದ್ದೂರು. 



 

 

 

 
ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹ ಎಂಬ ಜೈವಿಕ ಗೊಬ್ಬರವನ್ನು ಕಾಳು ಮೆಣಸು ಬೆಳೆಯ ಇಳುವರಿ ಹೆಚ್ಚಿಸಲು ಸಹಕಾರಿ. ಜೊತೆಗೆ ಆದ್ದರಿಂದ ಜಿಲ್ಲೆಯ ರೈತರು ಈ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ಕಾಳುಮೆಣಸಿನಲ್ಲಿ ಬಳಸಿ. ಇಳುವರಿಯನ್ನು ಹೆಚ್ಚಿಸಬಹುದಾಗಿದೆ. ಶೀಘ್ರ ಸೊರಗು ಮತ್ತು ಹಳದಿ ರೋಗವನ್ನು ಹತೋಟಿ ಮಾಡಲು ಶಿ¥s಼Áರಸ್ಸು ಮಾಡಬಹುದೆಂದು ಕೃಷಿ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ಕಾಳುಮೆಣಸಿಗೆ ಬಳಸುವುದರಿಂದ ಬಳ್ಳಿಗಳು ಹೊಸದಾಗಿ ಚಿಗುರು ಬರಲು, ಶೀಘ್ರ ಸೊರಗು ರೋಗವನ್ನು ಹತೋಟಿ ಮಾಡಲು, ಗೊಂಚಲು ಅಕಾಲಿಕವಾಗಿ ಬೀಳುವ ಸಮಸ್ಯೆಯನ್ನು ಕಡಿಮೆ ಮಾಡಲು ಮತ್ತು ಉತ್ತಮವಾಗಿ ಬೇರು ಬರಲು ಸಹಾಯವಾಗುತ್ತದೆ.
ಕಡಿಮೆ ಖರ್ಚು
ಜೈವಿಕ ಗೊಬ್ಬರಗಳು ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಗುಣ ವಿಶೇಷತೆಯಿಂದ ಪ್ರಾಮುಖ್ಯತೆಯನ್ನು ಪಡೆದಿರುತ್ತವೆೆ. ಪ್ರಸ್ತುತ ಜೈವಿಕ ಗೊಬ್ಬರಗಳ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವುದರಿಂದ, ಜೈವಿಕ ಸಂಪನ್ಮೂಲಗಳ ಮತ್ತು ತಂತ್ರಜ್ಞಾನದ ಕೊರತೆಯಿಂದಾಗಿ ಜೈವಿಕ ಗೊಬ್ಬರಗಳ ಬಳಕೆ ಕಡಿಮೆಯಾಗಿದೆ. ಈ ಕೊರತೆಯನ್ನು ನೀಗಿಸಲು ಮತ್ತು ಒಂದೇ ರೀತಿಯ ಜೈವಿಕ ಗೊಬ್ಬರಗಳ ಬಳಕೆಯಿಂದ ಉಂಟಾಗುವ ಅಧಿಕ ಖರ್ಚು ಮತ್ತು ಕಡಿಮೆ ಕಾರ್ಯಕ್ಷಮತೆಯ ನ್ಯೂನತೆಯನ್ನು ಹೋಗಲಾಡಿಸಲು ಉದ್ದೇಶಿಸಿದೆ.

 ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಜೈವಿಕ ಗೊಬ್ಬರವಾದ ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ಉತ್ಕöÈಷ್ಟ ತಂತ್ರಜ್ಞಾನದೊAದಿಗೆ ಅಭಿವೃದ್ಧಿಪಡಿಸಿದೆ. ಅರ್ಕಾ ಸೂಕ್ಷಾ÷್ಮಣು ಜೀವಿಗಳ ಗೊಬ್ಬರವು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ದೊರೆಯುವ ಈ ಗೊಬ್ಬರವನ್ನು ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್ ರೈತರಲ್ಲಿ ಮನವಿಯನ್ನು ಮಾಡಿದ್ದಾರೆ.

ಸೂಕ್ಷಾ÷್ಮಣು ಜೀವಿಗಳ ಉಪಯೋಗಗಳು
ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ (ಅಜಟೋಬ್ಯಾಕ್ಟರ್ ಟ್ರೋಪಿಕಾಲಸ್, ಬೆಸಿಲ್ಲಸ್ ಆರ್ಯಭಟ ಮತ್ತು ಸುಡೋಮೋನಾಸ್ ಥಾಯ್ವಾನೆನ್ಸಿಸ್) ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ.
ಈ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ಬಳಸುವುದರಿಂದ ಕಾಳುಮೆಣಸಿನ ಗಿಡ ಹಳದಿಯಾಗುವುದನ್ನು ತಡೆಗಟ್ಟುತ್ತದೆ. ಬೇರಿನ ಬೆಳವಣಿಗೆ ಉತ್ತಮವಾಗಿದ್ದು, ಶೀಘ್ರಸೊರಗು ರೋಗವನ್ನು ಹತೋಟಿಯಲ್ಲಿಡುತ್ತದೆ.
ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹದ ಬಳಕೆಯಿಂದ ಸಸ್ಯದ ಬೆಳವಣಿಗೆ, ರೋಗ ನಿಯಂತ್ರಣ ಮತ್ತು ಇಳುವರಿ ಅಧಿಕಗೊಳ್ಳುತ್ತದೆ.
ಜೈವಿಕ ಗೊಬ್ಬರವನ್ನು ಬೀಜೋಪಚಾರ, ಮಣ್ಣಿಗೆ, ಕೊಟ್ಟಿಗೆ ಗೊಬ್ಬರ ಮತ್ತು ಬೇವಿನ ಹಿಂಡಿಯ ಜೊತೆ ಮಿಶ್ರಣ ಮಾಡಿ. ರೈತರು ಸುಲಭವಾಗಿ ಬಳಸಬಹುದು.
ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಸೂಕ್ಷಾ÷್ಮಣು ಜೀವಿಗಳನ್ನು ಬೇರೆ ಬೇರೆಯಾಗಿ ಹಾಕುವ ಅವಶ್ಯಕತೆ ಇಲ್ಲ. ಇದನ್ನು ರೈತರು ವಿವಿಧ ಬೆಳೆಗಳಿಗೆ ಬಳಸಬಹುದು.
 ಬೀಜವು ಬೇಗ ಮೊಳೆಕೆಯೊಡೆಯುವಂತೆ ಮಾಡಿ, ಸಸ್ಯದ ಬೆಳವಣಿಗೆ ಮತ್ತು ಧೃಡತೆಯನ್ನು ಹೆಚ್ಚಿಸುತ್ತದೆ.
ಶಿಫಾರಸ್ಸು ಮಾಡಿದ ಸಾರಜನಕ ಮತ್ತು ರಂಜಕಯುಕ್ತ ಗೊಬ್ಬರಗಳಲ್ಲಿ ಶೇಕಡ ೨೫ರಷ್ಟು ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಬಳಸುವ ವಿಧಾನ
 ಮಿಶ್ರಣದೊಂದಿಗೆ: ೫ ಕೆ.ಜಿ ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ೫೦೦ ಕೆ.ಜಿ ಕೊಟ್ಟಿಗೆ ಗೊಬ್ಬರ ಅಥವಾ ೨ ಕೆ.ಜಿ ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ೧೦೦ ಕೆ.ಜಿ ಕಹಿಬೇವಿನ ಹಿಂಡಿಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ.  ಕಾಳುಮೆಣಸು ಬೆಳೆಗಳಿಗೆ ಉಪಯೋಗಿಸಬೇಕು.
ನೇರವಾಗಿ ಬೆಳೆಗಳಿಗೆ: ೪ ಕೆ.ಜಿ ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹ ಮತ್ತು ಒಂದು ಕೆ.ಜಿ ಬೆಲ್ಲವನ್ನು ೨೦೦ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ. ಗಿಡದ ಬುಡ ಭಾಗಕ್ಕೆ ನೇರವಾಗಿ (೪ ರಿಂದ ೫ ಲೀಟರ್‌ನಷ್ಟು) ಮೇ-ಜೂನ್, ಆಗಸ್ಟ್ ಮತ್ತು ನೆವೆಂಬರ್ ತಿಂಗಳಿನಲ್ಲಿ ಸುರಿಯಬೇಕು.
ಮಾಹಿತಿಗಾಗಿ ಸಂಪರ್ಕಿಸಿ: ಹಿರಿಯ ವಿಜ್ಞಾನಿ ಮತ್ತು ಮುಖ್ಯಸüರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ದೂರವಾಣಿ: ೦೮೨೭೪-೨೪೭೨೭೪.